ಸಂಪೂರ್ಣ ಪಿಒಕೆ ಖಾಲಿ ಮಾಡಿ: ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್‌ಗೆ ಭಾರತ ಖಡಕ್ ಆಗ್ರಹ!

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಡಿರುವ ಭಾಷಣ ಸುಳ್ಳು, ತಪ್ಪು ಮಾಹಿತಿ ಎಂದು ಖಂಡಿಸಿರುವ ಭಾರತ, ಆಕ್ರಮಿತ ಕಾಶ್ಮೀರವನ್ನು ಸಂಪೂರ್ಣವನ್ನು ತೆರವುಗೊಳಿಸುವಂತೆ ಆಗ್ರಹಿಸಿದೆ.
ಇಮ್ರಾನ್ ಖಾನ್-ಮೋದಿ
ಇಮ್ರಾನ್ ಖಾನ್-ಮೋದಿ

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಡಿರುವ ಭಾಷಣ ಸುಳ್ಳು, ತಪ್ಪು ಮಾಹಿತಿ ಎಂದು ಖಂಡಿಸಿರುವ ಭಾರತ, ಆಕ್ರಮಿತ ಕಾಶ್ಮೀರವನ್ನು ಸಂಪೂರ್ಣವನ್ನು ತೆರವುಗೊಳಿಸುವಂತೆ ಆಗ್ರಹಿಸಿದೆ.

ವಿಶ್ವಸಂಸ್ಥೆಯಲ್ಲಿ ಶಾಶ್ವತ ನಿಯೋಗದಲ್ಲಿನ ಭಾರತದ ಮೊದಲ ಕಾರ್ಯದರ್ಶಿ ಶ್ರೀ ಮಿಜಿತೊ ವಿನಿಟೊ, ಭಾರತದ ಹೇಳಿಕೆಯನ್ನು ಓದುವಾಗ, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲ ಪ್ರದೇಶಗಳನ್ನು ಖಾಲಿ ಮಾಡಬೇಕು ಎಂದು ಖಡಕ್ಕಾಗಿ ಹೇಳಿದ್ದಾರೆ.

ಕಾಶ್ಮೀರದಲ್ಲಿ ಉಳಿದಿರುವ ಏಕೈಕ ವಿವಾದವು ಕಾಶ್ಮೀರದ ಭಾಗಕ್ಕೆ ಸಂಬಂಧಿಸಿದೆ, ಅದು ಇನ್ನೂ ಪಾಕಿಸ್ತಾನದ ಅಕ್ರಮ ಆಕ್ರಮಣದಲ್ಲಿದೆ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲ ಪ್ರದೇಶಗಳನ್ನು ಖಾಲಿ ಮಾಡುವಂತೆ ನಾವು ಕರೆ ನೀಡುತ್ತೇವೆ ಎಂದು ವಿನಿತೋ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ತೆರವುಗೊಳಿಸುವಂತೆ ಪಾಕಿಸ್ತಾನಕ್ಕೆ ಕರೆ ನೀಡಿರುವ ಭಾರತ, ಭಯೋತ್ಪಾದನೆಗೆ ನೈತಿಕ, ಹಣಕಾಸು ಮತ್ತು ಇತರ ನೆರವು ಒದಗಿಸುವುದನ್ನು ಬಿಟ್ಟು ಸಾಮಾನ್ಯ ರಾಷ್ಟ್ರವಾಗಿರುವಂತೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com