ಭಾರೀ ಮಳೆಗೆ ತತ್ತರಿಸಿದ ನ್ಯೂಯಾರ್ಕ್: ತುರ್ತು ಪರಿಸ್ಥಿತಿ ಘೋಷಣೆ
ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನ್ಯೂಯಾರ್ಕ್ ನಗರ ಅಕ್ಷರಶಃ ತತ್ತರಿಸಿದ್ದು, ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Published: 02nd September 2021 12:40 PM | Last Updated: 02nd September 2021 12:40 PM | A+A A-

ಸಂಗ್ರಹ ಚಿತ್ರ
ನ್ಯೂಯಾರ್ಕ್: ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನ್ಯೂಯಾರ್ಕ್ ನಗರ ಅಕ್ಷರಶಃ ತತ್ತರಿಸಿದ್ದು, ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಅಲ್ಲಿನ ಮೇಯರ್ ಬಿಲ್ ಡಿ ಬ್ಲಿಸಿಯೊ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಇದೊಂದು ಐತಿಹಾಸಿಕ ಹವಾಮಾನ ದುರಂತ ಎಂದು ಬಣ್ಣಿಸಿರುವ ಅವರು, ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಮಳೆ ಹಾಗೂ ಬಿರುಗಾಳಿಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಬೀದಿ ಬೀದಿಗಳಲ್ಲಿ ನೀರು ಹರಿದಿದೆ. ಅಲ್ಲದೇ ಸಬ್‌ವೇ ರೈಲು ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಷ್ಟ್ರೀಯ ಹವಾಮಾನ ಸೇವೆಯಿಂದ ನಿನ್ನೆ ಸಂಜೆ ಕನಿಷ್ಠ 5 ತುರ್ತು ಪರಿಸ್ಥಿತಿ ಎಚ್ಚರಿಕೆಯನ್ನು ನ್ಯೂಯಾರ್ಕ್ ನಗರಕ್ಕೆ ನೀಡಲಾಗಿತ್ತು.