ಎಸ್400 ಒಪ್ಪಂದ: ಭಾರತಕ್ಕೆ ಕಾಟ್ಸಾದಿಂದ ವಿನಾಯಿತಿ ನೀಡುವ ಕುರಿತು ಇನ್ನೂ ನಿರ್ಧರಿಸಿಲ್ಲ; ಅಮೆರಿಕಾ

ಭಾರತವು ರಷ್ಯಾದಿಂದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ವಿರೋಧಿ ನಡೆ ಅನುಸರಿಸುವ ರಾಷ್ಟ್ರಗಳ ಮೇಲೆ ವಿಧಿಸುವ CAATSA ಅಥವಾ ಕಾಟ್ಸಾ ಕಾಯ್ದೆಯನ್ನು ಭಾರತಕ್ಕೆ ವಿಧಿಸದಿರಲು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.
ಎಸ್ 400
ಎಸ್ 400

ವಾಷಿಂಗ್ಟನ್: ಭಾರತವು ರಷ್ಯಾದಿಂದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ವಿರೋಧಿ ನಡೆ ಅನುಸರಿಸುವ ರಾಷ್ಟ್ರಗಳ ಮೇಲೆ ವಿಧಿಸುವ CAATSA ಅಥವಾ ಕಾಟ್ಸಾ ಕಾಯ್ದೆಯನ್ನು ಭಾರತಕ್ಕೆ ವಿಧಿಸದಿರಲು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.

ಭಾರತವು ರಷ್ಯಾದಿಂದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ವೀಕರಿಸಲು ಪ್ರಾರಂಭಿಸಿದ ಒಂದು ವಾರದ ನಂತರ ಅಮೆರಿಕಾದಿಂದ ಈ ಹೇಳಿಕೆ ಬಂದಿದೆ.  ಭಾರತದ ಮೇಲೆ ಕಾಟ್ಸಾ ನಿರ್ಬಂಧಗಳನ್ನು ವಿಧಿಸದಂತೆ ಅಮೆರಿಕ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಸಂಸದರು ಬೈಡನ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಬೆನ್ನಲ್ಲೇ ಅಮೆರಿಕದ ವಿದೇಶಾಂಗ ಇಲಾಖೆ ಈ ರೀತಿಯ ಹೇಳಿಕೆ ನೀಡಿದೆ.

ರಷ್ಯಾದೊಂದಿಗೆ ನಮ್ಮ ಪಾಲುದಾರ ದೇಶಗಳು ಯಾವುದೇ ವಹಿವಾಟು ನಡೆಸದಂತೆ ನಾವು ನಿರ್ಬಂಧ ಹೇರಿದ್ದೇವೆ. ಭಾರತದ ವಿಚಾರದಲ್ಲಿ ಎಸ್ ​- 400 ವಿಚಾರಕ್ಕೆ ಬರುವುದಾದರೆ ನಾವಿನ್ನೂ ಸ್ಪಷ್ಟವಾಗಿದ್ದೇವೆ. ಭಾರತದ ಮೇಲೆ ನಿರ್ಬಂಧ ವಿಧಿಸುವ CAATSA ಕಾಯ್ದೆಯನ್ನು ಭಾರತದ ವಿಚಾರದಲ್ಲಿ ಮನ್ನಾ ಮಾಡಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ಯುಎಸ್ ನ ಸಂಸತ್​ನ ಹಲವು ಸದಸ್ಯರು ಈ ಬಗ್ಗೆ ಕಾಳಜಿ ವಹಿಸಿದ್ದಾರೆ. ನಾವು ಭಾರತದೊಂದಿಗಿನ ಪಾಲುದಾರಿಕೆಯನ್ನು ಖಂಡಿತವಾಗಿಯೂ ಗೌರವಿಸುತ್ತೇವೆ. ಆಗಸ್ಟ್‌ನಲ್ಲಿ ವಿದೇಶಾಂಗ ಮಂತ್ರಿ ಜೈಶಂಕರ್ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಕೆಲವು ವಿಚಾರಗಳ ಬಗ್ಗೆ ನೇರವಾಗಿ ಚರ್ಚೆ ನಡೆಸಲಾಗಿದೆ ಎಂದು ನೆಡ್ ಪ್ರೈಸ್ ಸ್ಪಷ್ಟನೆ ನೀಡಿದ್ದಾರೆ.

ಭಾರತದೊಂದಿಗೆ ತನ್ನ 'ಕಾರ್ಯತಂತ್ರದ ಪಾಲುದಾರಿಕೆ'ಯನ್ನು ಅಮೆರಿಕಾ ಗೌರವಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com