17ನೇ ಜಿ20 ಶೃಂಗಸಭೆ ಆರಂಭ: ಬಾಲಿಯಲ್ಲಿ ಪ್ರಧಾನಿ ಮೋದಿ, ಪ್ರಮುಖ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ

2 ದಿನಗಳ ಕಾಲ ನಡೆಯಲಿರುವ ಮಹತ್ವದ ಜಿ20 ರಾಷ್ಟ್ರಗಳ ಶೃಂಗಸಭೆ ಮಂಗಳವಾರ ಆರಂಭಗೊಂಡಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಡೋನೇಷ್ಯಾದ ಬಾಲಿಗೆ ತಲುಪಿದ್ದಾರೆ.
ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಬಾಲಿ ತಲುಪಿದ್ದಾರೆ.
ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಬಾಲಿ ತಲುಪಿದ್ದಾರೆ.

ನವದೆಹಲಿ/ಬಾಲಿ: 2 ದಿನಗಳ ಕಾಲ ನಡೆಯಲಿರುವ ಮಹತ್ವದ ಜಿ20 ರಾಷ್ಟ್ರಗಳ ಶೃಂಗಸಭೆ ಮಂಗಳವಾರ ಆರಂಭಗೊಂಡಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಡೋನೇಷ್ಯಾದ ಬಾಲಿಗೆ ತಲುಪಿದ್ದಾರೆ.

ನ.15 ಮತ್ತು 16 ರಂದು ಎರಡು ದಿನಗಳ ಶೃಂಗಸಭೆ ನಡೆಯಲಿದ್ದು, ಈಗಾಗಲೇ ಬಾಲಿ ತಲುಪಿರುವ ಮೋದಿಯವರು, ಜಾಗತಿಕ ಅಭಿವೃದ್ಧಿ, ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ ಹಾಗೂ ಡಿಜಿಟಲ್ ರೂಪಾಂತರಕ್ಕೆ ಸಂಬಂಧಿಸಿದಂತೆ ಜಾಗತಿಕ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಶೃಂಗ ಸಭೆಯೊಂದಿಗೆ ಇಂಡೋನೇಷ್ಯಾದ ಜಿ20 ಅಧ್ಯಕ್ಷೀಯ ಅವಧಿ ಮುಕ್ತಾಯವಾಗಲಿದ್ದು, ನ.16ರಂದು ಮುಂದಿನ ಒಂದು ವರ್ಷದ ಜಿ20 ಅಧ್ಯಕ್ಷೀಯ ಹುದ್ದೆ ಭಾರತಕ್ಕೆ ಹಸ್ತಾಂತರವಾಗಲಿದೆ.

ಇಂಡೋನೇಷ್ಯಾಗೆ ತೆರಳುವುದಕ್ಕೂ ಮುನ್ನ ಹೇಳಿಕೆ ನೀಡಿದ್ದ ಮೋದಿಯವರು, ಜಾಗತಿಕ ಅಭಿವೃದ್ಧಿ ಕುರಿತ ವಿಷಯಗಳಲ್ಲಿ ಭಾರತದ ಬದ್ಧತೆಯನ್ನು ವಿಶ್ವ ನಾಯಕರಿಗೆ ಮನವರಿಕೆ ಮಾಡಿಕೊಡಲಿದ್ದೇನೆ. ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ವಸುಧೈವ ಕುಟುಂಬಕಂ (ಒಂದು ಭೂಮಿ, ಒಂದು ಕುಟುಂಬ) ಎಂಬ ನೀತಿಯನ್ನು ಪಾಲಿಸಲಾಗುವುದು ಎಂದು ತಿಳಿಸಿಕೊಡಲಿದ್ದೇನೆ. ಜಿ.20 ಸಮೂಹದ ಅಧ್ಯಕ್ಷೀಯ ಹುದ್ದೆ ಭಾರತಕ್ಕೆ ಹಸ್ತಾಂತರವಾಗುವುದು ಭಾರತೀಯರಿಗೆ ಮಹತ್ವದ ಕ್ಷಣವಾಗಿರಲಿದೆ ಎಂದು ಹೇಳಿದರು.

ಜಿ20 ಶೃಂಗದಲ್ಲಿ ಉಕ್ರೇನ್ ಮಲಿನ ರಷ್ಯಾದ ಯುದ್ಧದ ಕುರಿತು ಜಾಗತಿಕ ನಾಯಕರು ಚರ್ಚೆ ನಡೆಸಲಿದ್ದಾರೆ. ಚೀನಾ, ಅಮೆರಿಕಾ, ಬ್ರಿಟನ್ ಮುಂತಾದ ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ಗೈರಾಗಲಿದ್ದಾರೆಂದು ಹೇಳಲಾಗುತ್ತಿದೆ.

ಜಿ20 ಸಮೂಹದಲ್ಲಿ ಜಗತ್ತಿನ ಪ್ರಮುಖ 20 ರಾಷ್ಟ್ರಗಳಿದ್ದು, ಈ ರಾಷ್ಟ್ರಗಳು ಜಗತ್ತಿನ ಒಟ್ಟು ಉತ್ಪನ್ನದಲ್ಲಿ ಶೇ.85ರಷ್ಟು ಪಾಲು ಹೊಂದಿವೆ. ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆ ಇಲ್ಲಿದ್ದು, ಜಾಗತಿಕ ವ್ಯಾಪಾರದ ಶೇ.75ರಷ್ಟು ಈ ದೇಶಗಳಲ್ಲೇ ನಡೆಯುತ್ತದೆ.

ಬಾಲಿಯಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಜಿ20 ಶೃಂಗಸಭೆಯ ಸಲುವಾಗಿ ಇಂಡೋನೇಷ್ಯಾಕ್ಕೆ ತೆರಳಿದ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಮಾಡಲಾಯಿತು.

ಈ ವೇಳೆ ಅನಿವಾಸಿ ಭಾರತೀಯರು ಪ್ರಧಾನಿ ಮೋದಿಯವರನ್ನು ಭೇಟಿಯಾದರು. ವಿಮಾನ ಇಳಿಯುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ರಾಜತಾಂತ್ರಿಕ ಗೌರವವನ್ನು ಮೋದಿಯವರು ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com