ಭಾರತ, ಅಮೆರಿಕಾ ಕಳವಳದ ನಡುವೆಯೂ ಲಂಕಾ ಬಂದರಿಗೆ ಚೀನಾದ ಸರ್ವೇಕ್ಷಣಾ ನೌಕೆ ಆಗಮನ!

ಭದ್ರತಾ ಕಾಳಜಿ ವಿಚಾರವಾಗಿ ಭಾರತದ ತೀವ್ರ ವಿರೋಧದ ನಡುವೆಯೂ ಚೀನಾದ ಬೇಹುಗಾರಿಕೆ ನೌಕೆ ಎಂದು ಕರೆಯಲ್ಪಡುವ ಯುವಾನ್ ವಾಂಗ್ ಸರ್ವೇಕ್ಷಣಾ ನೌಕೆ ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಬಂದಿಳಿದಿದೆ.
ಯುವಾನ್ ವಾಂಗ್ ನೌಕೆ
ಯುವಾನ್ ವಾಂಗ್ ನೌಕೆ
Updated on

ಹಂಬನ್‌ತೋಟ(ಶ್ರೀಲಂಕಾ): ಭದ್ರತಾ ಕಾಳಜಿ ವಿಚಾರವಾಗಿ ಭಾರತದ ತೀವ್ರ ವಿರೋಧದ ನಡುವೆಯೂ ಚೀನಾದ ಬೇಹುಗಾರಿಕೆ ನೌಕೆ ಎಂದು ಕರೆಯಲ್ಪಡುವ ಯುವಾನ್ ವಾಂಗ್ ಸರ್ವೇಕ್ಷಣಾ ನೌಕೆ ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಬಂದಿಳಿದಿದೆ.

ಯುವಾನ್ ವಾಂಗ್ 5 ನೌಕೆಯನ್ನು ಶ್ರೀಲಂಕಾ ಬಂದರು ಅಧಿಕಾರಿಗಳು ಹಾಗೂ ಹಡಗು ಕಂಪನಿಯ ಚೀನಾದ ಅಧಿಕಾರಿಗಳು ಹಂಬನ್‌ತೋಟ ಬಂದರಿನಲ್ಲಿ ಸ್ವಾಗತಿಸಿದರು. ನೌಕೆಯ ಆಗಮನವು ಭಾರತದ ಕಳವಳಕ್ಕೆ ಕಾರಣವಾಗಿದ್ದು ಅಲ್ಲದೆ ಭಾರತ ಮತ್ತು ಚೀನಾ ನಡುವಿನ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಹಡಗು ಆಗಸ್ಟ್ 11ರಂದೇ ಹಂಬನ್‌ತೋಟಗೆ ಆಗಮಿಸಬೇಕಿತ್ತು. ಆದರೆ ಭಾರತ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹೆಚ್ಚಿನ ಸಮಾಲೋಚನೆಗಳು ನಡೆಯುವವರೆಗೂ ಆಗಮನವನ್ನು ಮುಂದೂಡುವಂತೆ ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಚೀನಾವನ್ನು ಕೇಳಿಕೊಂಡಿತ್ತು.

ಇದೀಗ ಸುದೀರ್ಘ ಮಾತುಕತೆ ಬಳಿಕ ನೌಕೆಗೆ ಹಂಬನ್‌ತೋಟದಲ್ಲಿ ಆ.22ರ ವರೆಗೆ ಲಂಗರು ಹಾಕಲು ಅನುಮತಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ನೌಕೆ ತನ್ನ ಗುರುತಿನ ವ್ಯವಸ್ಥೆಗಳನ್ನು ಇರಿಸಿಕೊಳ್ಳಲು ಜೊತೆಗೆ ಶ್ರೀಲಂಕಾ ನೀರಿನಲ್ಲಿ ಯಾವುದೇ ಸಂಶೋಧನಾ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂದು ಎರಡು ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಭಾರತ ಸೋಮವಾರ ತನ್ನ ಕಡಲ ಭದ್ರತೆಯನ್ನು ಬಲಪಡಿಸಲು ಶ್ರೀಲಂಕಾಕ್ಕೆ ಸಮುದ್ರ ವಿಚಕ್ಷಣ ವಿಮಾನವನ್ನು ಉಡುಗೊರೆಯಾಗಿ ನೀಡಿತ್ತು. ಭಾರತಕ್ಕೆ ತರಬೇತಿ ನೀಡಿದ ಶ್ರೀಲಂಕಾದ ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿ ಭಾರತೀಯ ಸಿಬ್ಬಂದಿಯ ಕಾರ್ಯಾಚರಣೆಯ ಬೆಂಬಲದೊಂದಿಗೆ ವಿಮಾನವನ್ನು ನಿರ್ವಹಿಸುತ್ತಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com