ಉಕ್ರೇನ್ ನ ಕೈವ್ ನಲ್ಲಿ ರಷ್ಯಾದಿಂದ ಡ್ರೋನ್ ದಾಳಿ
ಉಕ್ರೇನ್ ನ ಕೈವ್ ನಲ್ಲಿ ರಷ್ಯಾದಿಂದ ಡ್ರೋನ್ ದಾಳಿ

'ಪರಿಸ್ಥಿತಿ ಉಲ್ಬಣವಾಗಿದೆ, ಆದಷ್ಟು ಬೇಗ ಉಕ್ರೇನ್ ತೊರೆಯಿರಿ': ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆ

ಉಕ್ರೇನ್ ದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದಂತೆ, ಕೀವ್ನಲ್ಲಿರುವ ಭಾರತೀಯ ರಾಯಭಾರ ಯುದ್ಧ ಪೀಡಿತ ಪ್ರದೇಶಕ್ಕೆ ಪ್ರಯಾಣಿಸದಂತೆ ಮತ್ತು ಪ್ರಸ್ತುತ ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಶೀಘ್ರವಾಗಿ ಅಲ್ಲಿಂದ ಹೊರಡುವಂತೆ ಸಲಹೆ ನೀಡಿದೆ.

ಕೀವ್: ಉಕ್ರೇನ್ ದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದಂತೆ, ಕೀವ್ನಲ್ಲಿರುವ ಭಾರತೀಯ ರಾಯಭಾರ ಯುದ್ಧ ಪೀಡಿತ ಪ್ರದೇಶಕ್ಕೆ ಪ್ರಯಾಣಿಸದಂತೆ ಮತ್ತು ಪ್ರಸ್ತುತ ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಶೀಘ್ರವಾಗಿ ಅಲ್ಲಿಂದ ಹೊರಡುವಂತೆ ಸಲಹೆ ನೀಡಿದೆ.

ಉಕ್ರೇನ್‌ನಾದ್ಯಂತ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಇತ್ತೀಚಿನ ದಿನಗಳಲ್ಲಿ ರಷ್ಯಾದ ಹೆಚ್ಚುತ್ತಿರುವ ಹಗೆತನದ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಉಕ್ರೇನ್‌ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. 

ಪ್ರಸ್ತುತ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ತಮಗೆ ಸಾಧ್ಯವಾದ ಸಂಚಾರ ಸಾಧನಗಳ ಮೂಲಕ ಉಕ್ರೇನ್‌ನಿಂದ ಆದಷ್ಟು ಬೇಗನೆ ಹೊರಡುವಂತೆ ಸೂಚಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಮೊನ್ನೆ ಸೋಮವಾರ, ಕೀವ್ನಲ್ಲಿ ಬೆಳಿಗ್ಗೆ ಅನೇಕ ಸ್ಫೋಟಗಳು ಕೇಳಿಬಂದವು, ಅದು ಇರಾನ್ ನಿರ್ಮಿತ ಡ್ರೋನ್‌ಗಳನ್ನು ಬಳಸಿಕೊಂಡು ಉಕ್ರೇನ್ ನಗರಗಳು ಮತ್ತು ಅಲ್ಲಿನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಗಳು ಎಂದು ತಿಳಿದುಬಂದವು. ಉಕ್ರೇನ್ ರಾಜಧಾನಿಯ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕನಿಷ್ಠ ಐದು ಜನರು ಇದುವರೆಗೆ ಮೃತಪಟ್ಟಿದ್ದಾರೆ ಎಂದು ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಹೇಳಿದ್ದಾರೆ.

ನಿನ್ನೆ ಬೆಳಿಗ್ಗೆ ರಷ್ಯಾದ ಕಾಮಿಕೇಜ್ ಡ್ರೋನ್‌ನಿಂದ ಹೊಡೆಯಲಾಗಿದ್ದ ರಾಜಧಾನಿಯ ಮಧ್ಯಭಾಗದಲ್ಲಿರುವ ಕಟ್ಟಡದ ಅವಶೇಷಗಳಡಿಯಿಂದ ಇನ್ನೊಬ್ಬ ಮೃತ ನಿವಾಸಿ ವಯಸ್ಸಾದ ಮಹಿಳೆಯ ಶವವನ್ನು ಹೊರತೆಗೆಯಲಾಗಿದೆ. ಇದು ಈಗಾಗಲೇ ರಷ್ಯಾದ ಬರ್ಬರ ದಾಳಿಯ ಐದನೇ ಬಲಿಪಶುವಾಗಿದೆ. ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನ ಶೇಕಡಾ 30 ರಷ್ಟು ವಿದ್ಯುತ್ ಕೇಂದ್ರಗಳು ನಾಶವಾಗಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಮತ್ತೊಂದು ರೀತಿಯ ರಷ್ಯಾದ ಭಯೋತ್ಪಾದಕ ದಾಳಿಗಳು: ಉಕ್ರೇನಿಯನ್ ಶಕ್ತಿ ಮತ್ತು ನಿರ್ಣಾಯಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಕಳೆದ ಅಕ್ಟೋಬರ್ 10ರಿಂದ ರಷ್ಯಾ ದಾಳಿ ನಡೆಸುತ್ತಿದ್ದು, ಉಕ್ರೇನ್‌ನ ಶೇಕಡಾ 30ರಷ್ಟು ವಿದ್ಯುತ್ ಕೇಂದ್ರಗಳು ನಾಶವಾಗಿವೆ, ಇದು ದೇಶದಾದ್ಯಂತ ರಷ್ಯಾ ಆಡಳಿತ ವಿರುದ್ಧ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಮಾತುಕತೆಗೆ ಏನೂ ಉಳಿಯಂದಾಗಿದೆ. 

ಇತ್ತೀಚೆಗೆ ಕ್ರೈಮಿಯಾ ರಸ್ತೆ ಸೇತುವೆಯ ಮೇಲೆ ಟ್ರಕ್ ಸ್ಫೋಟಗೊಂಡ ನಂತರ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಉಲ್ಬಣಗೊಂಡಿದೆ, ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ಹೋಗುತ್ತಿದ್ದ ರೈಲಿನ ಏಳು ಇಂಧನ ಟ್ಯಾಂಕ್‌ಗಳು ಬೆಂಕಿಗೆ ಆಹುತಿಯಾದವು. 

Related Stories

No stories found.

Advertisement

X
Kannada Prabha
www.kannadaprabha.com