ಚೀನಾದ ಯುದ್ಧ ವಿಮಾನ ಸುಖೋಯ್ 35 ಹೊಡೆದುರುಳಿಸಿದ ತೈವಾನ್?, ವಿಡಿಯೋ ವೈರಲ್
ಜಗತ್ತಿನ ನಂಬರ್ ರಾಷ್ಟ್ರ ಆಗಲು ಹೊರಟಿರುವ ಚೀನಾ ತನ್ನ ನೆರೆಹೊರೆ ರಾಷ್ಟ್ರಗಳ ಮೇಲೆ ದಂಡೆತ್ತಿ ಬರುತ್ತಿದೆ. ಆದರೆ ತೈವಾನ್ ವಿಚಾರದಲ್ಲಿ ಮಾತ್ರ ಚೀನಾಗೆ ಭಾರೀ ಹಿನ್ನೆಡೆಯಾಗಿದ್ದು ಚೀನಾದ ಯುದ್ಧ ವಿಮಾನವೊಂದನ್ನು ತೈವಾನ್ ಹೊಡೆದುರುಳಿಸಿರುವುದಾಗಿ ವರದಿಯಾಗಿದೆ.
Published: 04th September 2020 07:52 PM | Last Updated: 04th September 2020 07:52 PM | A+A A-

ಕ್ಸಿ ಜಿನ್ ಪಿಂಗ್
ತೈಪೆ: ಜಗತ್ತಿನ ನಂಬರ್ ರಾಷ್ಟ್ರ ಆಗಲು ಹೊರಟಿರುವ ಚೀನಾ ತನ್ನ ನೆರೆಹೊರೆ ರಾಷ್ಟ್ರಗಳ ಮೇಲೆ ದಂಡೆತ್ತಿ ಬರುತ್ತಿದೆ. ಆದರೆ ತೈವಾನ್ ವಿಚಾರದಲ್ಲಿ ಮಾತ್ರ ಚೀನಾಗೆ ಭಾರೀ ಹಿನ್ನೆಡೆಯಾಗಿದ್ದು ಚೀನಾದ ಯುದ್ಧ ವಿಮಾನವೊಂದನ್ನು ತೈವಾನ್ ಹೊಡೆದುರುಳಿಸಿರುವುದಾಗಿ ವರದಿಯಾಗಿದೆ.
ತೈವಾನ್ ನ ಕರಾವಳಿ ಪ್ರದೇಶದ ಗುವಾಂಗ್ಸಿ ಎಂಬಲ್ಲಿ ರಷ್ಯಾ ನಿರ್ಮಿತ ಸುಖೋಯ್ 35 ವಿಮಾನ ಪತನಗೊಂಡಿದೆ. ಈ ವಿಮಾನ ಯಾವ ಕಾರಣಕ್ಕೆ ಬಿದ್ದಿದೆ ಎಂಬುದಕ್ಕೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ವಾಯುಗಡಿ ಉಲ್ಲಂಘಿಸಿ ತನ್ನ ಭೂ ಪ್ರದೇಶದಲ್ಲಿ ಹಾರಾಟ ಮಾಡಿದ್ದಕ್ಕೆ ತೈವಾನ್ ನ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎಂಬ ಅಭಿಪ್ರಾಯ ಹಂಚಿಕೊಂಡಿದೆ. ಸದ್ಯ ಯುದ್ಧ ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಸದ್ಯ ಈ ಬಗ್ಗೆ ಎರಡು ರಾಷ್ಟ್ರಗಳು ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.
#BrekingNews : #Taiwan air defence system shoots down #China #PLA - Airforce aircraft after intrusion into Taiwanese airspace. pic.twitter.com/Hs0qEOjfQK
— News Line IFE Live (@NewsLineIFE) September 4, 2020