ನುರಿತ ವಲಸಿಗರು, ವಿದೇಶಿ ವಿದ್ಯಾರ್ಥಿಗಳಿಗೆ ಆದ್ಯತೆ; 2022 ವರೆಗೆ ಪ್ರವಾಸಿಗರಿಗೆ ಇಲ್ಲ ಆಸ್ಟ್ರೇಲಿಯಾ ಪ್ರವಾಸ

ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲು ಯೋಜಿಸುತ್ತಿರುವ ಪ್ರವಾಸಿಗರಿಗೆ 2022 ವರೆಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅಲ್ಲಿನ ಪ್ರಧಾನಿ ತಿಳಿಸಿದ್ದಾರೆ. 
ಸ್ಕಾಟ್ ಮೊರಿಸನ್
ಸ್ಕಾಟ್ ಮೊರಿಸನ್

ಕ್ಯಾನ್ಬೆರ್ರಾ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲು ಯೋಜಿಸುತ್ತಿರುವ ಪ್ರವಾಸಿಗರಿಗೆ 2022 ವರೆಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅಲ್ಲಿನ ಪ್ರಧಾನಿ ತಿಳಿಸಿದ್ದಾರೆ. 

ಆದರೆ ಉದ್ಯೋಗಕ್ಕೆ ಸಂಬಂಧಿಸಿದಂತೆ ನುರಿತ ವಲಸಿಗರಿಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಸ್ಕಾಟ್ ಮೊರಿಸ್ಸನ್ ತಿಳಿಸಿದ್ದಾರೆ. 

16 ಹಾಗೂ ಮೇಲ್ಪಟ್ಟ ವಯಸ್ಸಿನ ಜನಸಂಖ್ಯೆಯ ಶೇ.80 ರಷ್ಟು ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದ್ದು, ಆಸ್ಟ್ರೇಲಿಯಾದಲ್ಲಿ ಕೋವಿಡ್-19 ನಿರ್ಬಂಧಗಳನ್ನು ಕ್ರಮೇಣ ಸಡಿಲಿಕೆ ಮಾಡಲಾಗುತ್ತಿದೆ.

ಲಸಿಕೆ ಪಡೆದ ಪ್ರಜೆಗಳು ಹಾಗೂ ಶಾಶ್ವತ ನಿವಾಸಿಗಳಿಗೆ ನವೆಂಬರ್ ನಿಂದ ವಿದೇಶಕ್ಕೆ ತೆರಳುವುದಕ್ಕೆ ಅನುವು ಮಾಡಿಕೊಡುವ ಯೋಜನೆಯನ್ನು ಆಸ್ಟ್ರೇಲಿಯಾ ಸರ್ಕಾರ ಕಳೆದ ವಾರ ಪ್ರಕಟಿಸಿತ್ತು.

ಆಸ್ಟ್ರೇಲಿಯನ್ನರ ನಂತರದ ಆದ್ಯತೆ ವಿದೇಶದಿಂದ ಆಸ್ಟ್ರೇಲಿಯಾಗೆ ಬರುವ ಉದ್ಯೋಗಗಳಲ್ಲಿ ನುರಿತ ವಲಸಿಗರು ಹಾಗೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇರಲಿದೆ. 2022 ವರೆಗೆ ಪ್ರವಾಸಿಗರಿಗೆ ಆಸ್ಟ್ರೇಲಿಯಾಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. 

ಕೋವಿಡ್-19 ಕಾರಣದಿಂದಾಗಿ ಆಸ್ಟ್ರೇಲಿಯಾಗೆ ವಲಸಿ ಬರುವವರ ಸಂಖ್ಯೆ 2ನೇ ವಿಶ್ವಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಕುಸಿತ ಕಂಡಿತ್ತು. ಕೋವಿಡ್-19 ಸಾಂಕ್ರಾಮಿಕ ಆಸ್ಟ್ರೇಲಿಯಾ ವಿವಿಗಳ ಮೇಲೆಯೂ ತೀವ್ರವಾದ ಪರಿಣಾಮಗಳನ್ನು ಬೀರಿತ್ತು.

ಆಸ್ಟ್ರೇಲಿಯಾಗೆ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದೇ ಇದ್ದಲ್ಲಿ ಬೇರೆ ದೇಶಗಳಲ್ಲಿ ಪ್ರವೇಶ ಪಡೆಯುವ ಸಾಧ್ಯತೆ ಇದೆ ಎಂದು ಅಲ್ಲಿನ ಶಿಕ್ಷಣ ಕ್ಷೇತ್ರ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ನಂತರದ ಆದ್ಯತೆಯನ್ನು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com