ಪಾಕಿಸ್ತಾನ ಒಸಾಮಾನಂಥವರನ್ನು ಹುತಾತ್ಮನೆಂದು ವೈಭವೀಕರಿಸುತ್ತಲೇ ಶಾಂತಿ ಮಂತ್ರ ಜಪಿಸುತ್ತದೆ: ವಿಶ್ವಸಂಸ್ಥೆಯಲ್ಲಿ ಭಾರತ ಆರೋಪ

ಪಾಕಿಸ್ತಾನ ಜಾಗತಿಕ ಮಟ್ಟದ ಭಯೋತ್ಪಾದನೆಯ ಕೇಂದ್ರ. ಗಡಿಯಾಚೆಗೆ ಭಯೋತ್ಪದನಾ ಚಟುವಟಿಕೆಗಳನ್ನು ಎಂದಿನಿಂದಲೂ ನಡೆಸಿಕೊಂಡು ಬಂದಿದೆ ಎಂದು ಅಮರ್ ನಾಥ್ ಆರೋಪ ಮಾಡಿದ್ದಾರೆ. 
ಪಾಕಿಸ್ತಾನ ಒಸಾಮಾನಂಥವರನ್ನು ಹುತಾತ್ಮನೆಂದು ವೈಭವೀಕರಿಸುತ್ತಲೇ ಶಾಂತಿ ಮಂತ್ರ ಜಪಿಸುತ್ತದೆ: ವಿಶ್ವಸಂಸ್ಥೆಯಲ್ಲಿ ಭಾರತ ಆರೋಪ

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾಮಂಡಳಿ ಸಭೆಯಲ್ಲಿ 'ಒಂದೆಡೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಸಾಮಾ ಬಿನ್ ಲ್ಯಾಡೆ ನಂಥವರನ್ನು ಹುತಾತ್ಮ ಎಂದು ವೈಭವೀಕರಿಸುತ್ತಾರೆ. ಆದರೆ ಇಲ್ಲಿ ಬಂದು ಶಾಂತಿ ಮಂತ್ರ ಜಪಿಸುತ್ತಾರೆ.' ಎಂದು ಭಾರತದ ಪ್ರತಿನಿಧಿ ಎ ಅಮರ್ ನಾಥ್ ಕಿಡಿ ಕಾರಿದ್ದಾರೆ. 76ನೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಪಾಕಿಸ್ತಾನ ಜಾಗತಿಕ ಮಟ್ಟದ ಭಯೋತ್ಪಾದನೆಯ ಕೇಂದ್ರ. ಗಡಿಯಾಚೆಗೆ ಭಯೋತ್ಪದನಾ ಚಟುವಟಿಕೆಗಳನ್ನು ಎಂದಿನಿಂದಲೂ ನಡೆಸಿಕೊಂಡು ಬಂದಿದೆ ಎಂದು ಅಮರ್ ನಾಥ್ ಆರೋಪ ಮಾಡಿದ್ದಾರೆ. 

ಪಾಕಿಸ್ತಾನ ಈ ಹಿಂದೆ ಜಮ್ಮು ಕಾಶ್ಮೀರ ಮತ್ತು ಲಡಾಖ್ ವಿಚಾರಗಳಲ್ಲಿ ಮೂಗು ತೂರಿಸಿತ್ತು. ಇವೆಲ್ಲಾ ಭಾರತ ಆಂತರಿಕ ವಿಚಾರಗಳಾಗಿವೆ ಎಂದು ಅವರು ಇದೇ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com