ಪ್ರತೀಕಾರ ದಾಳಿಯಲ್ಲಿ 600 ಸೈನಿಕರ ಹತ್ಯೆಗೈದ ರಷ್ಯಾ: ಸುಳ್ಳು ಎಂದ ಉಕ್ರೇನ್

ಕ್ರಾಮರಸ್ಕ್‌ನಲ್ಲಿನ ತಾತ್ಕಾಲಿಕ ಸೇನಾ ನೆಲೆಯ ಮೇಲೆ ಸಶಸ್ತ್ರ ಪಡೆಗಳು ಭಾರೀ ಕ್ಷಿಪಣಿ ದಾಳಿ ನಡೆಸಿ 600ಕ್ಕೂ ಹೆಚ್ಚು ಉಕ್ರೇನ್‌ ಸೈನಿಕರನ್ನು ಕೊಂದಿವೆ ಎಂದು ರಷ್ಯಾ ಹೇಳಿಕೊಂಡಿದ್ದು, ಇದು ಸುಳ್ಳು ನಮ್ಮ ಸೈನಿಕರು ಸತ್ತಿಲ್ಲ ಎಂದು ಉಕ್ರೇನ್ ಹೇಳಿಕೊಂಡಿದೆ.
ಕೈವ್‌ನಲ್ಲಿ ರಷ್ಯಾದ ದಾಳಿ ನಡೆಸಿರುವುದು.
ಕೈವ್‌ನಲ್ಲಿ ರಷ್ಯಾದ ದಾಳಿ ನಡೆಸಿರುವುದು.

ಮಾಸ್ಕೊ: ಕ್ರಾಮರಸ್ಕ್‌ನಲ್ಲಿನ ತಾತ್ಕಾಲಿಕ ಸೇನಾ ನೆಲೆಯ ಮೇಲೆ ಸಶಸ್ತ್ರ ಪಡೆಗಳು ಭಾರೀ ಕ್ಷಿಪಣಿ ದಾಳಿ ನಡೆಸಿ 600ಕ್ಕೂ ಹೆಚ್ಚು ಉಕ್ರೇನ್‌ ಸೈನಿಕರನ್ನು ಕೊಂದಿವೆ ಎಂದು ರಷ್ಯಾ ಹೇಳಿಕೊಂಡಿದ್ದು, ಇದು ಸುಳ್ಳು ನಮ್ಮ ಸೈನಿಕರು ಸತ್ತಿಲ್ಲ ಎಂದು ಉಕ್ರೇನ್ ಹೇಳಿಕೊಂಡಿದೆ.

ನಮ್ಮ ಕ್ಷಿಪಣಿಗಳು 1,300ಕ್ಕೂ ಹೆಚ್ಚು ಮಂದಿ ಇದ್ದ ಉಕ್ರೇನಿಯನ್ ಸೈನ್ಯದ ಕ್ರಾಮಾಟೋರ್ಸ್‌ನಲ್ಲಿರುವ ಎರಡು ಬ್ಯಾರಕ್‍ಗಳಿಗೆ ಅಪ್ಪಳಿಸಿದ್ದು, ಅವರಲ್ಲಿ 600 ಮಂದಿ ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿಕೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಉಕ್ರೇನ್ ಸೈನ್ಯ ರಷ್ಯಾದ ಸೈನಿಕರ ಬ್ಯಾರಕ್ ಮೇಲೆ ದಾಳಿ ನಡೆಸಿ 89 ಸೈನಿಕರ ಸಾವಿಗೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ರಷ್ಯಾ ಸೈನ್ಯ ಉಕ್ರೇನ್ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಉಕ್ರೇನ್ ಸೈನ್ಯದ ಅಧಿಕಾರಿಗಳು ರಷ್ಯಾ ದಾಳಿ ನಡೆಸಿರುವುದು ನಿಜ ಆದರೆ ನಮ್ಮ ಕಟ್ಟಡ ಸಹಿತ ಕೆಲ ಪ್ರದೇಶಗಳಿಗೆ ಹಾನಿಯಾಗಿದೆ. ಆದರೆ ನಮ್ಮ ಸೈನಿಕರು ಈ ದಾಳಿಯಲ್ಲಿ ಸಾವನ್ನಪ್ಪಿಲ್ಲ ಎಂದು ತಿಳಿಸಿದೆ.

ಈ ನಡುವೆ ದಾಳಿ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಜಗತ್ತಿನ ಮುಂದೆ ರಷ್ಯಾ ಸುಳ್ಳು ಹೇಳಿಕೆ ನೀಡುವ ಮೂಲಕ ಮತ್ತೆ ತನ್ನತ್ತ ಸೆಳೆಯಲು ನೋಡುತ್ತಿದೆ. ರಷ್ಯಾ ಈ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೇಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com