ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಜೋ ಬೈಡನ್ ಗೆ ಶುಭ ಕೋರಿದ ಚೀನಾ

ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಜೋ ಬೈಡನ್ ಗೆ ಚೀನಾ ಸರ್ಕಾರ ಶುಭ ಕೋರಿದೆ.
ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ (ಸಂಗ್ರಹ ಚಿತ್ರ)
ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ (ಸಂಗ್ರಹ ಚಿತ್ರ)

ಶಾಂಘೈ: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಜೋ ಬೈಡನ್ ಗೆ ಚೀನಾ ಸರ್ಕಾರ ಶುಭ ಕೋರಿದೆ.

ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ತೆರಿಗೆ ಸ್ಪರ್ಧೆ ಮತ್ತು ಇತರೆ ಕಾರಣಗಳಿಂದಾಗಿ ಹದಗೆಟ್ಟಿದ್ದ ಚೀನಾ ಮತ್ತು ಅಮೆರಿಕ ಸೌಹಾರ್ಧ ಸಂಬಂಧ ಇದೀಗ ನೂತನ ಅಧ್ಯಕ್ಷ ಜೋ ಬೈಡನ್ ಅವಧಿಯಲ್ಲಿ ಪುನಃ ಸ್ಥಾಪನೆಯಾಗುವ ವಿಶ್ವಾಸವನ್ನು ಚೀನಾ ವ್ಯಕ್ತಪಡಿಸಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ವೆನ್ ಬಿನ್, ಅಮೆರಿಕ ಜನರ ಆಯ್ಕೆಯನ್ನು ನಾವು ಗೌರವಿಸುತ್ತೇವೆ. ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ನಮ್ಮ ಅಭಿನಂದನೆಗಳನ್ನು ವ್ಯಕ್ತಪಡಿಸುತ್ತೇವೆ. ಅಮೆರಿಕ ಚುನಾವಣೆಯ ಫಲಿತಾಂಶವನ್ನು ಅಲ್ಲಿನ  ಕಾನೂನುಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ ಎಂದು ಚೀನಾ ಅರ್ಥಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಚೀನಾ 'ಬೈಡನ್ ಅವರನ್ನು ವಿಜೇತರು ಎಂದು ಘೋಷಿಸುವುದನ್ನು ಗಮನಿಸಿದ್ದೇವೆ ಎಂದಷ್ಟೇ ಹೇಳಿತ್ತು. 

ಇನ್ನು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ, ಅಮೆರಿಕ ಸೇರಿದಂತೆ ವಿಶ್ವದ ನಾನಾ ದೇಶಗಳೊಂದಿಗೆ ವಾಣಿಜ್ಯ ಸ್ಪರ್ಧೆಗೆ ಇಳಿದಿದ್ದರು. ಪ್ರಮುಖವಾಗಿ ಟ್ರಂಪ್ ಕೋವಿಡ್ 19 ವಿಚಾರವಾಗಿ ಚೀನಾ ವಿರುದ್ಧ ಮುಗಿಬಿದಿದ್ದರು. ಕೊರೋನಾ ವೈರಸ್ ಅನ್ನು ನೇರವಾಗಿಯೇ ಚೀನಾ ವೈರಸ್ ಎಂದು  ಹೇಳುವ ಮೂಲಕ ಹಾಲಿ ಸಾಂಕ್ರಾಮಿಕಕ್ಕೆ ಚೀನಾ ದೇಶವೇ ನೇರ ಹೊಣೆ ಎಂದೂ ಆರೋಪಿಸಿದ್ದರು. ಅಲ್ಲದೆ ಜಾಗತಿಕ ಪ್ರಜಾಪ್ರಭುತ್ವಕ್ಕೆ ಮತ್ತು ಅಮೆರಿಕ ಮೊದಲು ನೀತಿಗೆ ಚೀನಾ ದೊಡ್ಡ ಬೆದರಿಕೆಯಾಗಿದೆ ಎಂದೂ ಹೀಗಳೆದಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com