ಭಾರತದ ಬೆನ್ನಿಗೆ ನಿಂತ ರಷ್ಯಾ: ಪಾಕಿಸ್ತಾನಕ್ಕೆ ಶಾಸ್ತ್ರಾಸ್ತ್ರ ಪೂರೈಸಲು ನಕಾರ

ಭಾರತದ ಮನವಿಗೆ ಸ್ಪಂದಿಸಿರುವ ರಷ್ಯಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಕ್ಕೆ ನಿರಾಕರಿಸಿದೆ. 
ಭಾರತದ ಬೆನ್ನಿಗೆ ನಿಂತ ರಷ್ಯಾ: ಪಾಕಿಸ್ತಾನಕ್ಕೆ ಶಾಸ್ತ್ರಾಸ್ತ್ರ ಪೂರೈಸಲು ನಕಾರ
ಭಾರತದ ಬೆನ್ನಿಗೆ ನಿಂತ ರಷ್ಯಾ: ಪಾಕಿಸ್ತಾನಕ್ಕೆ ಶಾಸ್ತ್ರಾಸ್ತ್ರ ಪೂರೈಸಲು ನಕಾರ

ಮಾಸ್ಕೋ: ಭಾರತದ ಮನವಿಗೆ ಸ್ಪಂದಿಸಿರುವ ರಷ್ಯಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಕ್ಕೆ ನಿರಾಕರಿಸಿದೆ. 

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡದೇ ಇರುವುದಕ್ಕೆ ಬದ್ಧ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗಿನ ಮಾತುಕತೆ ವೇಳೆ ರಷ್ಯಾದ ರಕ್ಷಣಾ ಸಚಿವ ಜನರಲ್ ಸೆರ್ಗೆ ಶೋಯಿಗು ಸ್ಪಷ್ಟಪಡಿಸಿದ್ದಾರೆ . 

ಶಾಂಘೈ ಸಹಕಾರ ಸಂಘ(ಎಸ್ ಸಿಒ)ದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾಗೆ ತೆರಳಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ನಡೆದ ಸಭೆಯಲ್ಲಿ ರಷ್ಯಾ-ಭಾರತ ರಕ್ಷಣಾ ಸಚಿವರು ವಿಸ್ತೃತ ಚರ್ಚೆ ನಡೆಸಿದ್ದಾರೆ. 

ರಷ್ಯಾ ರಕ್ಷಣಾ ಸಚಿವರೊಂದಿಗೆ ರಕ್ಷಣೆ, ಭದ್ರತೆಗೆ ಸಂಬಂಧಿಸಿದಂತೆ ಅತ್ಯುತ್ತಮ ಮಾತುಕತೆ ನಡೆಯಿತು, ಉಭಯ ದೇಶಗಳ ನಡುವೆ ಕಾರ್ಯತಂತ್ರ ಪಾಲುದಾರಿಕೆ ಹಾಗೂ ರಕ್ಷಣಾ ಪಾಲುದಾರಿಕೆಯನ್ನು ಗಟ್ಟಿಗೊಳಿಸುವ ಸಂಬಂಧ ಚರ್ಚೆ ನಡೆಸಲಾಯಿತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com