ಕೋವಿಡ್ ವೈರಸ್ ಮೂಲ ಕುರಿತ ತನಿಖೆಗೆ ಚೀನಾ ಅಡ್ಡಿ: 2ನೇ ಹಂತದ ವಿಶ್ವ ಆರೋಗ್ಯ ಸಂಸ್ಥೆ ತನಿಖೆ ತಿರಸ್ಕರಣೆ

ಜಗತ್ತಿನಾದ್ಯಂತ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮೂಲ ಪತ್ತೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆ ಪ್ರಯತ್ನಕ್ಕೆ ಚೀನಾ ಸರ್ಕಾರ ಅಡ್ಡಗಾಲು ಹಾಕಿದ್ದು. WHO ತನಿಖೆಯನ್ನು ತಿರಸ್ಕರಿಸಿದೆ.
ಕೋವಿಡ್ ತನಿಖೆ
ಕೋವಿಡ್ ತನಿಖೆ

ಬೀಜಿಂಗ್: ಜಗತ್ತಿನಾದ್ಯಂತ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮೂಲ ಪತ್ತೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆ ಪ್ರಯತ್ನಕ್ಕೆ ಚೀನಾ ಸರ್ಕಾರ ಅಡ್ಡಗಾಲು ಹಾಕಿದ್ದು. WHO ತನಿಖೆಯನ್ನು ತಿರಸ್ಕರಿಸಿದೆ.

ಈಗಾಗಲೇ ವೈರಸ್ ತವರು ಚೀನಾದ ವುಹಾನ್ ನಲ್ಲಿ ಮೊದಲ ಹಂತದ ತನಿಖೆ ನಡೆಸಿರುವ ವಿಶ್ವ ಆರೋಗ್ಯ ಸಂಸ್ಥೆ ಇದೀಗ 2ನೇ ಹಂತದ ತನಿಖೆಗೆ ಸಿದ್ಧತೆ ನಡೆಸಿರುವಂತೆಯೇ ಇತ್ತ ಚೀನಾ ಸರ್ಕಾರ ಮಾತ್ರ ತನಿಖೆಗೆ ಅಡ್ಡಗಾಲು ಹಾಕಿದೆ.  ಕೊರೊನಾ ವೈರಸ್‌ ಸೋಂಕಿನ ಮೂಲಗಳ ಬಗ್ಗೆ ಹೊಸದಾಗಿ ತನಿಖೆ ನಡೆಸಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆಯ ಕರೆಗಳನ್ನು ಚೀನಾ ಶುಕ್ರವಾರ ತಿರಸ್ಕರಿಸಿದ್ದು, ಕೊರೊನಾ ವೈರಸ್‌ ಸೋಂಕು ಹೇಗೆ ಆರಂಭವಾಯಿತು ಎಂಬುದನ್ನು ಕಂಡುಹಿಡಿಯಲು "ರಾಜಕೀಯ" ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದೆ.

ಕೊರೊನಾ ವೈರಸ್‌ ಸೋಂಕು ವಿಶ್ವದಲ್ಲಿ ಮೊದಲ ಬಾರಿಗೆ ಚೀನಾದ ವುಹಾನ್‌ನಲ್ಲಿ ಪತ್ತೆಯಾಗಿದ್ದು ವಿಶ್ವದಾದ್ಯಂತ ನಾಲ್ಕು ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ಈ ನಡುವೆ ಕೊರೊನಾ ವೈರಸ್‌ ಸೋಂಕಿನ ಉಗಮದ ಬಗ್ಗೆ ತನಿಖೆ ನಡೆಸಬೇಕು ಎಂಬ ಒತ್ತಾಯಗಳು ಹೆಚ್ಚುತ್ತಿದೆ. ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್‌ ಟ್ರಂಪ್‌ ಚೀನಾದ ವುಹಾನ್‌ ಲ್ಯಾಬ್‌ನಿಂದಲ್ಲೇ ಈ ಕೊರೊನಾ ವೈರಸ್‌ ಸೋಂಕು ಹೊರಹೊಮ್ಮಿದೆ ಎಂದು ಆರೋಪ ಮಾಡಿದ ಬೆನ್ನಲ್ಲೇ ಈ ಬಗ್ಗೆ ಅಧ್ಯಯನಗಳು ಅಧಿಕವಾಗಿದೆ. ಅಲ್ಲದೆ ಅಮೆರಿಕ ಅಧ್ಯಕ್ಷ  ಜೋ ಬೈಡನ್ ಕೂಡ ತಮ್ಮ ಗುಪ್ತಚರ ಸಂಸ್ಥೆಗಳಿಗೆ ವೈರಸ್ ಮೂಲದ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದರು.

