ಕೋವಿಡ್ ಸೋಂಕಿನಿಂದ ನಲುಗುತ್ತಿರುವ ಚೀನಾ: ಮೌನ ಮುರಿದ ಅಧ್ಯಕ್ಷ ಷಿ ಜಿನ್ಪಿಂಗ್

ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ತಮ್ಮ ದೇಶ ಕೋವಿಡ್ ವಿರುದ್ಧ ಹೋರಾಟದ ಬಗ್ಗೆ ಮೌನ ಮುರಿದಿದ್ದು, ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್
ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್

ಬೀಜಿಂಗ್: ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ತಮ್ಮ ದೇಶ ಕೋವಿಡ್ ವಿರುದ್ಧ ಹೋರಾಟದ ಬಗ್ಗೆ ಮೌನ ಮುರಿದಿದ್ದು, ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಚೀನಾದಲ್ಲಿ ಮತ್ತೊಮ್ಮೆ ಕೋವಿಡ್ ಸೋಂಕು ತೀವ್ರಗೊಂಡಿದ್ದು ಆಸ್ಪತ್ರೆಗಳು ಭರ್ತಿಯಾಗಿ ಹೆಣಗಳ ರಾಶಿ ಬೀಳುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಒಂದು ಮಿಲಿಯನ್ ಮಂದಿ ಚೀನಾದಲ್ಲಿ ಕೋವಿಡ್ ನಿಂದ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಚೀನಾದಲ್ಲಿ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತಿದ್ದು ಔಷಧಕ್ಕೆ ಕೊರತೆ ಎದುರಾಗಿದೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ವಿಪರೀತ ಹೆಚ್ಚುತ್ತಿರುವುದರ ಪರಿಣಾಮ ಅಲ್ಲಿನ ಆರೋಗ್ಯ ವ್ಯವಸ್ಥೆ ಕುಸಿಯುತ್ತಿದೆ.

ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ ಸಿಸಿಟಿವಿ ಷಿ ಜಿನ್ಪಿಂಗ್ ಅವರ ಹೇಳಿಕೆಯನ್ನು ಪ್ರಕಟಿಸಿದ್ದು, "ಪ್ರಸ್ತುತ ಕೋವಿಡ್-19 ತಡೆ ಹಾಗೂ ನಿಯಂತ್ರಣ ಚೀನಾದಲ್ಲಿ ಹೊಸ ಪರಿಸ್ಥಿತಿ ಹಾಗೂ ಹೊಸ ಟಾಸ್ಕ್ ಗಳನ್ನು ಎದುರುಗೊಳ್ಳುವಂತೆ ಮಾಡಿದೆ. ಹೆಚ್ಚು ಮಂದಿಯನ್ನು ತಲುಪುವ ನಿಟ್ಟಿನಲ್ಲಿ ನಾವು ದೇಶಭಕ್ತಿಯ ಆರೋಗ್ಯ ಅಭಿಯಾನವನ್ನು ಕೈಗೆತ್ತಿಕೊಳ್ಳಬೇಕಿದೆ. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮುದಾಯದ ರಕ್ಷಣಾ ಮಾರ್ಗವನ್ನು ಬಲಪಡಿಸುವುದು ಮತ್ತು ಜನರ ಜೀವನ, ಸುರಕ್ಷತೆ ಮತ್ತು ಆರೋಗ್ಯವನ್ನು ಪರಿಣಾಮಕಾರಿಯಾಗಿ ರಕ್ಷಿಸಬೇಕಿದೆ ಎಂದು ಷಿ ಜಿನ್ಪಿಂಗ್ ಹೇಳಿದ್ದಾರೆ. 

ಚೀನಾದಲ್ಲಿ ಆಸ್ಪತ್ರೆಗಳು ಹಾಗೂ ಅಂತ್ಯಕ್ರಿಯೆ ನಡೆಸುವ ಸ್ಥಳಗಳು ಭರ್ತಿಯಾಗುತ್ತಿದ್ದು, ಎದುರಾಗುತ್ತಿರುವ ಕೇಸ್ ಲೋಡ್ ಪ್ರಮಾಣವನ್ನು ನಿಭಾಯಿಸಲು ಸಾಧ್ಯವಾಗದೇ ದಿನನಿತ್ಯ ಕೋವಿಡ್ ಅಂಕಿಅಂಶಗಳನ್ನು ಪ್ರಕಟಿಸುವುದನ್ನು ನಿಲ್ಲಿಸುವುದಾಗಿ ಚೀನಾ ಈಗಾಗಲೇ ಹೇಳಿದೆ.
 
ಚೀನಾ ತನ್ನಲ್ಲಿ ವರದಿಯಾಗುತ್ತಿರುವ ಸೋಂಕನ್ನು ಪತ್ತೆ ಮಾಡುವುದೇ ಅಸಾಧ್ಯವಾಗುತ್ತಿದೆ ಅಂತಹ ಒತ್ತಡದ ಪರಿಸ್ಥಿತಿಯಲ್ಲಿ ದೇಶ ಇರುವುದನ್ನು ಒಪ್ಪಿಕೊಂಡಿದೆ. ಚೀನಾದಲ್ಲಿ ಚಳಿಗಾಲವೂ ಕೋವಿಡ್ ಏರಿಕೆಗೆ ಒಂದು ಕಾರಣವಾಗಿದ್ದು, ಹೊಸ ವರ್ಷಾಚರಣೆಗೆ ಮುಂದಿನ ತಿಂಗಳು ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವುದು ಕೋವಿಡ್ ಸೋಂಕು ಮತ್ತಷ್ಟು ಉಲ್ಭಣಿಸುವ ಭೀತಿಯನ್ನು ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com