ಸಂಗೀತಪ್ರಿಯರನ್ನು ಕೊಲ್ಲುವ ನೀತಿ ಜಾರಿಗೊಳಿಸಿಲ್ಲ: ತಾಲಿಬಾನ್ ನಾಯಕರ ಸ್ಪಷ್ಟನೆ

ಮದುವೆ ಮನೆಯಲ್ಲಿ ಸಂಗೀತವನ್ನು ದೊಡ್ಡ ದನಿಯಲ್ಲಿ ಹಾಕಲಾಗಿದ್ದಿತು. ಈ ಸಂದರ್ಭ ಅಲ್ಲಿಗೆ ದಾಂಗುಡಿಯಿಟ್ಟ 3 ತಾಲಿಬಾನಿಗಳು ಮದುವೆಮನೆಯೊಳಗೆ ಗುಂಡಿನ ದಾಳಿ ನಡೆಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಗೀಪ್ರಿಯರನ್ನು ಕೊಲ್ಲುವ ನೀತಿ ಜಾರಿ ಮಾಡಿಲ್ಲ ಎಂದು ತಾಲಿಬಾನ್ ನಾಯಕರು ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚಿಗಷ್ಟೆ ಮದುವೆಮನೆಯಲ್ಲಿ ಸಂಗೀತ ಕೇಳುತ್ತಿದ್ದ ಇಬ್ಬರು ಅತಿಥಿಗಳನ್ನು ತಾಲಿಬಾನಿಗಳು ಗುಂಡಿಕ್ಕಿ ಕೊಂದಿದ್ದರು. 

ಮದುವೆಮನೆಯಲ್ಲಿ ಸಂಗೀತ ಕೇಳುತ್ತಿದ್ದವರನ್ನು ಕೊಂದ ಪ್ರಕರಣವನ್ನು ಉಲ್ಲೇಖಿಸಿ ತಾಲಿಬಾನ್ ನಾಯಕರು ಈ ಸ್ಪಷ್ಟನೆ ನೀಡಿದ್ದಾರೆ. ಆ ಇಬ್ಬರು ವ್ಯಕ್ತಿಗಳ ಕೊಲೆಯನ್ನು ಸರ್ಕಾರದ ನಿರ್ದೇಶನದಂತೆ ಮಾಡಲಾಗಿಲ್ಲ ಎಂದು ಸರ್ಕಾರ ತಿಳಿಸಿದೆ. 

ನಂರ್ಗರ್ಹರ್ ಎಂಬಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮದುವೆ ಮನೆಯಲ್ಲಿ ಸಂಗೀತವನ್ನು ದೊಡ್ಡ ದನಿಯಲ್ಲಿ ಹಾಕಲಾಗಿದ್ದಿತು. ಈ ಸಂದರ್ಭ ಅಲ್ಲಿಗೆ ದಾಂಗುಡಿಯಿಟ್ಟ 3 ತಾಲಿಬಾನಿಗಳು ಮದುವೆಮನೆಯೊಳಗೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು.

ಆರೋಪಿ ತಾಲಿಬಾನಿಗಳು ಇದೀಗ ಪೊಲೀಸರ ವಶದಲ್ಲಿದ್ದಾರೆ ಎನ್ನಲಾಗುತ್ತಿದೆ. ಘಟನೆಯಲ್ಲಿ ತನ್ನ ಕೈವಾಡವಿಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿದ್ದರೂ ಮನರಂಜನೆ ಎನ್ನುವುದು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾದುದು ಎನ್ನುವ ತನ್ನ ನಿಲುವಿಗೆ ಸರ್ಕಾರ ಬದ್ಧವಾಗಿದೆ ಎನ್ನುವುದು ವಿಪರ್ಯಾಸ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com