ಲಡಾಖ್ ಗಡಿ ಉದ್ವಿಗ್ನ: ಮಾಸ್ಕೋದಲ್ಲಿ ರಾಜನಾಥ ಸಿಂಗ್ ಮತ್ತು ಚೀನಾದ ವೀ ಫೆಂಗೆ ಮಾತುಕತೆ!

ಲಡಾಖ್ ಗಡಿ ಉದ್ವಿಗ್ನತೆ ಬಳಿಕ ಇದೇ ಮೊದಲ ಬಾರಿಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗೆ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. 
ರಾಜನಾಥ್ ಸಿಂಗ್-ವೀ ಫೆಂಗೆ ಮಾತುಕತೆ ನಡೆಸುತ್ತಿರುವ ಚಿತ್ರ
ರಾಜನಾಥ್ ಸಿಂಗ್-ವೀ ಫೆಂಗೆ ಮಾತುಕತೆ ನಡೆಸುತ್ತಿರುವ ಚಿತ್ರ

ಮಾಸ್ಕೋ: ಲಡಾಖ್ ಗಡಿ ಉದ್ವಿಗ್ನತೆ ಬಳಿಕ ಇದೇ ಮೊದಲ ಬಾರಿಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗೆ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. 

ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆ(ಎನ್ಸಿಒ) ಉಭಯ ದೇಶದ ರಕ್ಷಣಾ ಸಚಿವರು ಪರಸ್ಪರ ಭೇಟಿಯಾಗಿದ್ದು ಚರ್ಚೆ ನಡೆಸುತ್ತಿದ್ದಾರೆ. ಇನ್ನು ವಿದೇಶಿ ನೆಲದಲ್ಲಿ ಈ ಸಭೆ ನಡೆಯುತ್ತಿರುವುದರಿಂದ ಹೆಚ್ಚು ಮಹತ್ವ ಪಡೆದಿದೆ. ಭೇಟಿ ವೇಳೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. 

ಮೊದಲು ಮಾತುಕತೆ ಚೀನಾ ರಕ್ಷಣಾ ಸಚಿವರು ಆಹ್ವಾನಿಸಿದ್ದು ಈ ಮನವಿಯನ್ನು ರಾಜನಾಥ್ ಸಿಂಗ್ ಪುರಸ್ಕರಿಸಿದ್ದರು. ಈ ಹಿನ್ನಲೆಯಲ್ಲಿ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಗಡಿ ಘರ್ಷಣೆ ಕುರಿತಾದ ರಾಜತಾಂತ್ರಿಕ ಮಾತುಗಳು ನಡೆದಿದೆ ಎನ್ನಲಾಗಿದೆ. 

ಲಡಾಖ್ ಗಡಿ ಉದ್ವಿಗ್ನತೆ ಸಂದರ್ಭದಲ್ಲಿ ಉಭಯ ದೇಶದ ರಕ್ಷಣಾ ಸಚಿವರು ಮುಖಾಮುಖಿಯಾಗಿ ಚರ್ಚೆ ನಡೆಸುತ್ತಿರುವುದು ಎರಡು ದೇಶಗಳಿಗೂ ಮುಖ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com