ಇಯಾನ್‌ ಚಂಡಮಾರುತದ ಹೊಡೆತಕ್ಕೆ ಸಿಲುಕಿದ ಅಮೆರಿಕ; ಫ್ಲೋರಿಡಾದಲ್ಲಿ ಮೃತರ ಸಂಖ್ಯೆ 47ಕ್ಕೆ ಏರಿಕೆ

ದೈತ್ಯಾಕಾರದ ಇಯಾನ್ ಚಂಡಮಾರುತದ ಆರ್ಭಟಕ್ಕೆ ಅಮೆರಿಕದ ಅನೇಕ ರಾಜ್ಯಗಳು ಅಕ್ಷರಶಃ ನಲುಗಿ ಹೋಗಿವೆ. ನೈಋತ್ಯ ಕರಾವಳಿಯಿಂದ ಕೆರೊಲಿನಾದವರೆಗೆ ತೀವ್ರ ಅನಾಹುತ ಸೃಷ್ಟಿಸಿದ್ದು, ಸಾವಿರಾರು ಜನರು ಇನ್ನೂ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ.
ಪೈನ್ ದ್ವೀಪಕ್ಕೆ ಸಂಪರ್ಕ ಕಲ್ಪಿಸಿದ್ದ ಸೇತುವೆಗೆ ಹಾನಿ
ಪೈನ್ ದ್ವೀಪಕ್ಕೆ ಸಂಪರ್ಕ ಕಲ್ಪಿಸಿದ್ದ ಸೇತುವೆಗೆ ಹಾನಿ
Updated on

ವಾಷಿಂಗ್ಟನ್: ದೈತ್ಯಾಕಾರದ ಇಯಾನ್ ಚಂಡಮಾರುತದ ಆರ್ಭಟಕ್ಕೆ ಅಮೆರಿಕದ ಅನೇಕ ರಾಜ್ಯಗಳು ಅಕ್ಷರಶಃ ನಲುಗಿ ಹೋಗಿವೆ. ನೈಋತ್ಯ ಕರಾವಳಿಯಿಂದ ಕೆರೊಲಿನಾದವರೆಗೆ ತೀವ್ರ ಅನಾಹುತ ಸೃಷ್ಟಿಸಿದ್ದು, ಸಾವಿರಾರು ಜನರು ಇನ್ನೂ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಸದ್ಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಫ್ಲೋರಿಡಾದಲ್ಲಿನ ಸಾವಿನ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ.

ಇಯಾನ್ ಚಂಡಮಾರುತವು ಅಮೆರಿಕದಲ್ಲಿ ವಿಪರೀತ ಹಾನಿ ಉಂಟುಮಾಡಿರುವ ಚಂಡಮಾರುತಗಳಲ್ಲಿ ಒಂದೆನಿಸಿದ್ದು, ಫ್ಲೋರಿಡಾದಲ್ಲಿ ಸುಮಾರು ನಾಲ್ಕು ಡಜನ್ ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಸ್ತೆಗಳು, ದ್ವೀಪ ರಾಜ್ಯಗಳಿಗೆ ತಡೆಗೋಡೆಗಳಾಗಿ ನಿರ್ಮಿಸಿದ್ದ ಸೇತುವೆಗಳು ಪ್ರವಾಹಕ್ಕೆ ಸಿಲುಕಿವೆ. ಹೀಗಾಗಿ ಸೀಮಿತ ಟೆಲಿಫೋನ್ ಸೇವೆ,  ನೀರು, ವಿದ್ಯುತ್ ಮತ್ತು ಇಂಟರ್ನೆಟ್‌ನಂತಹ ಮೂಲಭೂತ ಸೌಕರ್ಯಗಳ ಕೊರತೆಯು ತಲೆದೋರಿದೆ.

ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮಾತನಾಡಿ, ಕೆಲವು ಸಂವಹನ ಸಮಸ್ಯೆಗಳನ್ನು ನಿವಾರಿಸಲು ಮಲ್ಟಿಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರು ಸುಮಾರು 120 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಒದಗಿಸುತ್ತಿದ್ದಾರೆ ಎಂದು ಶನಿವಾರ ಹೇಳಿದ್ದಾರೆ. ಸ್ಟಾರ್‌ಲಿಂಕ್ ಎನ್ನುವುದು ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್ ರಚಿಸಿದ ಉಪಗ್ರಹ ಆಧಾರಿತ ಇಂಟರ್ನೆಟ್ ವ್ಯವಸ್ಥೆಯು ಹೆಚ್ಚಿನ ವೇಗದ ಸಂಪರ್ಕವನ್ನು ಒದಗಿಸುತ್ತದೆ.

ಫ್ಲೋರಿಡಾದಲ್ಲಿ ವಿದ್ಯುತ್ ಪುನಃಸ್ಥಾಪಿಸಲು ಕೆಲಸ ಮಾಡಲಾಗುತ್ತಿದೆ. ಸದ್ಯ ಚಂಡಮಾರುತದಿಂದಾಗಿ ಕನಿಷ್ಠ 54 ಜನರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಈ ಪೈಕಿ ಫ್ಲೋರಿಡಾದಲ್ಲಿ 47, ಉತ್ತರ ಕೆರೊಲಿನಾದಲ್ಲಿ ನಾಲ್ಕು ಮತ್ತು ಕ್ಯೂಬಾದಲ್ಲಿ ಮೂವರು ಬಲಿಯಾಗಿದ್ದಾರೆ.

ಫ್ಲೋರಿಡಾದ ನೈಋತ್ಯ ಕರಾವಳಿಯುದ್ದಕ್ಕೂ ಪ್ರವಾಹಕ್ಕೆ ಒಳಗಾದ ಪ್ರದೇಶಗಳಿಂದ 1,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ಬುಧವಾರ ಫ್ಲೋರಿಡಾಕ್ಕೆ ಪ್ರಯಾಣಿಸಲಿದ್ದಾರೆ ಎಂದು ಶ್ವೇತಭವನ ಘೋಷಿಸಿದೆ. ಆದರೆ, ಈ ಸಂಕ್ಷಿಪ್ತ ಹೇಳಿಕೆಯಲ್ಲಿ ರಾಜ್ಯಕ್ಕೆ ಯೋಜಿತ ಭೇಟಿಯ ಯಾವುದೇ ಇತರೆ ವಿವರಗಳನ್ನು ಬಿಡುಗಡೆ ಮಾಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com