The New Indian Express
ಬೀಜಿಂಗ್: ವಾಯುಮಾಲಿನ್ಯ ಹೆಚ್ಚಳದಿಂದಾಗಿ ಚೀನಾದ ಹೆದ್ದಾರಿಗಳು, ಆಟದ ಮೈದಾನಗಳು ಸ್ಥಗಿತಗೊಂಡಿವೆ. ಇತ್ತೀಚಿಗಷ್ಟೆ ಜಾಗತಿಕವಾಗಿ ವಾಯುಮಾಲಿನ್ಯ ಹೆಚ್ಚಳ ಕಂಡಿರುವ ವರದಿ ಪ್ರಕಟಗೊಂಡಿತ್ತು. ಅದರಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ಚೀನ ಅತ್ಯಧಿಕ ಕಾಣಿಕೆಯಿತ್ತಿರುವುದು ಕಂಡುಬಂದಿತ್ತು.
ಇದನ್ನೂ ಓದಿ: 2035 ರೊಳಗೆ ಚೀನಾ 1,000 ಪರಮಾಣು ಸಿಡಿತಲೆ ಸಜ್ಜುಗೊಳಿಸುವ ಸಾಧ್ಯತೆ: ಪೆಂಟಗನ್ ವರದಿ ಎಚ್ಚರಿಕೆ
ಕೆಲ ದಿನಗಳ ಹಿಂದಷ್ಟೆ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲು ಸ್ಕಾಟ್ ಲೆಂಡಿನಲ್ಲಿ COP26 ಸಭೆ ಕರೆಯಲಾಗಿತ್ತು. ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳ ನಾಯಕರು ಅದರಲ್ಲಿ ಪಾಲ್ಗೊಂಡಿದ್ದರು. ಆದರೆ ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.
ಇದನ್ನೂ ಓದಿ: ಪಾಕಿಸ್ತಾನ-ಚೀನಾ ಗಡಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ: ಸಚಿವ ಅಜಯ್ ಭಟ್
ಇದೀಗ ಚೀನಾದಲ್ಲಿ ಹೆಚ್ಚಿರುವ ವಾಯುಮಾಲಿನ್ಯಕ್ಕೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾರಣ ಎಂದು ಚೀನಾ ಅಧಿಕಾರಿಗಳು ತೇಪೆ ಹಚ್ಚಲು ಯತ್ನಿಸಿದ್ದಾರೆ. ಆದರೆ ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೊರೊನಾ ಪೂರ್ವ ಕಾಲಕ್ಕೆ ಮರಳಿದ ಜಾಗತಿಕ ಮಾಲಿನ್ಯ ಪ್ರಮಾಣ: ಚೀನಾ ಪಾಲು ಹೆಚ್ಚು!