ಪುಲ್ವಾಮಾ ಉಗ್ರ ದಾಳಿ ಮಾಡಿಸಿದ್ದು ನಾವೇ, ಇದು ಇಮ್ರಾನ್ ಖಾನ್ ಸರ್ಕಾರದ ದೊಡ್ಡ ಸಾಧನೆ: ಪಾಕ್ ಸಚಿವ

ಭಾರತದ ಗಡಿಯೊಳಗೆ ನುಗ್ಗಿ ಹೊಡೆದಿದ್ದೇವೆ. ಪುಲ್ವಾಮಾ ದಾಳಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಬಹು ದೊಡ್ಡ ಸಾಧನೆ ಎಂದು ಸಂಸತ್ತಿನಲ್ಲಿ ಪಾಕ್ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.
ಫವಾದ್ ಚೌಧರಿ-ಇಮ್ರಾನ್
ಫವಾದ್ ಚೌಧರಿ-ಇಮ್ರಾನ್

ಇಸ್ಲಾಮಾಬಾದ್: ಭಾರತದ ಗಡಿಯೊಳಗೆ ನುಗ್ಗಿ ಹೊಡೆದಿದ್ದೇವೆ. ಪುಲ್ವಾಮಾ ದಾಳಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಬಹು ದೊಡ್ಡ ಸಾಧನೆ ಎಂದು ಸಂಸತ್ತಿನಲ್ಲಿ ಪಾಕ್ ಸಚಿವ ಫವಾದ್ ಚೌಧರಿ ಹೇಳಿದ್ದಾರೆ. 

ಪುಲ್ವಾಮಾ ದಾಳಿಯ ಯೋಜನೆ ಪಾಕಿಸ್ತಾನದಲ್ಲೇ ಸಿದ್ಧವಾಗಿತ್ತು. ಹೀಗಾಗಿ ಪುಲ್ವಾಮಾ ದಾಳಿಯ ಕೀರ್ತಿ ಇಮ್ರಾನ್ ಖಾನ್ ಸರ್ಕಾರಕ್ಕೆ ನೀಡಬೇಕು ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.

ಇಮ್ರಾನ್ ಖಾನ್ ಸರ್ಕಾರ ದೇಶವನ್ನು ಯಶಸ್ಸಿನ ಪತದಲ್ಲಿ ಕೊಂಡೊಯ್ಯುವಲ್ಲಿ ವಿಫಲವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ ಹಿನ್ನೆಲೆಯಲ್ಲಿ ಸಂಸತ್ ನಲ್ಲಿ ಮಾತನಾಡಿದ ಫವಾದ್ ಚೌಧರಿ ಈ ಹೇಳಿಕೆ ನೀಡಿದ್ದಾರೆ.

ಪುಲ್ವಾಮಾ ದಾಳಿಗೆ ಪಾಕಿಸ್ತಾನ ಕುಮ್ಮಕ್ಕು ನೀಡಿದೆ ಎಂದು ಭಾರತ ಆರೋಪಿಸುತ್ತಿದ್ದರು. ಇದನ್ನು ಪಾಕ್ ನಿರಾಕರಿಸುತ್ತಾಲೇ ಬಂದಿತ್ತು. ಆದರೆ ಇದೀಗ ಪಾಕ್ ಸಂಸತ್ತಿನಲ್ಲೇ ಸಚಿವ ಫವಾದ್ ಚೌಧರಿ ರಾಜಾರೋಷವಾಗಿ ಹೇಳಿಕೆ ನೀಡಿದ್ದಾರೆ. 

2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ಯೋಧರನ್ನು ಹೊತ್ತು ಸಾಗುತ್ತಿದ್ದ ಸಿಆರ್ ಪಿಎಫ್ ವಾಹನಕ್ಕೆ ಆತ್ಮಾಹುತಿ ಬಾಂಬ್ ದಾಳಿಕೋರ ಸ್ಫೋಟಕ ತುಂಬಿದ್ದ ಕಾರನ್ನು ಗುದ್ದಿಸಿದ್ದ ಪರಿಣಾಮ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. 

ಇದಕ್ಕೆ ಪ್ರತಿಯಾಗಿ ಫೆಬ್ರವರಿ 29ರಂದು ಭಾರತೀಯ ವಾಯುಪಡೆ ಏರ್ ಸ್ಟ್ರೈಕ್ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರ ಶಿಬಿರಗಳನ್ನು ಧ್ವಂಸಗೈದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com