ಸ್ಪೈ ಬಲೂನ್ ವಿವಾದ: ತನ್ನ ವಾಯುಪ್ರದೇಶಕ್ಕೆ ಅಮೇರಿಕಾದಿಂದ ಸ್ಪೈ ಬಲೂನ್ ಬಂದಿತ್ತು- ಚೀನಾ ಆರೋಪ

ಚೀನಾ ಅಮೇರಿಕಾ ವಿರುದ್ಧ ತನ್ನ ವಾಯುಪ್ರದೇಶಕ್ಕೆ ಸ್ಪೈ ಬಲೂನ್ ಕಳಿಸಿರುವ ಗಂಭೀರ ಆರೋಪ ಹೊರಿಸಿದೆ.
ಅಮೆರಿಕ-ಚೀನಾ (ಸಂಗ್ರಹ ಚಿತ್ರ)
ಅಮೆರಿಕ-ಚೀನಾ (ಸಂಗ್ರಹ ಚಿತ್ರ)

ಬೀಜಿಂಗ್: ಚೀನಾ ಅಮೇರಿಕಾ ವಿರುದ್ಧ ತನ್ನ ವಾಯುಪ್ರದೇಶಕ್ಕೆ ಸ್ಪೈ ಬಲೂನ್ ಕಳಿಸಿರುವ ಗಂಭೀರ ಆರೋಪ ಹೊರಿಸಿದೆ. ಅಮೇರಿಕಾ ಇತ್ತೀಚೆಗೆ ಅಲಾಸ್ಕಾ ಕರಾವಳಿ ಪ್ರದೇಶದಲ್ಲಿ ಹಾರುತ್ತಿದ್ದ ಅಜ್ಞಾತ ವಸ್ತುವನ್ನು ಹೊಡೆದುರುಳಿಸಿದ ಬೆನ್ನಲ್ಲೇ ಆ ಅಜ್ಞಾತ ವಸ್ತುಗಳು ಚೀನಾದಿಂದ ಬೇಹುಗಾರಿಕೆಗಾಗಿ ಕಳಿಸಲ್ಪಟ್ಟ ಕಣ್ಗಾವಲು ವೈಮಾನಿಕ ಸಾಧಗಳಿರಬಹುದು ಎಂದು ಅಮೇರಿಕಾ ಶಂಕಿಸಿತ್ತು. 

ಈ ಬೆನ್ನಲ್ಲೇ ಚೀನಾ ಅಮೇರಿಕಾ ವಿರುದ್ಧ ಗಂಭೀರ ಆರೋಪ ಮಾಡಿದೆ. ಬೇಹುಗಾರಿಕೆ ಸಾಧನವನ್ನು ಅಮೇರಿಕಾ ಹೊಡೆದುರುಳಿಸಿದ ಬಳಿಕ  ಚೀನಾ- ಅಮೇರಿಕಾದ ನಡುವಿನ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಆದರೆ ಅಮೇರಿಕಾ ಹೊಡೆದುರುಳಿಸಿದ್ದ ಸಾಧನವನ್ನು ಚೀನಾ ಪ್ರಯಾಣಿಕ ಉದ್ದೇಶಕ್ಕಾಗಿ ಬಳಕೆಯಾಗುತ್ತಿದ್ದ ವೈಮಾನಿಕ ಸಾಧನ ಎಂದು ಸಮರ್ಥನೆ ನೀಡಿತ್ತು. 

ಈಗ ಚೀನಾ ಅಮೇರಿಕಾ ವಿರುದ್ಧ ಪೂರ್ವ ಕರಾವಳಿಗೆ ಸ್ಪೈ ಬಲೂನ್ ಅಥವಾ ಅಜ್ಞಾತ ವಸ್ತುವನ್ನು ಕಳಿಸಿರುವ ಆರೋಪ ಮಾಡಿದ್ದು, ಸೇನೆ ಅದನ್ನು ಹೊಡೆದುರುಳಿಸಲು ಯೋಜನೆ ಹೊಂದಿದೆ ಎಂದು ಹೇಳಿದ್ದಾರೆ.
 
2022 ರ ಜನವರಿಯಿಂದ ಅಮೇರಿಕಾ ತನ್ನ ವಾಯುಪ್ರದೇಶಕ್ಕೆ 10 ಕ್ಕೂ ಹೆಚ್ಚಿನ ಬಲೂನ್ ಗಳನ್ನು ಕಳಿಸಿದೆ. ಬೇರೆ ದೇಶಗಳ ವಾಯುಪ್ರದೇಶಕ್ಕೆ ಅಮೇರಿಕಾ ಕಾನೂನುಬಾಹಿರವಾಗಿ ಪ್ರವೇಶ ಮಾಡುವುದು ಸಾಮಾನ್ಯ ಸಂಗತಿಯಲ್ಲ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ. ಕಳೆದ ಒಂದು ವರ್ಷದಲ್ಲೇ ಅಮೇರಿಕಾ ಚೀನಾ ಮೇಲೆ 10 ಬಾರಿ ಅಕ್ರಮವಾಗಿ ಬಲೂನ್ ಗಳನ್ನು ಹಾರಿಬಿಟ್ಟಿದೆ ಎಂದು ಚೀನಾ ವಿದೇಶಾಂಗ ಅಧಿಕಾರಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com