ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಶೀತಲ ಸಮರ: ಚೀನಾ ಅಧ್ಯಕ್ಷ ಎಚ್ಚರಿಕೆ

ಇತ್ತೀಚಿಗಷ್ಟೆ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯ ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಹೊಸ ಒಕ್ಕೂಟ ಸ್ಥಾಪನೆ ಕುರಿತಾಗಿ ಚರ್ಚೆ ನಡೆಸಿದ್ದವು. ಅದರ ಬೆನ್ನಲ್ಲೇ ಶಿ ಜಿನ್ಪಿಂಗ್ ಈ ಎಚ್ಚರಿಕೆ ನೀಡಿದ್ದಾರೆ. 
ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್
ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್

ಬೀಜಿಂಗ್: ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಶೀತಲ ಸಮರ ಏರ್ಪಡುವ ಎಚ್ಚರಿಕೆಯನ್ನು ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ನೀಡಿದ್ದಾರೆ. 

ಇತ್ತೀಚಿಗಷ್ಟೆ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯ ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಹೊಸ ಒಕ್ಕೂಟ ಸ್ಥಾಪನೆ ಕುರಿತಾಗಿ ಚರ್ಚೆ ನಡೆಸಿದ್ದವು. ಅದರ ಬೆನ್ನಲ್ಲೇ ಶಿ ಜಿನ್ಪಿಂಗ್ ಈ ಎಚ್ಚರಿಕೆ ನೀಡಿದ್ದಾರೆ. 

ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಆಸ್ಟ್ರೇಲಿಯ ಪರಮಾಣುಚಾಲಿತ ಸಬ್ ಮರೈನ್ ಅಭಿವೃದ್ಧಿ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಇದನ್ನು ಚೀನಾ ಕಟುವಾಗಿ ವಿರೋಧಿಸಿದೆ. 

ವ್ಯಾಪಾರ ಸಂಬಂಧ ಪೆಸಿಫಿಕ್ ನಲ್ಲಿನ ಮಾರ್ಗಗಳನ್ನು ಸದಾ ಕಾರ್ಯಾಚರಿಸುವಂತೆ ನೋಡಿಕೊಳ್ಲಬೇಕು. ಇಲ್ಲವಾದರೆ ಅದರಿಂದಾಗಿ ವ್ಯಾಪಾರ ಮಾರ್ಗಗಳು ಮುಚ್ಚಿ ದೇಶಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗುವುದಾಗಿ ಚೀನಾ ಅಧ್ಯಕ್ಷ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com