ಅರುಣಾಚಲದ ಸ್ಥಳಗಳ ಮರುನಾಮಕರಣಕ್ಕೆ ಭಾರತ ವಿರೋಧ; ನಮ್ಮ 'ಸಾರ್ವಭೌಮತ್ವ' ಎಂದ ಚೀನಾ

ಅರುಣಾಚಲ ಪ್ರದೇಶದ ಸ್ಥಳಗಳನ್ನು ಮರುನಾಮಕರಣ ಮಾಡುವ ಚೀನಾದ ಪ್ರಯತ್ನವನ್ನು ಭಾರತ ವಿರೋಧಿಸಿದ ನಂತರ, ಮಂಗಳವಾರ ಈ ಪ್ರದೇಶ ತನ್ನ "ಸಾರ್ವಭೌಮತ್ವ" ಎಂದು ಬೀಜಿಂಗ್ ಹೇಳಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಅರುಣಾಚಲ ಪ್ರದೇಶದ ಸ್ಥಳಗಳನ್ನು ಮರುನಾಮಕರಣ ಮಾಡುವ ಚೀನಾದ ಪ್ರಯತ್ನವನ್ನು ಭಾರತ ವಿರೋಧಿಸಿದ ನಂತರ, ಮಂಗಳವಾರ ಈ ಪ್ರದೇಶ ತನ್ನ "ಸಾರ್ವಭೌಮತ್ವ" ಎಂದು ಬೀಜಿಂಗ್ ಹೇಳಿಕೊಂಡಿದೆ.

ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, "ಜಂಗ್ನಾನ್‌(ಅರುಣಾಚಲ ಪ್ರದೇಶ) ಚೀನಾದ ಭೂಪ್ರದೇಶದ ಭಾಗವಾಗಿದೆ. ಜಂಗ್ನಾನ್‌ನ ಕೆಲವು ಭಾಗಗಳ ಹೆಸರುಗಳು ಚೀನಾ ಸರ್ಕಾರದ ಸಮರ್ಥ ಅಧಿಕಾರಿಗಳು ಪ್ರಮಾಣೀಕರಿಸಿದ್ದಾರೆ. ಇದು ಚೀನಾದ ಸಾರ್ವಭೌಮ ಹಕ್ಕುಗಳಲ್ಲಿದೆ" ಎಂದಿದ್ದಾರೆ.

ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಮಂಗಳವಾರ ಪ್ರತಿಪಾದಿಸಿದ್ದರು.

ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅರಿಂದಮ್ ಬಾಗ್ಚಿ, "ನಾವು ಇಂತಹ ವರದಿಗಳನ್ನು ನೋಡಿದ್ದೇವೆ. ಚೀನಾ ಇಂತಹ ಪ್ರಯತ್ನವನ್ನು ಮಾಡಿದ್ದು ಇದೇ ಮೊದಲಲ್ಲ. ನಾವು ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ" ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com