ಇಮ್ರಾನ್ ಖಾನ್ ಸರ್ಕಾರದೊಡನೆ ಕದನವಿರಾಮ ಅಂತ್ಯ: ಪಾಕ್ ತಾಲಿಬಾನ್ ಘಟಕ ತೆಹ್ರೀಕ್ ಇ ತಾಲಿಬಾನ್ ಘೋಷಣೆ

ಕದನವಿರಾಮ ಒಪ್ಪಂದ ಮುರಿದುಬೀಳಲು ಸಂಘಟನೆಯ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇರುವುದೇ ಕಾರಣ ಎನ್ನಲಾಗಿದೆ. ಪಾಕ್ ನಲ್ಲಿ ವಿಧ್ವಂಸಕ ಕೃತ್ಯ ಮುಂದುವರಿಸಲು ಉಗ್ರನಾಯಕ ಕರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರಾಚಿ: ತಾಲಿಬಾನ್ ಉಗ್ರಸಂಘಟನೆಯ ಪಾಕಿಸ್ತಾನ ಘಟಕ ತೆಹ್ರೀಕ್ ಇ ತಾಲಿಬಾನ್ ಪಾಕ್ ಸರ್ಕಾರದ ಜೊತೆ ಇದುವರೆಗೂ ಚಾಲ್ತಿಯಲ್ಲಿದ್ದ ಕದನವಿರಾಮಕ್ಕೆ ಅಂತ್ಯ ಹಾಡಲು ನಿರ್ಧರಿಸಿರುವುದಾಗಿ ಘೋಷಿಸಿದೆ. 

ದೇಶದಲ್ಲಿ ಶಾಂತಿ ಸ್ಥಾಪನೆ ಸಲುವಾಗಿ ಶ್ರಮಿಸುತ್ತಿರುವ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇದರಿಂದ ಹಿನ್ನಡೆ ಉಂಟಾಗಿದೆ. ಕಳೆದ 14 ವರ್ಷಗಳಲ್ಲಿ ಪಾಕ್ ನಲ್ಲಿ ನಡೆದ  ಹಲವು ದಾಳಿ ಘಟನೆಗಳ ಹಿಂದೆ ತೆಹ್ರೀಕ್ ಇ ತಾಲಿಬಾನ್ ಕೈವಾಡ ಇರುವುದಾಗಿ ಆರೋಪ ಕೇಳಿಬಂದಿತ್ತು. 

ನವೆಂಬರ್ 1 ರಿಂದ ಪಾಕ್ ಸರ್ಕಾರ ಮತ್ತು ತೆಹ್ರೀಕ್ ಇ ತಾಲಿಬಾನ್ ನಡುವೆ ಕದನವಿರಾಮ ಏರ್ಪಟ್ಟಿತ್ತು. ಈ ಕದನವಿರಾಮ ಒಪ್ಪಂದ ಮುರಿದುಬೀಳಲು ಸಂಘಟನೆಯ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇರುವುದೇ ಕಾರಣ ಎನ್ನಲಾಗಿದೆ. ಪಾಕ್ ನಲ್ಲಿ ವಿಧ್ವಂಸಕ ಕೃತ್ಯ ಮುಂದುವರಿಸಲು ಉಗ್ರನಾಯಕ ಕರೆ ನೀಡಿರುವ ಧ್ವನಿಸುರುಳಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com