ಜಮ್ಮು ಕಾಶ್ಮೀರ ಕುರಿತು 2019 ಆಗಸ್ಟ್ 5ರ ನಿರ್ಧಾರ ಮರುಪರಿಶೀಲಿಸುವುದಾದರೆ ಭಾರತದೊಡನೆ ಮಾತುಕತೆ: ಪಾಕಿಸ್ತಾನ

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ 2019 ರ ಆಗಸ್ಟ್ 5 ರಂದು ಭಾರತ ಕೈಗೊಂಡ ಏಕಪಕ್ಷೀಯ ನಿರ್ಧಾರಗಳನ್ನು ಮರುಪರಿಶೀಲಿಸಲು ಸಿದ್ದವಾಗಿದ್ದರೆ ಪಾಕಿಸ್ತಾನವು ಭಾರತದೊಡನೆ ಮಾತುಕತೆಯ ಮೂಲಕ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಿದ್ದವಾಗಿದೆ ಎಂದು ಪಾಕಿಸ್ತಾನ ಹೇಳಿದೆ.
ಷಾ ಮಹಮೂದ್ ಖುರೇಷಿ
ಷಾ ಮಹಮೂದ್ ಖುರೇಷಿ
Updated on: 

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ 2019 ರ ಆಗಸ್ಟ್ 5 ರಂದು ಭಾರತ ಕೈಗೊಂಡ ಏಕಪಕ್ಷೀಯ ನಿರ್ಧಾರಗಳನ್ನು ಮರುಪರಿಶೀಲಿಸಲು ಸಿದ್ದವಾಗಿದ್ದರೆ ಪಾಕಿಸ್ತಾನವು ಭಾರತದೊಡನೆ ಮಾತುಕತೆಯ ಮೂಲಕ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಿದ್ದವಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಭಾನುವಾರ ಹೇಳಿದ್ದಾರೆ.

ಟರ್ಕಿಯ ಅನಾಡೋಲು ಏಜೆನ್ಸಿಗೆ ನೀಡಿದ ಮಾತನಾಡಿದ ಖುರೇಷಿ, "ಆಗಸ್ಟ್ 5, 2019ರಂದು ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಭಾರತವು ಪುನಃ ಪರಿಶೀಲಿಸಲು ಸಿದ್ದವಾಗಿದ್ದರೆ ಪಾಕಿಸ್ತಾನವು ಭಾರತದೊಡನೆ ಮಾತನಾಡಲು ಮತ್ತು ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಸಂತೋಷದಿಂದ ಮುಂದಾಗಲಿದೆ." ಎಂದಿದ್ದಾರೆ. ಖುರೇಷಿ ತನ್ನ ಎರಡು ದಿನಗಳ ಟರ್ಕಿ ಭೇಟಿಯಲ್ಲಿದ್ದಾರೆ.

ಆಗಸ್ಟ್ 5, 2019 ರಂದು ಪ್ರಧಾನಿ ನರೇಂದ್ರ ಮೋದಿ ಸಂವಿಧಾನದ 370 ನೇ ವಿಧಿಯನ್ನು ಮಾರ್ಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ದಿಟ್ಟ ಕ್ರಮ ಕೈಗೊಂಡಿದ್ದರು. ಅದೇ ದಿನ, ರಾಜ್ಯಸಭೆಯು ಜಮ್ಮು ಮತ್ತು ಕಾಶ್ಮೀರ ಮರುರೂಪಣೆ ಮಸೂದೆಯನ್ನು ಸಹ ಅಂಗೀಕರಿಸಿತು, ಅದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಲಾಗಿ ವಿಭಜಿಸಿತು.

ಪಾಕಿಸ್ತಾನವು ಕಾಶ್ಮೀರ, ಸಿಯಾಚಿನ್, ಸರ್ ಕ್ರೀಕ್, ನೀರು ಮತ್ತು ಇತರ ಸಣ್ಣ ಸಮಸ್ಯೆಗಳನ್ನು ಒಳಗೊಂಡಂತೆ ಭಾರತದೊಂದಿಗೆ ವಿವಾದವನ್ನಿರಿಸಿಕೊಂಡಿದೆ. ಇದೆಲ್ಲದರ ಪರಿಹಾರವೆಂದರೆ ಮಾತುಕತೆಯೊಂದೇ ಆಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. "ನಾವು ಯುದ್ಧಕ್ಕೆ ಹೋಗಲು ಸಾಧ್ಯವಿಲ್ಲ, ನಿಮಗೆ ತಿಳಿದಿದೆ, ಅದು ಪರಸ್ಪರ ನಾಶಕ್ಕೆ ಕಾರಣವಾಗಲಿದೆ.ಯಾವುದೇ ಸಂವೇದನಾಶೀಲ ವ್ಯಕ್ತಿಯು ಆ ನಿರ್ಧಾರ ತಾಳುವುದಿಲ್ಲ. ಆದ್ದರಿಂದ ಣಾವು ಮಾತುಕತೆ ನಡೆಸಬೇಕು." ಖುರೇಷಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com