ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ವಿಜ್ಞಾನಿ ನಿಗೂಢ ಸಾವು; ಕೊಲೆ ಶಂಕೆ

ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಸಂಶೋಧನೆಯಲ್ಲಿ ಮಹತ್ತರ ಪಾತ್ರವಹಿಸಿದ್ದ ಪ್ರಮುಖ ವಿಜ್ಞಾನಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದು, ಕೊಲೆ ಶಂಕೆ ವ್ಯಕ್ತವಾಗುತ್ತಿದೆ.
ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ವಿಜ್ಞಾನಿ ನಿಗೂಢ ಸಾವು
ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ವಿಜ್ಞಾನಿ ನಿಗೂಢ ಸಾವು

ಮಾಸ್ಕೋ: ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಸಂಶೋಧನೆಯಲ್ಲಿ ಮಹತ್ತರ ಪಾತ್ರವಹಿಸಿದ್ದ ಪ್ರಮುಖ ವಿಜ್ಞಾನಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದು, ಕೊಲೆ ಶಂಕೆ ವ್ಯಕ್ತವಾಗುತ್ತಿದೆ.

ಹೌದು..ಕೋವಿಡ್‌ ಲಸಿಕೆ ‘ಸ್ಪುಟ್ನಿಕ್‌’ಅನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಷ್ಯಾ ವಿಜ್ಞಾನಿ ಆ್ಯಂದ್ರೆ ಬೊಟಿಕೋವ್‌ ಅವರ ಶವ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ‘ಬೊಟಿಕೋವ್‌ ಇಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಕುತ್ತಿಗೆಗೆ ಬೆಲ್ಟ್‌ ಬಿಗಿದು ಅವರನ್ನು ಗುರುವಾರ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ವರದಿ ಮಾಡಿದೆ.

47 ವರ್ಷದ ಬೊಟಿಕೋವ್ ಅವರು ಗಾಮಲೆಯಾ ನ್ಯಾಷನಲ್ ರಿಸರ್ಚ್ ಸೆಂಟರ್‌ ಫಾರ್ ಇಕೊಲಾಜಿ ಅಂಡ್ ಮ್ಯಾಥೆಮ್ಯಾಟಿಕ್ಸ್ ನಲ್ಲಿ ಹಿರಿಯ ಸಂಶೋಧಕರಾಗಿದ್ದರು. ಕೋವಿಡ್‌ ಲಸಿಕೆ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2021ರಲ್ಲಿ ಅವರಿಗೆ ದೇಶದ ‘ಆರ್ಡರ್‌ ಆಫ್‌ ಮೆರಿಟ್’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಶಂಕಿತನೋರ್ವನ ಬಂಧನ
ಇನ್ನು ಬೊಟಿಕೋವ್‌ ಅವರ ಸಾವಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಶಂಕಿತನೋರ್ವನನ್ನು ವಶಕ್ಕೆ ಪಡೆದಿದ್ದಾರೆ. ಆಂಡ್ರೆ ಬೊಟಿಕೋವ್ ಅವರನ್ನು ಇಲ್ಲಿನ ಅವರ ಅಪಾರ್ಟ್‌ಮೆಂಟ್‌ನಲ್ಲಿ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಕೊಲೆಯ ಹಿಂದೆ ಕೌಟುಂಬಿಕ ದ್ವೇಷ ಇರಬಹುದು ಎಂದು ಶಂಕಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com