ಕೋವಿಡ್-19: ಪ್ರಸ್ತುತ ಪರಿಸ್ಥಿಯಲ್ಲಿ ನಿಮ್ಮ ನೆರವಿನ ಅಗತ್ಯವಿಲ್ಲ; ವಿಶ್ವಸಂಸ್ಥೆಗೆ ಭಾರತ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿರುವ ಭಾರತಕ್ಕೆ ನೆರವು ನೀಡುವುದಾಗಿ ಘೋಷಣೆ ಮಾಡಿದ್ದ ವಿಶ್ವಸಂಸ್ಥೆಯ ಪ್ರಸ್ತಾಪವನ್ನು ಭಾರತ ಸರ್ಕಾರ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
ವಿಶ್ವಸಂಸ್ಥೆ
ವಿಶ್ವಸಂಸ್ಥೆ

ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿರುವ ಭಾರತಕ್ಕೆ ನೆರವು ನೀಡುವುದಾಗಿ ಘೋಷಣೆ ಮಾಡಿದ್ದ ವಿಶ್ವಸಂಸ್ಥೆಯ ಪ್ರಸ್ತಾಪವನ್ನು ಭಾರತ ಸರ್ಕಾರ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ವಿಶ್ವಸಂಸ್ಥೆ ಮಾಹಿತಿ ನೀಡಿದ್ದು, 'ವಿಶ್ವ ಸಂಸ್ಥೆ  ಘೋಷಣೆ ಮಾಡಿದ್ದ ಕೋವಿಡ್-19 ಸಂಬಂಧಿತ ಸಹಾಯವನ್ನು ನಿರಾಕರಿಸಿರುವ ಭಾರತ, ತನ್ನ ದೇಶ ಅಗತ್ಯವಿರುವ ಸಾಮಗ್ರಿಗಳ ಪೂರೈಕೆಯನ್ನು ನಿರ್ವಹಿಸಲು 'ಉತ್ತಮ ವ್ಯವಸ್ಥೆ'ಯನ್ನು ಹೊಂದಿದೆ ಎಂದು ಹೇಳಿದೆ.

ಇದೇ ವಿಚಾರವಾಗಿ ಮಾತನಾಡಿದ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರ್ರೆಸ್ ಅವರು, 'ನಮ್ಮ ಇಂಟಗ್ರೇಟೆಡ್ ಸಪ್ಲೈ ಚೈನ್ ಸಹಾಯ ಅಗತ್ಯವಿದ್ದರೆ ನೀಡುವುದಾಗಿ ನಾವು  ಹೇಳಿದ್ದೆವು. ಆದರೆ ಈಗಿನ ಸಮಯ ಅದರ ಅಗತ್ಯವಿಲ್ಲ. ಏಕೆಂದರೆ ಈ ಅವಶ್ಯಕತೆ ಪೂರೈಸಲು ಭಾರತದ ಬಳಿ  ಸಾಕಷ್ಟು ಉತ್ತಮ ವ್ಯವಸ್ಥೆಯಿದೆಯೆಂದು ನಮಗೆ ಹೇಳಲಾಯಿತು. ಆದರೆ ನಮ್ಮ ಆಫರ್ ಈಗಲೂ ಇದ್ದು ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಲು ನಾವು ಸಿದ್ಧರಿದ್ದೇವೆ" ಎಂದು ಹೇಳಿದ್ದಾರೆ.

ವಿಶ್ವ ಸಂಸ್ಥೆ ಏಜನ್ಸಿಗಳಿಂದ ಯಾವುದಾದರೂ ಅಗತ್ಯ ವಸ್ತುಗಳು ಭಾರತಕ್ಕೆ ತಲುಪುವ ನಿರೀಕ್ಷೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವ ಸಂಸ್ಥೆ ಮುಖ್ಯಸ್ಥರ ಉಪ ವಕ್ತಾರ ಫರ್ಹಾನ್ ಹಖ್ ಅವರು, 'ಇಲ್ಲಿಯ ತನಕ ಯಾವುದೇ ಸಹಾಯ ಕೇಳಲಾಗಿಲ್ಲ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com