ತೈಲ ಖರೀದಿಗೆ ಭಾರತದ ಬಳಿ 3,749 ಕೋಟಿ ರೂ. ಸಾಲದ ನೆರವು ಕೇಳಿದ ಶ್ರೀಲಂಕಾ
ಕೊಲಂಬೊ: ಇಂಧನ ಅಭಾವವನ್ನು ಎದುರಿಸುತ್ತಿರುವ ಶ್ರೀಲಂಕಾ ತೈಲ ಪೂರೈಕೆ ಸ್ಥಗಿತ ತಡೆಗಟ್ಟಲು ಭಾರತದ ಬಳಿ 3,749 ಕೋಟಿ ರೂ. ಸಾಲ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂಡು ಶ್ರೀಲಂಕಾ ತಿಳಿಸಿದೆ.
ಮುಂದಿನ ವರ್ಷ ಜನವರಿ ತನಕ ಶ್ರೀಲಂಕಾಗೆ ತೈಲ ಪೂರೈಕೆ ನಡೆಯಲಿದೆ. ಜನವರಿ ನಂತರ ತೈಲ ಪೂರೈಕೆ ಎಂದಿನಂತೆ ನಡೆಯಬೇಕೆಂದರೆ ಓಮನ್ ಗೆ ಇಂಧನ ಶುಲ್ಕ ಪಾವತಿಸಬೇಕಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ದೇಶ ಇಂಧನ ಶುಲ್ಕ ಭರಿಸಲು ಅಶಕ್ತವಾಗಿದೆ. ಹೀಗಾಗಿ ಭಾರತದ ನೆರವು ಕೋರಿದೆ ಎಂದು ಶ್ರೀಲಂಕಾ ಇಂಧನ ಸಚಿವ ಉದಯ ಗಮನ್ ಪಿಲಾ ಹೇಳಿದ್ದಾರೆ.
ಭಾರತದ ಇಂಡೀಯನ್ ಆಯಿಲ್ ಸಂಸ್ಥೆಯ ಅಧೀನದಲ್ಲಿರುವ ಅಲ್ಲಿನ ಲಂಕಾ ಐಒಸಿ 1 ಲೀ. ಪೆಟ್ರೋಲ್ ಹಗೂ ಡೀಸೆಲ್ ಬೆಲೆಯನ್ನು 5 ರೂ.ಗಳಿಂದ ಏರಿಸಿತ್ತು. ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಸಂಸ್ಥೆ ಮುಂದಿನ ದಿನಗಳಲ್ಲಿ ತೈಲ ದರ ಏರಿಸಲು ಚಿಂತನೆ ನಡೆಸಿದೆ.
Related Article
ನಾಗಪಟ್ಟಿಣಂ: ಗಡಿ ದಾಟಿ ಬಂದು ಭಾರತದ ಕಡಲ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಶ್ರೀಲಂಕಾ ಮೀನುಗಾರರ ಬಂಧನ
ಶ್ರೀಲಂಕಾಗೆ 150 ಟನ್ ಆಮ್ಲಜನಕ ದೇಣಿಗೆ: ಕೊರೊನಾ ಸಂಕಟ ಕಾಲದಲ್ಲಿ ಮಿತ್ರರಾಷ್ಟ್ರಕ್ಕೆ ನೆರವಾದ ಭಾರತ
ಆಹಾರ ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ
ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳ ಸೈನಿಕರಿಂದ ಕಲ್ಲು ತೂರಾಟ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