
ನವದೆಹಲಿ: ತಾಲಿಬಾನ್ ಗೆ ಬೆದರಿ ದೇಶ ತೊರೆದು ಭಾರತಕ್ಕೆ ಆಗಮಿಸಿದ್ದ ಅಫ್ಘಾನಿಸ್ತಾನ ನಾಗರೈಕರ ಪೈಕಿ ಕನಿಷ್ಟ ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಸೋಮವಾರ ಮತ್ತು ಮಂಗಳವಾರ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದ ಆಫ್ಘನ್ ನಾಗರಿಕರಿಗೆ ಸೋಂಕು ಪತ್ತೆ ಪರೀಕ್ಷೆ ಕೈಗೊಳ್ಳಲಾಗಿತ್ತು. 81 ಮಂದಿ ಆಫ್ಘನ್ ನಾಗರಿಕರು ಎರಡು ದಿನಗಳ ಅವಧಿಯಲ್ಲಿ ಭಾರತಕ್ಕೆ ಬಂದಿಳಿದಿದ್ದರು ಎಂದು ಐಟಿಬಿಪಿ ಗಡಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕು ಪತ್ತೆಯಾಗಿರುವ ಆಫ್ಗನ್ ನಾಗರಿಕರನ್ನು ದಕ್ಷಿಣ ದೆಹಲಿಯ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಫ್ಘಾನಿಸ್ತಾನದಿಂದ ಬರುವ ಎಲ್ಲರೂ ಕಡ್ಡಾಯವಾಗಿ ೧೪ ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಸೋಂಕು ಪತ್ತೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರನ್ನು ಕೊರೊನಾ ಶುಸ್ರೂಷಾ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಇದೇ ವೇಳೆ ಅಫ್ಘಾನಿಸ್ತಾನದಿಂದ ಬಂದಿದ್ದ ಇಬ್ಬರು ಭಾರತೀರಿಗೆ ಸೋಂಕು ತಗುಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ನಿಂದ ಹೊರಟಿದ್ದ ಯುಕ್ರೇನ್ ವಿಮಾನ ಇರಾನ್ ಗೆ ಹೈಜಾಕ್!
ತಾಲಿಬಾನ್ ಗೆ ಪಾಕಿಸ್ತಾನ ಬೆಂಬಲ; ಭಾರತ ನಮ್ಮ ನಿಜವಾದ ಮಿತ್ರ: ಆಫ್ಘನ್ ಪಾಪ್ ಗಾಯಕಿ
ಇಂಧನ ಪೂರೈಸುವಂತೆ ಇರಾನ್ ಗೆ ತಾಲಿಬಾನ್ ಮನವಿ
ತಾಲಿಬಾನ್ ನಿಂದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ನೇಮಕ
ತಾಲಿಬಾನ್ ವಿರೋಧಿ ಬಣ ಹೋರಾಟಕ್ಕೆ ಸಜ್ಜು: ಮುಜಾಹಿದೀನ್ ಕಮಾಂಡರ್ ಪುತ್ರನಿಂದ ಹೊಸ ಸಂಘಟನೆ
Advertisement