ನೇಪಾಳದಲ್ಲಿ ಪ್ರಬಲ ಭೂಕಂಪನ; ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲು

ನೆರೆಯ ನೇಪಾಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0ರ ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಠ್ಮಂಡು: ನೆರೆಯ ನೇಪಾಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0ರ ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

ಭಾನುವಾರ ಬೆಳಗ್ಗೆ ನೇಪಾಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪನದ ಕೇಂದ್ರ ಬಿಂದು ಕಠ್ಮಂಡುವಿನಿಂದ 147 ಕಿ. ಮೀ. ಪೂರ್ವ-ಆಗ್ನೇಯದ ಬಳಿ ಇದ್ದು, 10 ಕಿಮೀ ಆಳದಲ್ಲಿ ಭೂಕಂಪನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬೆಳಗ್ಗೆ 7.58ರ ಸುಮಾರಿಗೆ ಈ ಕಂಪನ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದು, ಭೂಕಂಪನದಿಂದ ಯಾವುದೇ ಹಾನಿ ಆದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಹಿಂದೆ ಜುಲೈ 25ರಂದು ಸಹ 4.3 ತೀವ್ರತೆಯ ಕಂಪನ ದಾಖಲಾಗಿತ್ತು. ಇದಕ್ಕೂ ಮೊದಲು ಏಪ್ರಿಲ್ 25, 2015 ರಂದು ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಪೋಖರಾ ನಗರದ ನಡುವೆ ಭೀಕರ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.8 ರಷ್ಟಿತ್ತು. ಈ ಭೀಕರ ಕಂಪನದಿಂದಾಗಿ ಉಂಟಾದ ಕಟ್ಟಡಗಳ ಕುಸಿತದಿಂದಾಗಿ 8,964 ಜನರು ಬಲಿಯಾಗಿ, 22,000 ಜನರು ಗಾಯಗೊಂಡಿದ್ದರು.

ಗೂರ್ಖಾ ಭೂಕಂಪ ಎಂದು ಕರೆಯಲ್ಪಡುವ ಭೂಕಂಪವು ಉತ್ತರ ಭಾರತದಾದ್ಯಂತ ಹಲವಾರು ನಗರಗಳನ್ನು ನಡುಗಿಸಿತ್ತು. ಭಾರತ, ನೇಪಾಳ ಮಾತ್ರವಲ್ಲದೇ ಪಾಕಿಸ್ತಾನದ ಲಾಹೋರ್, ಟಿಬೆಟ್‌ನ ಲಾಸಾ ಮತ್ತು ಬಾಂಗ್ಲಾದೇಶದ ಢಾಕಾದಲ್ಲಿಯೂ ಕಂಪನವಾಗಿತ್ತು.  ಇದೇ ಕಂಪನ ವಿಶ್ವದ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟ್ನಲ್ಲಿ ಹಿಮಪಾತವನ್ನು ಉಂಟುಮಾಡಿತ್ತು. ಅಂದು ಈ ಹಿಮಪಾತದಿಂದಾಗಿ 22 ಜನರು ಸಾವನ್ನಪ್ಪಿದ್ದರು.

ನೇಪಾಳ ಇತಿಹಾಸದಲ್ಲಿ ಅತ್ಯಂತ ದೊಡ್ಡ ಕಂಪನ 1934 ರಲ್ಲಿ ದಾಖಲಾಗಿತ್ತು. ಅಂದಿನ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8.0 ರಷ್ಟಿತ್ತು. ಅಂದಿನ ಭೀಕರ ಕಂಪನ ಕಠ್ಮಂಡು, ಭಕ್ತಪುರ್ ಮತ್ತು ಪಟಾನ್ ನಗರಗಳನ್ನೇ ನಾಶಪಡಿಸಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com