ಚೀನಾದಿಂದ ನಿರಂತರ ಬೆದರಿಕೆ ಮಧ್ಯೆ ತೈವಾನ್‌ನ ಉನ್ನತ ಕ್ಷಿಪಣಿ ಅಧಿಕಾರಿ ಶವ ಹೊಟೇಲ್ ನಲ್ಲಿ ಪತ್ತೆ!

ಸ್ವಯಂ ಆಡಳಿತದ ದ್ವೀಪರಾಷ್ಟ್ರ ತೈವಾನ್ ಸುತ್ತ ಚೀನಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಿರುವುದರ ಮಧ್ಯೆ ತೈವಾನ್ ನಲ್ಲಿ ಕ್ಷಿಪಣಿ ಉತ್ಪಾದನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಉನ್ನತಾಧಿಕಾರಿಯೊಬ್ಬರ ಮೃತದೇಹ ಶನಿವಾರ ಹೊಟೇಲ್ ರೂಂನಲ್ಲಿ ಪತ್ತೆಯಾಗಿದೆ.
ಚೀನಾದಿಂದ ನಿನ್ನೆ ಆರಂಭಗೊಂಡ ಕ್ಷಿಪಣಿ ಕಾರ್ಯಾಚರಣೆ
ಚೀನಾದಿಂದ ನಿನ್ನೆ ಆರಂಭಗೊಂಡ ಕ್ಷಿಪಣಿ ಕಾರ್ಯಾಚರಣೆ

ತೈಪೈ: ಸ್ವಯಂ ಆಡಳಿತದ ದ್ವೀಪರಾಷ್ಟ್ರ ತೈವಾನ್ ಸುತ್ತ ಚೀನಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಿರುವುದರ ಮಧ್ಯೆ ತೈವಾನ್ ನಲ್ಲಿ ಕ್ಷಿಪಣಿ ಉತ್ಪಾದನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಉನ್ನತಾಧಿಕಾರಿಯೊಬ್ಬರ ಮೃತದೇಹ ಶನಿವಾರ ಹೊಟೇಲ್ ರೂಂನಲ್ಲಿ ಪತ್ತೆಯಾಗಿದೆ. ಹೃದಯ ಸಮಸ್ಯೆಯಿಂದ ಅವರು ಮೃತಪಟ್ಟಿದ್ದಾರೆ ಎಂದು ತೈವಾನ್ ಕೇಂದ್ರ ಸುದ್ದಿ ಸಂಸ್ಥೆ (CNA) ವರದಿ ಮಾಡಿದೆ.

ತೈವಾನ್ ನ ನ್ಯಾಷನಲ್ ಚುಂಗ್-ಶಾನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಉಪಾಧ್ಯಕ್ಷರಾಗಿದ್ದ ಔಯಾಂಗ್ ಲಿ-ಸಿಂಗ್ ವ್ಯಾಪಾರ ಉದ್ದೇಶದಿಂದ ದಕ್ಷಿಣ ಭಾಗಕ್ಕೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸುದ್ದಿಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ವರದಿ ಮಾಡಿರುವ ಹೇಳಿಕೆಯಲ್ಲಿ, ಔಯಂಗ್ ಹೆಂಗ್ ಚನ್ ನಲ್ಲಿರುವ ಹೊಟೇಲ್ ನಲ್ಲಿ ಇಂದು ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರು ಎಂದು ದೃಢಪಡಿಸಿದೆ. ನಂತರ ಮೃತದೇಹದ ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿ ಹೃದಯ ಸ್ನಾಯುವಿನ ಊತ (myocardial infarction) ಮತ್ತು ಗಂಟಲಿನ ಊತದಿಂದ (angina) ಮೃತಪಟ್ಟಿದ್ದಾರೆ ಎಂದು ಕಂಡುಬಂದಿದೆ.

ಈ ವರ್ಷದ ಆರಂಭದಲ್ಲಿ ಔಯಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧಿಕಾರ ವಹಿಸಿಕೊಂಡಿದ್ದರು. ಹಲವು ವಿಧದ ಕ್ಷಿಪಣಿಗಳನ್ನು ತಯಾರಿಸುವ ಕೆಲಸದ ಉಸ್ತುವಾರಿ ವಹಿಸಿಕೊಂಡಿದ್ದರು ಎಂದು ಸಿಎನ್ ಎ ತಿಳಿಸಿದೆ.

ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಭೇಟಿಯು ಚೀನಾ ಸರ್ಕಾರವನ್ನು ಕೆರಳಿಸಿದ ನಂತರ ದಿಗ್ಬಂಧನ ಮತ್ತು ಪ್ರಜಾಪ್ರಭುತ್ವ ದ್ವೀಪ ರಾಷ್ಟ್ರ ತೈವಾನ್ ಮೇಲೆ ಮಿಲಿಟರಿ ಆಕ್ರಮಣವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಈ ವಿದ್ಯಮಾನ ನಡೆದಿದೆ.

ಬೀಜಿಂಗ್ ತೈವಾನ್‌ನ ಮುಖ್ಯ ದ್ವೀಪದ ಮೇಲೆ ನೇರವಾಗಿ ಹಲವಾರು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಚೀನಾದ ರಾಜ್ಯ ಮಾಧ್ಯಮ ನಿನ್ನೆ ವರದಿ ಮಾಡಿತ್ತು. ತೈಪೆಯು ಗುಪ್ತಚರ ಕಾಳಜಿಯನ್ನು ಉಲ್ಲೇಖಿಸಿ ವಿಮಾನ ಮಾರ್ಗಗಳನ್ನು ಒಪ್ಪಲು ಇಲ್ಲವೇ ಒಪ್ಪದಿರಲು ನಿರಾಕರಿಸಿದೆ.

ಚೀನಾದಿಂದ ಹೆಚ್ಚುತ್ತಿರುವ ಮಿಲಿಟರಿ ಬೆದರಿಕೆ ಹಿನ್ನೆಲೆಯಲ್ಲಿ ಸರ್ಕಾರವು ತನ್ನದೇ ಆದ ಕ್ಷಿಪಣಿ ಉತ್ಪಾದನೆಯನ್ನು ವೇಗಗೊಳಿಸಲು ಪ್ರಯತ್ನಿಸುತ್ತಿದೆ. 

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ದ್ವೀಪರಾಷ್ಟ್ರ ತೈವಾನ್ ನ್ನು ತನ್ನ ಪ್ರದೇಶದ ಭಾಗವಾಗಿ ನೋಡುತ್ತಿದ್ದು ಅಗತ್ಯಬಿದ್ದರೆ ಆಕ್ರಮಿಸಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com