ಯೆಮೆನ್ ನಲ್ಲಿ ದೋಣಿ ದುರಂತ: ಕನಿಷ್ಠ 42 ಜನ ಸಾವು

ಡಿಜಿಬೌಟಿ ಕರಾವಳಿಯ ಬಳಿ ಕಳ್ಳಸಾಗಾಣಿಕೆದಾರರ ದೋಣಿ ಅಪಘಾತಕ್ಕೀಡಾಗಿ ಕನಿಷ್ಠ 42 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಸನಾ: ಡಿಜಿಬೌಟಿ ಕರಾವಳಿಯ ಬಳಿ ಕಳ್ಳಸಾಗಾಣಿಕೆದಾರರ ದೋಣಿ ಅಪಘಾತಕ್ಕೀಡಾಗಿ ಕನಿಷ್ಠ 42 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ತಿಳಿಸಿದೆ.

ಕಳ್ಳಸಾಗಾಣಿಕೆದಾರರು ನಡೆಸುತ್ತಿದ್ದ ದೋಣಿ, ಸೋಮವಾರ ಮುಂಜಾನೆ ಡಿಬೌಟಿಗೆ ಹೋಗುವಾಗ ಪತನಗೊಂಡು ಕನಿಷ್ಠ 42 ಜನರು ಮೃತಪಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹಡಗು ತಲೆಕೆಳಗಾಗಿ ಮುಗುಚಿಕೊಳ್ಳಲು ನಿಖರ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ ಮಾರ್ಚ್‌ನಲ್ಲಿ ಯೆಮನ್‌ನಿಂದ ಬರುವ ವಲಸಿಗರ ಸಂಖ್ಯೆಯೂ ತಿಂಗಳು ಕಳೆದಂತೆ ಹೆಚ್ಚಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com