ಅಲ್ಲದೆ ಜಗತ್ತಿನ ಸಾಕಷ್ಟು ಸಂಸ್ಥೆಗಳು ವೈರಸ್ ಮೂಲದ ಕುರಿತು ಸ್ವತಂತ್ರ್ಯ ತನಿಖೆ ಕೈಗೊಂಡಿವೆ. ಇದರ ನಡುವೆ ಈಗ ಮತ್ತೆ ಕೊರೊನಾ ವೈರಸ್‌ ಸೋಂಕಿನ ಮೂಲಗಳ ಬಗ್ಗೆ ಹೊಸದಾಗಿ ತನಿಖೆ ನಡೆಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದ್ದು, ಇದು ಬೀಜಿಂಗ್‌ ಮೇಲೆ ಮತ್ತೆ ಒತ್ತಡವನ್ನು ಹೇರಿದೆ. ಆದರೆ ಚೀನಾ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಕೊರೊನಾ ವೈರಸ್‌ ಆರಂಭದ ಬಗ್ಗೆ ತನಿಖೆ ನಡೆಸಿದರೆ ರಾಜಕೀಯ ತಿರುವುಗಳನ್ನು ವಿನಾ ಕಾರಣ ಪಡೆದುಕೊಳ್ಳುತ್ತದೆ ಎಂದು ಸ್ಪಷ್ಟವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಕರೆಯನ್ನು ತಳ್ಳಿಹಾಕಿದೆ.

ಮತ್ತೆ ತನಿಖೆ ಬೇಡ
ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಕೊರೊನಾ ವೈರಸ್‌ ಉಗಮದ ಬಗ್ಗೆ ತನಿಖೆ ನಡೆಸಲು ಮುಂದಾದ ಹಿನ್ನೆಲೆ ಆರಂಭದ ತನಿಖೆ ಸಾಕು ಮತ್ತು ವೈಜ್ಞಾನಿಕ ವಿಚಾರಣೆಯ ಬದಲು ಹೆಚ್ಚಿನ ದತ್ತಾಂಶಗಳ ಕರೆಗಳು ರಾಜಕೀಯದಿಂದ ಪ್ರೇರಿತವಾಗಿವೆ ಎಂದು ಚೀನಾ ತನ್ನ ನಿಲುವನ್ನು ಪುನರಾವರ್ತಿಸಿತು. ಜನವರಿಯಲ್ಲಿ ಡಬ್ಲ್ಯುಎಚ್‌ಒ ತಜ್ಞರ ತಂಡದ ವುಹಾನ್ ಭೇಟಿಯ ನಂತರ ಉಪ ವಿದೇಶಾಂಗ ಸಚಿವ ಮಾ ಝೋಜು ಸುದ್ದಿಗಾರರೊಂದಿಗೆ ಮಾತನಾಡಿ, "ನಾವು ರಾಜಕೀಯ ಪತ್ತೆಹಚ್ಚುವಿಕೆಯನ್ನು ವಿರೋಧಿಸುತ್ತೇವೆ. ಆದರೆ ನಾವು ವೈಜ್ಞಾನಿಕ ಪತ್ತೆಹಚ್ಚುವಿಕೆಯನ್ನು ಬೆಂಬಲಿಸುತ್ತೇವೆ," ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com