ಸಿಂಗಾಪುರ ವಿಶ್ವದ ಅತ್ಯಂತ ದುಬಾರಿ ನಗರ, ಭಾರತದ ನಗರಗಳು ಈ ಪಟ್ಟಿಯಲ್ಲಿವೆ!

ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರವು ಕಳೆದ ಹನ್ನೊಂದು ವರ್ಷಗಳಲ್ಲಿ ಒಂಬತ್ತನೇ ಬಾರಿಗೆ ವಿಶ್ವದ ಅತ್ಯಂತ ದುಬಾರಿ ನಗರವಾಗಿ ಗುರುತಿಸಿಕೊಂಡಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಮುಂದುವರೆದಿದೆ.
ಸಿಂಗಾಪುರ ವಿಶ್ವದ ಅತ್ಯಂತ ದುಬಾರಿ ನಗರ
ಸಿಂಗಾಪುರ ವಿಶ್ವದ ಅತ್ಯಂತ ದುಬಾರಿ ನಗರ

ಮುಂಬೈ: ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರವು ಕಳೆದ ಹನ್ನೊಂದು ವರ್ಷಗಳಲ್ಲಿ ಒಂಬತ್ತನೇ ಬಾರಿಗೆ ವಿಶ್ವದ ಅತ್ಯಂತ ದುಬಾರಿ ನಗರವಾಗಿ ಗುರುತಿಸಿಕೊಂಡಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಮುಂದುವರೆದಿದೆ.

ಆ ಮೂಲಕ ಸಿಂಗಾಪುರ ಜ್ಯೂರಿಚ್‌ನೊಂದಿಗೆ ಸಮಬಲ ಸಾಧಿಸಿದ್ದು, ಅಮೆರಿಕದ ನ್ಯೂಯಾರ್ಕ್ ಈ ವರ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅಂತೆಯೇ ಏಷ್ಯಾದ ಎರಡನೇ ನಗರ ಹಾಂಗ್ ಕಾಂಗ್  ಸಹ ಅಗ್ರ ಐದರಲ್ಲಿ ಸ್ಥಾನ ಪಡೆದಿದೆ. ಜಗತ್ತಿನ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ, ಏಷ್ಯಾವು ಇತರ ಪ್ರದೇಶಗಳಿಗೆ ಹೋಲಿಸಿದರೆ ಸರಾಸರಿ ಕಡಿಮೆ ಬೆಲೆ ಏರಿಕೆಯನ್ನು ಕಾಣುತ್ತಲೇ ಇದೆ.

ಯೂರೋಪಿಯನ್ ಒಕ್ಕೂಟದ ವಿಶ್ವವ್ಯಾಪಿ ಜೀವನ ವೆಚ್ಚದ ಸಮೀಕ್ಷೆಯ ಅನ್ವಯ ನಾಲ್ಕು ಚೈನೀಸ್ ನಗರಗಳು ಅಂದರೆ ನಾನ್ಜಿಂಗ್, ವುಕ್ಸಿ, ಡೇಲಿಯನ್ ಮತ್ತು ಬೀಜಿಂಗ್ ಮತ್ತು ಎರಡು ಜಪಾನಿನ ನಗರಗಳಾದ ಒಸಾಕಾ ಮತ್ತು ಟೋಕಿಯೊ ಈ ವರ್ಷ ಶ್ರೇಯಾಂಕಗಳಲ್ಲಿ ಕುಸಿತಕಂಡಿವೆ. ಈ ನಗರಗಳಲ್ಲಿ ಸ್ಥಳೀಯ ಕರೆನ್ಸಿ ಪರಿಭಾಷೆಯಲ್ಲಿ ಸರಾಸರಿ ವರ್ಷದಿಂದ ವರ್ಷಕ್ಕೆ 7.4% ರಷ್ಟು ಏರಿಕೆಯಾಗಿದೆ ಎಂದು ಕಂಡುಹಿಡಿದಿದೆ. ಬೆಲೆಯ ಬೆಳವಣಿಗೆಯು ಕಳೆದ ವರ್ಷದ ಸಮೀಕ್ಷೆಯಲ್ಲಿ ವರದಿಯಾದ 8.1% ಕ್ಕಿಂತ ನಿಧಾನಗೊಂಡಿದೆ, ಆದರೆ 2017-21 ರಲ್ಲಿನ ಪ್ರವೃತ್ತಿಗಿಂತ ಗಮನಾರ್ಹವಾಗಿ ಉಳಿದಿದೆ.

ಬೆಲೆ ಸೂಚ್ಯಂಕದಲ್ಲಿನ 10 ವರ್ಗಗಳಲ್ಲಿ, ಯುಟಿಲಿಟಿ ಬೆಲೆಗಳು ಕಳೆದ ವರ್ಷದಲ್ಲಿ ಅತ್ಯಂತ ನಿಧಾನವಾಗಿ ಏರಿದೆ, ಇದು 2022 ರಲ್ಲಿ ಉಕ್ರೇನ್‌ನ ರಷ್ಯಾದ ಆಕ್ರಮಣ ಪರಿಣಾಮ ಎನ್ನಲಾಗುತ್ತಿದೆ. ಆದಾಗ್ಯೂ, ದಿನಸಿ ಬೆಲೆಗಳು ಬಲವಾಗಿ ಏರುತ್ತಲೇ ಇದ್ದು, ಈ ವರ್ಷದ ಶ್ರೇಯಾಂಕದಲ್ಲಿ ಕೆಳಗಿನ ಹತ್ತು ಸ್ಥಾನಗಳಲ್ಲಿ ಮೂರು ಏಷ್ಯಾದ ನಗರಗಳಾದ ಕರಾಚಿ, ಅಹಮದಾಬಾದ್ ಮತ್ತು ಚೆನ್ನೈ ಕೂಡ ಸ್ಥಾನ ಪಡೆದುಕೊಂಡಿದೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ನ Worldwide Cost of Living 2023 report ವರದಿಯಲ್ಲಿ ಉಲ್ಲೇಖಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com