ಕ್ವಾರಂಟೈನ್ ಉಲ್ಲಂಘಿಸಿ ಹಲವರಿಗೆ ಕೊರೊನಾ ಹರಡಿದ ವ್ಯಕ್ತಿಗೆ 5 ವರ್ಷ ಜೈಲು ಶಿಕ್ಷೆ

ಕ್ವಾರಂಟೈನ್ ನಲ್ಲಿ ಇರುವುದು ಬಿಟ್ಟು ಆರೋಪಿ, ಕೊರೊನಾ ನಿಯಮ ಉಲ್ಲಂಘಿಸಿ ಸ್ವಚ್ಛಂದವಾಗಿ ತಿರುಗಾಡಿದ್ದ. ಅವನ ಸ್ವಚ್ಛಂದ ತಿರುಗಾಟದಿಂದಾಗಿ ಹಲವರಿಗೆ ಕೊರೊನಾ ಸೋಂಕು ತಗುಲಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹನೊಯಿ: ಹಲವರಿಗೆ ಕೊರೊನಾ ಸೋಂಕು ತಗುಲಲು ಕಾರಣನಾದ ವ್ಯಕ್ತಿಗೆ ವಿಯೆಟ್ನಾಂ ನ್ಯಾಯಾಲಯ 5 ವರ್ಷ ಸೆರೆವಾಸ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಲೆ ವಾನ್ ಎಂಬಾತ ಈ ಹಿಂದೆ ಕೊರೊನಾಗೆ ತುತ್ತಾಗಿದ್ದ.

ಆ ಸಂದರ್ಭದಲ್ಲಿ ಕ್ವಾರಂಟೈನ್ ನಲ್ಲಿ ಇರುವುದು ಬಿಟ್ಟು ನಿಯಮ ಉಲ್ಲಂಘಿಸಿ ಸ್ವಚ್ಛಂದವಾಗಿ ತಿರುಗಾಡಿದ್ದ. ಅವನ ಸ್ವಚ್ಛಂದ ತಿರುಗಾಟದಿಂದಾಗಿ ಹಲವರಿಗೆ ಕೊರೊನಾ ಸೋಂಕು ತಗುಲಿತ್ತು. ಆ ಸೋಂಕಿತರಲ್ಲಿ ಓರ್ವ ಮೃತಪಟ್ಟಿದ್ದ

ಕಳೆದ ವರ್ಷಕ್ಕಿಂತಲೂ ಭೀಕರವಾಗಿ ಈಗ ಕೊರೊನಾ ಸಾಂಕ್ರಾಮಿಕ ವಿಯೆಟ್ನಾಂನಲ್ಲಿ ಜನರನ್ನು ಬಲಿಪಡೆಯುತ್ತಿದ್ದು, ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ವಿಯೆಟ್ನಾಂನಲ್ಲಿ ಕ್ವಾರಂಟೈನ್ ಉಲ್ಲಂಘನೆ ಮಾಡಿದ ಅನೇಕ ಮಂಡಿಗೆ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com