ಪಾಕಿಸ್ತಾನ: ಭೀಕರ ರಸ್ತೆ ಅಪಘಾತದಲ್ಲಿ 18 ಮಂದಿ ಸಾವು, ಹಲವರಿಗೆ ಗಾಯ
ಪಾಕಿಸ್ತಾನದ ಖೈಬರ್ ಪಖ್ತುಂಖ್ವ ಪ್ರಾಂತ್ಯದಲ್ಲಿ ಪ್ರಯಾಣಿಕರ ರೈಲ್ವೆ ಬೋಗಿ ಮತ್ತು ಕಂಟೈನರ್ ಡಿಕ್ಕಿಯಾದ ಪರಿಣಾಮ ಕನಿಷ್ಠ 18 ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Published: 03rd February 2023 12:59 PM | Last Updated: 03rd February 2023 01:51 PM | A+A A-

ಸಾಂದರ್ಭಿಕ ಚಿತ್ರ
ಇಸ್ಲಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವ ಪ್ರಾಂತ್ಯದಲ್ಲಿ ಪ್ರಯಾಣಿಕರ ರೈಲ್ವೆ ಬೋಗಿ ಮತ್ತು ಕಂಟೈನರ್ ಡಿಕ್ಕಿಯಾದ ಪರಿಣಾಮ ಕನಿಷ್ಠ 18 ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸಿಂಧೂ ಹೆದ್ದಾರಿಯ ಕೊಹಾಟ್ ಸುರಂಗದ ಬಳಿ ಗುರುವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಮೃತದೇಹಗಳನ್ನು ಮತ್ತು ವಾಹನದೊಳಗೆ ಸಿಲುಕಿರುವ ಗಾಯಾಳುಗಳನ್ನು ಹೊರತೆಗೆಯಲು ರಕ್ಷಣಾ ತಂಡಗಳು ಪ್ರಯಾಣಿಕರ ಕೋಚ್ ಅನ್ನು ಕತ್ತರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕಂಟೈನರ್‌ನ ಅತಿವೇಗದಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಲೂಚಿಸ್ತಾನ: ಕಂದಕಕ್ಕೆ ಉರುಳಿಬಿದ್ದ ಬಸ್'ಗೆ ಹೊತ್ತಿಕೊಂಡ ಬೆಂಕಿ, 40 ಮಂದಿ ದುರ್ಮರಣ
ಪ್ಯಾಸೆಂಜರ್ ಕೋಚ್ ವಾಯುವ್ಯ ಲಕ್ಕಿ ಮಾರ್ವತ್ ಜಿಲ್ಲೆಯಿಂದ ಪ್ರಾಂತೀಯ ರಾಜಧಾನಿಯಾದ ಪೇಶಾವರಕ್ಕೆ ಪ್ರಯಾಣಿಸುತ್ತಿತ್ತು.
ಅಪಘಾತದ ನಂತರ, ರಕ್ಷಣಾ ತಂಡಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ.