ಐಸಿಸ್ ನಿಗ್ರಹಿಸಲು ಅಮೆರಿಕದ ಜೊತೆ ಕೈಜೋಡಿಸುವುದಿಲ್ಲ: ತಾಲಿಬಾನ್ ತಿರುಗೇಟು

ಅಮೆರಿಕ ಮತ್ತು ಅಫ್ಘಾನಿಸ್ತಾನ ನೇರ ಮಾತುಕತೆ ನಡೆಸಿತ್ತು. ಅಫ್ಘಾನಿಸ್ತಾನ ನೆಲದಿಂದ ಅಮೆರಿಕ ಕಾಲ್ತೆಗೆದ ನಂತರ ಇದೇ ಮೊದಲ ಬಾರಿಗೆ ನೇರ ಮಾತುಕತೆ ನಡೆದಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ನೆಲೆ ಕಂಡುಕೊಂಡಿರುವ ಉಗ್ರಸಂಘಟನೆಗಳ ನಿಗ್ರಹ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ಸಹಕಾರ ನೀಡುವುದಿಲ್ಲ ಎಂದು ತಾಲಿಬಾನ್ ನಾಯಕರು ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ. 

ಇತ್ತೀಚಿಗಷ್ಟೆ ಅಮೆರಿಕ ಮತ್ತು ಅಫ್ಘಾನಿಸ್ತಾನ ನೇರ ಮಾತುಕತೆ ನಡೆಸಿತ್ತು. ಅಫ್ಘಾನಿಸ್ತಾನ ನೆಲದಿಂದ ಅಮೆರಿಕ ಕಾಲ್ತೆಗೆದ ನಂತರ ಇದೇ ಮೊದಲ ಬಾರಿಗೆ ನೇರ ಮಾತುಕತೆ ನಡೆದಿತ್ತು. ಆಫ್ಘನ್ ನೆಲದಲ್ಲಿ ಅಮೆರಿಕ ವಿರೋಧಿ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದು ಮಾತುಕತೆಯ ಮುಖ್ಯ ಉದ್ದೇಶವಾಗಿತ್ತು.

ಅಲ್ಲದೆ ಆಫ್ಘನ್ ನೆಲದಲ್ಲಿ ಇನ್ನೂ ಸಿಲುಕಿಕೊಂಡಿರುವ ವಿದೇಶಿಯರ ಸ್ಥಳಾಂತರ ಕಾರ್ಯಾಚರಣೆ ಕುರಿತಾಗಿಯೂ ಮಾತುಕತೆ ವೇಳೆ ಚರ್ಚೆ ನಡೆಸಲಾಗಿದೆ. 

ಐಸಿಸ್ ಉಗ್ರಸಂಘಟನೆ ಅಫ್ಘಾನಿಸ್ತಾನದಲ್ಲಿ ಬೇರು ಬಿಟ್ಟಿದ್ದು ಅಲ್ಲಿನ ಶಿಯಾ ಮುಸ್ಲಿಮರ ಹತ್ಯೆಯಲ್ಲಿ ತೊಡಗಿದೆ. ಶಿಯಾ ಸಮುದಾಯದವರ ವಿರುದ್ಧ ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಭಾಗಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com