ಚೀನಾ ವಿರೋಧಿ ಹಾಂಗ್ ಕಾಂಗ್ ಪತ್ರಿಕೋದ್ಯಮಿಗೆ ಜೈಲು: ಅಂತಾರಾಷ್ತ್ರೀಯ ಸಮುದಾಯ ಆಕ್ರೋಶ

ಹಾಂಗ್ ಕಾಂಗನ್ನು ಚೀನಾದ ಬಿಗಿಮುಷ್ಟಿಯಿಂದ ಬಿಡಿಸಿ, ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದು ಅವರು ಆಗ್ರಹಿಸಿದ್ದರು. ಜಿಮ್ಮಿ ಲಾಯ್ ಅವರನ್ನು ದೇಶ ದ್ರೋಹದ ಆರೋಪದಡಿ ಬಂಧಿಸಲಾಗಿತ್ತು.
ಜಿಮ್ಮಿ ಲಾಯ್
ಜಿಮ್ಮಿ ಲಾಯ್

ಹಾಂಗ್ ಕಾಂಗ್: ಹಾಂಗ್ ಕಾಂಗ್ ನ ಪ್ರಭಾವಿ ಪತ್ರಿಕೋದ್ಯಮಿ, ಚೀನಾ ವಿರೋಧಿ ಸಾಮಾಜಿಕ ಹೋರಾಟಗಾರ ಜಿಮ್ಮಿ ಲಾಯ್ ಅವರಿಗೆ ನ್ಯಾಯಾಲಯ 13 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ. 

ಜಿಮ್ಮಿ ಲಾಯ್ ಅವರು ಪ್ರಜಾಪ್ರಭುತ್ವ ಪರ ದನಿಯೆತ್ತಿದ್ದರು. ಅಲ್ಲದೆ ಆ ನಿಟ್ಟಿನಲ್ಲಿ ಹಲವು ಹೋರಾಟಗಳಲ್ಲಿ ಭಾಗಿಯಾಗಿ ಚೀನಾದ ಕೆಂಗಣ್ಣಿಗೆ ಗುರಿಯಾಗಿದ್ದರು.

ಹಾಂಗ್ ಕಾಂಗನ್ನು ಚೀನಾದ ಬಿಗಿಮುಷ್ಟಿಯಿಂದ ಬಿಡಿಸಿ, ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದು ಅವರು ಆಗ್ರಹಿಸಿದ್ದರು. ಜಿಮ್ಮಿ ಲಾಯ್ ಅವರನ್ನು ದೇಶ ದ್ರೋಹದ ಆರೋಪದಡಿ ಬಂಧಿಸಲಾಗಿತ್ತು.

ಈ ಹಿಂದೆ ಜಿಮ್ಮಿ ನಡೆಸುತ್ತಿದ್ದ ಆಪಲ್ ಡೈಲಿ ಪತ್ರಿಕೆಯನ್ನು ಚೀನಾ ಬೆಂಬಲಿತ ಹಾಂಗ್ ಕಾಂಗ್ ಸರ್ಕಾರ ಮುಚ್ಚಿಸಿತ್ತು. ಜಿಮ್ಮಿ ಲಾಯ್ ಪರ ಅಂತಾರಾಷ್ಟ್ರೀಯ ಸಮುದಾಯ ದನಿಯೆತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com