ಭಾರತದ ಮುಂದೆ 1971ರ ಶರಣಾಗತಿ ಫೋಟೋ ಹಾಕಿ ಪಾಕಿಸ್ತಾನವನ್ನು ಅಪಹಾಸ್ಯ ಮಾಡಿದ ತಾಲಿಬಾನ್!

ತಾಲಿಬಾನ್ ನಾಯಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಪಾಕಿಸ್ತಾನವನ್ನು ಗೇಲಿ ಮಾಡಿದ್ದಾರೆ.
1971ರಲ್ಲಿ ಭಾರತಕ್ಕೆ ಶರಣಾಗಿದ್ದ ಪಾಕ್ ಫೋಟೋ
1971ರಲ್ಲಿ ಭಾರತಕ್ಕೆ ಶರಣಾಗಿದ್ದ ಪಾಕ್ ಫೋಟೋ

ಕಾಬೂಲ್(ನವದೆಹಲಿ): ತಾಲಿಬಾನ್ ನಾಯಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಪಾಕಿಸ್ತಾನವನ್ನು ಗೇಲಿ ಮಾಡಿದ್ದಾರೆ. ಅಫ್ಘಾನ್ ತಾಲಿಬಾನ್ ಮುಖಂಡ 1971ರ ಯುದ್ಧದಲ್ಲಿ ಭಾರತಕ್ಕೆ ಶರಣಾಗಿದ್ದಕ್ಕಾಗಿ ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ. ಈ ಕಾರಣದಿಂದಾಗಿ ಹೊಸ ದೇಶ ಬಾಂಗ್ಲಾದೇಶವನ್ನು ಉದಯವಾಯ್ತು ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಡಗುತಾಣಗಳ ವಿರುದ್ಧ ಸಂಭಾವ್ಯ ಸೇನಾ ಕಾರ್ಯಾಚರಣೆಯ ಬಗ್ಗೆ ಸುಳಿವು ನೀಡಿದರು. ಈ ಕುರಿತಂತೆ ಟ್ವೀಟ್ ಮಾಡಿರುವ ತಾಲಿಬಾನ್ ಸದಸ್ಯ ಅಹ್ಮದ್ ಯಾಸಿರ್, ತಾಲಿಬಾನ್ ವಿರುದ್ಧದ ಸಂಭಾವ್ಯ ದಾಳಿ ಕುರಿತಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದ ಮಂತ್ರಿಗಳೇ ಅದ್ಭುತ ಸರ್! ಸಿರಿಯಾದಲ್ಲಿರುವ ಕುರ್ದಿಗಳನ್ನು ಗುರಿಯಾಗಿಸಲು ಅಫ್ಘಾನಿಸ್ತಾನ ಟರ್ಕಿಯಲ್ಲ. ಇದು ಅಫ್ಘಾನಿಸ್ತಾನ ಹೆಮ್ಮೆಯ ಸಾಮ್ರಾಜ್ಯಗಳ ಸ್ಮಶಾನ. ನೀವು ನಮ್ಮ ಮೇಲೆ ದಾಳಿ ಮಾಡಲು ಯೋಚಿಸಿದರೆ, ನಿಮ್ಮ ಭಾರತದೊಂದಿಗೆ ನಾಚಿಕೆಗೇಡಿನ ಮಿಲಿಟರಿ ಒಪ್ಪಂದ ಪುನರಾವರ್ತಿಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪಾಕಿಸ್ತಾನಿ ಸೇನೆಯ 93,000 ಸೈನಿಕರು ಭಾರತೀಯ ಸೇನೆಯ ಮುಂದೆ ಶರಣಾಗಿದ್ದರು. ಇದು ಹೊಸ ರಾಷ್ಟ್ರ ಬಾಂಗ್ಲಾದೇಶ ಹುಟ್ಟಿಗೆ ಕಾರಣವಾಯಿತು. ಇದು ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ಮಿಲಿಟರಿ ಶರಣಾಗತಿಯಾಗಿದೆ ಎಂದು ಟ್ವೀಟಿಸಿದ್ದಾರೆ.

ಅಶ್ರಫ್ ಘನಿಯವರ ಸರ್ಕಾರದ ಪತನದ ನಂತರ ಆಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುವಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರವಹಿಸಿತ್ತು. ಆದರೆ ಕಳೆದ ವರ್ಷ ಆಗಸ್ಟ್‌ನಿಂದ ಪಾಕಿಸ್ತಾನದಲ್ಲಿ ಉಗ್ರ ದಾಳಿಗಳ ಹೆಚ್ಚಳ ಮತ್ತು ತಾಲಿಬಾನ್‌ನೊಂದಿಗಿನ ಗಡಿ ಕದನಗಳು ಉಭಯ ದೇಶಗಳ ನಡುವೆ ಭಾಂದವ್ಯಗಳು ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ.

ಆಗಸ್ಟ್ 2021ರಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವನ್ನು ಪದಚ್ಯುತಗೊಳಿಸಿದಾಗ, ಪಾಕಿಸ್ತಾನದ ಆಗಿನ ಗುಪ್ತಚರ ಮುಖ್ಯಸ್ಥರು ಸ್ವಾಧೀನಪಡಿಸಿಕೊಳ್ಳುವುದನ್ನು ಆಚರಿಸಲು ಕಾಬೂಲ್‌ಗೆ ತೆರಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com