ನೇಪಾಳ: ಸಂಸತ್ ನಲ್ಲಿ ವಿಶ್ವಾಸ ಮತ ಗೆದ್ದ ನೂತನ ಪ್ರಧಾನಿ ಶೇರ್ ಬಹದ್ದೂರ್ ಡಿಯುಬಾ

ಕಠ್ಮಂಡು: ನೇಪಾಳದಲ್ಲಿ ನೂತನ ಪ್ರಧಾನಿಯಾಗಿ ಜು.13 ರಂದು ಅಧಿಕಾರ ವಹಿಸಿಕೊಂಡಿದ್ದ ಶೇರ್ ಬಹದ್ದೂರ್ ಡಿಯುಬಾ ಜು.18 ರಂದು ಅಲ್ಲಿನ ಸಂಸತ್ ನಲ್ಲಿ ವಿಶ್ವಾಸ ಮತ ಗೆದ್ದಿದ್ದು ಸರ್ಕಾರವನ್ನು ಭದ್ರಪಡಿಸಿಕೊಂಡಿದ್ದಾರೆ.
275 ಸದಸ್ಯರಿದ್ದ ಪ್ರತಿನಿಧಿಗಳ ಪೈಕಿ ನೇಪಾಳಿ ಕಾಂಗ್ರೆಸ್ ನ ನಾಯಕನ ಪರವಾಗಿ 165 ಮತಗಳನ್ನು ಡಿಯುಬಾ ನೇತೃತ್ವದ ಸರ್ಕಾರ ಪಡೆದಿದೆ ಎಂದು ಹಿಮಾಲಯನ್ ಟೈಮ್ಸ್ ವರದಿ ಪ್ರಕಟಿಸಿದೆ.
249 ಶಾಸಕರು ಮತಪ್ರಕ್ರಿಯೆಯಲ್ಲಿ ಭಜಗವಹಿಸಿದ್ದರು. 83 ಸದಸ್ಯರು ಡಿಯುಬಾ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಓರ್ವ ಸದಸ್ಯ ಮಾತ್ರ ತಟಸ್ಥವಾಗಿ ಉಳಿದರು. ಸಂಸತ್ ನಲ್ಲಿ ವಿಶ್ವಾಸ ಮತ ಗೆಲ್ಲುವುದಕ್ಕೆ ಡಿಯುಬಾ ಅವರಿಗೆ 136 ಮತಗಳ ಅಗತ್ಯವಿತ್ತು.
275 ಸದಸ್ಯ ಬಲ ಹೊಂದಿರುವ ಸದನದಲ್ಲಿ ನಡೆದ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಓಲಿ ಸೋಲನ್ನನುಭವಿಸಿದ ನಂತರವೂ ಕೂಡ ಅಲ್ಪಸಂಖ್ಯಾತ ಸರ್ಕಾರವನ್ನು ಮುನ್ನಡೆಸುತ್ತಿದ್ದರು. ಇದೀಗ ಸುಪ್ರೀಂ ಕೋರ್ಟ್‌ನ ಆದೇಶದ ನಂತರ, ಡಿಯುಬಾ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


