ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ: 2027ಕ್ಕೂ ಮುನ್ನವೇ ಚೀನಾವನ್ನು ಹಿಂದಿಕ್ಕಲಿದೆ ಭಾರತ!

ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಅತಿ ಹೆಚ್ಚಿನ ಸಮಯ ಬೇಕಿಲ್ಲ ಎನ್ನುತ್ತಿದ್ದಾರೆ ಚೀನಾ ಜನಸಂಖ್ಯಾಶಾಸ್ತ್ರಜ್ಞರು.
ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ: 2027ಕ್ಕೂ ಮುನ್ನವೇ ಚೀನಾವನ್ನು ಹಿಂದಿಕ್ಕಲಿದೆ ಭಾರತ-ವರದಿ
ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ: 2027ಕ್ಕೂ ಮುನ್ನವೇ ಚೀನಾವನ್ನು ಹಿಂದಿಕ್ಕಲಿದೆ ಭಾರತ-ವರದಿ

ಬೀಜಿಂಗ್: ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಅತಿ ಹೆಚ್ಚಿನ ಸಮಯ ಬೇಕಿಲ್ಲ ಎನ್ನುತ್ತಿದ್ದಾರೆ ಚೀನಾ ಜನಸಂಖ್ಯಾಶಾಸ್ತ್ರಜ್ಞರು.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಭಾರತ 2027 ರ ವೇಳೆಗೆ ಚೀನಾವನ್ನು ಹಿಂದಿಕ್ಕಿ ಜಗತ್ತಿನ ಅತಿ ಹೆಚ್ಚಿ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮುವ ಸಾಧ್ಯತೆಗಳಿತ್ತು. ಆದರೆ ಚೀನಾದ ಜನಸಂಖ್ಯಾಶಾಸ್ತ್ರಜ್ಞರ ಪ್ರಕಾರ ವಿಶ್ವಸಂಸ್ಥೆಯ ಅಂದಾಜಿಗಿಂತಲೂ ಮುನ್ನವೇ ಭಾರತ ಈ ಸ್ಥಾನವನ್ನು ಪಡೆಯಲಿದೆ. 

ಚೀನಾದಲ್ಲಿ ಕಳೆದ ಕೆಲವು ವರ್ಷಗಳಿಂದ ಜನಸಂಖ್ಯೆ ಬೆಳವಣಿಗೆ (ಜನನ ಪ್ರಮಾಣ) ಕುಸಿತ, ವೃದ್ಧಾಪ್ಯದ ಏರಿಕೆಯನ್ನು ಕಾಣುತ್ತಿದ್ದರೆ, ಭಾರತ 2021-2050 ರ ನಡುವೆ 273 ಮಿಲಿಯನ್ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ವಿಶ್ವಸಂಸ್ಥೆ 2019 ರಲ್ಲಿ ವರದಿ ಪ್ರಕಟಿಸಿ, 2027 ರ ವೇಳೆಗೆ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಹೇಳಿತ್ತು. 

ಒಮ್ಮೆ ಚೀನಾವನ್ನು ಹಿಂದಿಕ್ಕಿದರೆ, ಭಾರತ ಈ ಶತಮಾನದ ಕೊನೆಯವರೆಗೂ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿರಲಿದೆ. 2019 ರಲ್ಲಿ ಭಾರತದಲ್ಲಿ ಅಂದಾಜು 1.37 ಬಿಲಿಯನ್ ಜನಸಂಖ್ಯೆ ಇದ್ದರೆ, ಚೀನಾದಲ್ಲಿ 1.43 ಬಿಲಿಯನ್ ಜನಸಂಖ್ಯೆ ಇದೆ. 

ದಶಕಗಳಲ್ಲಿ ಒಮ್ಮೆ ನಡೆಯುವ ಜನಗಣತಿಯ ಅಂಕಿ-ಅಂಶಗಳನ್ನು ಚೀನಾ ಬಿಡುಗಡೆ ಮಾಡಿದ್ದು, ಮುಂದಿವ ವರ್ಷದಿಂದ ಚೀನಾದ ಜನಸಂಖ್ಯೆ ಕುಸಿಯಲಿದೆ ಎಂದು ವಿಶ್ಲೇಷಿಸಿದೆ. ಚೀನಾದಲ್ಲಿನ ಜನಸಂಖ್ಯೆ ಕುಸಿತ, ವೃದ್ಧಾಪ್ಯವನ್ನು ಹೆಚ್ಚಿಸಲಿದ್ದು, ಕಾರ್ಮಿಕರ ಕೊರತೆಯನ್ನು ಉಂಟುಮಾಡಲಿದ್ದು, ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತದೆ. 

ಚೀನಾದ  ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ 2023 ಅಥವಾ 2024 ರ ವೇಳೆಗೆ ಭಾರತ ಚೀನಾವನ್ನು ಹಿಂದಿಕ್ಕಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com