ಡ್ರ್ಯಾಗನ್ ರಾಷ್ಟ್ರದಲ್ಲಿ ಪುರುಷ v/s ಮಹಿಳೆ: ಚೀನಾ ಸರ್ಕಾರ ಕಂಗಾಲು!
ಚೀನಾದ ಟ್ಯಾಂಗ್‌ಶಾನ್ ನಗರದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಕೆಲವು ಪುರುಷರು ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
Published: 12th June 2022 12:08 PM | Last Updated: 13th June 2022 01:13 PM | A+A A-

ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿರುವ ಪುರುಷರು.
ಬೀಜಿಂಗ್: ಚೀನಾದ ಟ್ಯಾಂಗ್‌ಶಾನ್ ನಗರದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಕೆಲವು ಪುರುಷರು ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಚೀನಾದಿಂದ ಈ ವೀಡಿಯೊ ಕಾಣಿಸಿಕೊಂಡ ತಕ್ಷಣ, ದೇಶದಲ್ಲಿ ಲಿಂಗ ಹಿಂಸೆಯ ವಿಷಯ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಪದೇ ಪದೇ ಲಿಂಗಭೇದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ಘಟನೆಗಳು ಚೀನಾದಿಂದ ವರದಿಯಾಗುತ್ತಿದ್ದು, ಡ್ರ್ಯಾಗನ್ ಸರಕಾರ ಇಕ್ಕಟ್ಟಿಗೆ ಸಿಲುಕಿದೆ.
The video of this incident has gone viral in China. 9 suspects have been arrested. The men appear to attack the women after one of them rejects the mans advances and pushes away his arm after he touches her. More video from the outside in next tweetpic.twitter.com/tjfCEV4kdr
— Nuance Bro (@NuanceBro) June 11, 2022
ಬಿಬಿಸಿ ವರದಿಯ ಪ್ರಕಾರ, ರೆಸ್ಟೋರೆಂಟ್‌ನಲ್ಲಿ ವ್ಯಕ್ತಿಯೊಬ್ಬ ಹುಡುಗಿಯ ಮೇಲೆ ಕೈ ಹಾಕಿದ. ಬಳಿಕ ಹುಡುಗಿ ತಕ್ಷಣ ಅವನನ್ನು ತಳ್ಳಿದಳು. ಇದಾದ ಬಳಿಕ ಇಬ್ಬರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಾಲಕಿ ನೆಲಕ್ಕೆ ಬಿದ್ದ ಬಳಿಕವೂ ಆಕೆಯ ಮೇಲೆ ಹಲ್ಲೆ ಮುಂದುವರಿದಿದೆ. ಇಲ್ಲಿ ಇತರ ಕೆಲವು ಹುಡುಗರು ಒಟ್ಟಾಗಿ ಹುಡುಗಿಯೊಂದಿಗೆ ಆಹಾರ ತಿನ್ನಲು ರೆಸ್ಟೋರೆಂಟ್‌ಗೆ ಬಂದ ಜನರನ್ನು ಥಳಿಸಲು ಪ್ರಾರಂಭಿಸಿದ್ದಾರೆ.
ವೀಡಿಯೊ ವೈರಲ್ ಆದ ತಕ್ಷಣ, ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್ ವೀಬೊದಲ್ಲಿ ಟ್ರೆಂಡಿಂಗ್ ನ 6ನೇ ಸ್ಥಾನಕ್ಕೆ ಜಿಗಿದಿದೆ. ದಾಳಿಗೊಳಗಾದ ಇಬ್ಬರೂ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಹಿಂಸಾತ್ಮಕ ದಾಳಿಗೆ ಸಂಬಂಧಿಸಿದಂತೆ ಒಂಬತ್ತು ಶಂಕಿತರನ್ನು ಬಂಧಿಸಲಾಗಿದೆ ಎಂದು ಉತ್ತರ ಹೆಬೈ ಪ್ರಾಂತ್ಯದ ತಂಗ್ಶಾನ್ ಪೊಲೀಸರು ತಿಳಿಸಿದ್ದಾರೆ.