ಅಮೆರಿಕ ರಾಜ್ಯ ಸರ್ಕಾರಿ ಇಲಾಖೆ ಮೇಲೆ ಸೈಬರ್ ದಾಳಿ

ಅಮೆರಿಕ ರಾಜ್ಯ ಸರ್ಕಾರಿ ಇಲಾಖೆ ಮೇಲೆ ಸೈಬರ್ ದಾಳಿ ನಡೆದಿದ್ದು, ಇದರ ಜೊತೆಗೇ ಸಂಭಾವ್ಯ ಗಂಭೀರ ಉಲ್ಲಂಘನೆಯ ಸೂಚನೆಗಳನ್ನು ರಕ್ಷಣಾ ಸೈಬರ್ ಕಮಾಂಡ್ ಇಲಾಖೆಯಿಂದ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೈಬರ್ ದಾಳಿ
ಸೈಬರ್ ದಾಳಿ

ವಾಷಿಂಗ್ಟನ್: ಅಮೆರಿಕ ರಾಜ್ಯ ಸರ್ಕಾರಿ ಇಲಾಖೆ ಮೇಲೆ ಸೈಬರ್ ದಾಳಿ ನಡೆದಿದ್ದು, ಇದರ ಜೊತೆಗೇ ಸಂಭಾವ್ಯ ಗಂಭೀರ ಉಲ್ಲಂಘನೆಯ ಸೂಚನೆಗಳನ್ನು ರಕ್ಷಣಾ ಸೈಬರ್ ಕಮಾಂಡ್ ಇಲಾಖೆಯಿಂದ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ರಾಜ್ಯ ಇಲಾಖೆ ಮೇಲೆ ಸೈಬರ್ ದಾಳಿಯಾಗಿದ್ದು, ಈ ಕುರಿತಂತೆ ರಕ್ಷಣಾ ಸೈಬರ್ ಕಮಾಂಡ್ ಇಲಾಖೆ ಎಚ್ಚರಿಕೆ ನೀಡಿದ್ದು ದಾಳಿಯ ವ್ಯಾಪ್ತಿ ಮತ್ತು ದಾಳಿಯ ಹಿಂದಿನ ದುಷ್ಕರ್ಮಿಗಳು ಸ್ಪಷ್ಟವಾಗಿಲ್ಲ ಎಂದು ಹೇಳಿದೆ. 

ಇನ್ನು ದಾಳಿಯಿಂದಾಗಿ ಇಲಾಖೆಯ ಕಾರ್ಯಾಚರಣೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಿದೆ ಎಂಬುದು ತಿಳಿದುಬಂದಿಲ್ಲ.   

"ಇಲಾಖೆಯು ತನ್ನ ಮಾಹಿತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಎಲ್ಲ ಮಾಹಿತಿಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಭದ್ರತಾ ಕಾರಣಗಳಿಗಾಗಿ, ಈ ಸಮಯದಲ್ಲಿ ಯಾವುದೇ ಆಪಾದಿತ ಸೈಬರ್ ಭದ್ರತಾ ಘಟನೆಗಳ ಸ್ವರೂಪ ಅಥವಾ ವ್ಯಾಪ್ತಿಯನ್ನು ನಾವು ಚರ್ಚಿಸುವ ಸ್ಥಿತಿಯಲ್ಲಿಲ್ಲ ಎಂದು ಇಲಾಖೆಯ ವಕ್ತಾರರು ಫಾಕ್ಸ್ ನ್ಯೂಸ್‌ಗೆ ತಿಳಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com