ಆಸ್ಟ್ರೇಲಿಯಾದ ಹಿಂದೂ ದೇವಾಲಯದಲ್ಲಿ ಮತ್ತೆ ಭಾರತ ವಿರೋಧಿ ಬರಹ: 2 ತಿಂಗಳಲ್ಲಿ 4ನೇ ಘಟನೆ, ಖಲಿಸ್ತಾನಿ ಬೆಂಬಲಿಗರಿಂದ ಕೃತ್ಯ

ಆಸ್ಟ್ರೇಲಿಯಾದ ಬ್ರಿಸ್ಬೇನ್'ನಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಖಲಿಸ್ತಾನಿ ವಿಧ್ವಂಸಕ ಬರಹಗಳನ್ನು ಗೀಚಿ ದೇವಸ್ಥಾನವನ್ನು ವಿರೂಪಗೊಳಿಸಿರುವ ಘಟನೆ ಶನಿವಾರ ನಡೆದಿದೆ. ಕಳೆದ ಎರಡು ತಿಂಗಳಲ್ಲಿ ಆಸ್ಟ್ರೇಲಿಯಾದ ಹಿಂದು ದೇವಾಲಯಗಳ ಮೇಲೆ ನಡೆಯುತ್ತಿರುವ 4ನೇ ದಾಳಿ ಇದಾಗಿದೆ.
ಆಸ್ಟ್ರೇಲಿಯಾದಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನ.
ಆಸ್ಟ್ರೇಲಿಯಾದಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನ.

ಬ್ರಿಸ್ಬೇನ್: ಆಸ್ಟ್ರೇಲಿಯಾದ ಬ್ರಿಸ್ಬೇನ್'ನಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಖಲಿಸ್ತಾನಿ ವಿಧ್ವಂಸಕ ಬರಹಗಳನ್ನು ಗೀಚಿ ದೇವಸ್ಥಾನವನ್ನು ವಿರೂಪಗೊಳಿಸಿರುವ ಘಟನೆ ಶನಿವಾರ ನಡೆದಿದೆ. ಕಳೆದ ಎರಡು ತಿಂಗಳಲ್ಲಿ ಆಸ್ಟ್ರೇಲಿಯಾದ ಹಿಂದು ದೇವಾಲಯಗಳ ಮೇಲೆ ನಡೆಯುತ್ತಿರುವ 4ನೇ ದಾಳಿ ಇದಾಗಿದೆ.

ಖಲಿಸ್ತಾನಿ ಬೆಂಬಲಿಗರು ದೇವಸ್ಥಾನವನ್ನು ವಿರೂಪಗೊಳಿಸಿದ್ದಾರೆ. ಗೋಡೆ ಮೇಲೆ ಭಾರತಕ್ಕೆ ದಿಕ್ಕಾರ, ಮೋದಿ ಟೆರರಿಸ್ಟ್ ಎಂದೆಲ್ಲಾ ಗೀಚಲಾಗಿದೆ. ಅಲ್ಲದೆ, ಖಲಿಸ್ತಾನಿ ರಾಷ್ಟ್ರದ ಹೋರಾಟಕ್ಕೆ ಅಡ್ಡಿ ಮಾಡದಂತೆ ಪಂಜಾಬಿಗಳಿಗೆ ಕರೆ ನೀಡಲಾಗಿದೆ.

ಶನಿವಾರ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ದೇವಸ್ಥಾನದ ಅಧ್ಯಕ್ಷ ಸತೀಂದರ್ ಶುಕ್ಲಾ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಬ್ರಿಸ್ಬೇನ್'ನ ಗಾಯತ್ರಿ ದೇವಸ್ಥಾನಕ್ಕೆ ಪಾಲಿಸ್ತಾನ ಮೂಲದ ಖಲಿಸ್ತಾನಿ ಬೆಂಬಲಿಗರಿಂದ ಬೆದರಿಕೆ ಕರೆ ಬಂದಿತ್ತು. ಇದು ದ್ವೇಷವನ್ನು ಹರಡುವ ಮೂಲಕ ಆಸ್ಟ್ರೇಲಿಯಾದ ಹಿಂದೂಗಳನ್ನು ಹೆದರಿಸುವ ಸಿಖ್ ಫಾರ್ ಜಸ್ಟೀಸ್'ನ ಮಾದರಿಯಾಗಿದೆ ಎಂದು ಹಿಂದೂ ಮಾನವ ಹಕ್ಕುಗಳ ನಿರ್ದೇಶಕಿ ಸಾರಾ ಎಲ್ ಗೇಟ್ಸ್ ಅವರು ಹೇಳಿದ್ದಾರೆ.

2023 ರಿಂದ ಈಚೆಗೆ ಆಸ್ಟ್ರೇಲಿಯಾದ ಹಿಂದೂ ದೇವಾಲಯಗಳು ಮೇಲೆ ಭಾರತ ವಿರೋಧಿ ಘೋಷಣೆಗಳು ಮತ್ತು ಗೀಚು ಬರಹಗಳೊಂದಿಗೆ ಗೋಡೆಗಳನ್ನು ವಿರೂಪಗೊಳಿಸುತ್ತಿರುವ ಘಟನೆಗಳು ಹೆಚ್ಚಿದ್ದು, ಖಲಿಸ್ತಾನ ಬೆಂಬಲಿಗರ ದಾಳಿ ಹೆಚ್ಚಿದೆ.

ಕಳೆದ ತಿಂಗಳು, ಬ್ರಿಸ್ಬೇನ್‌ನ ಗಾಯತ್ರಿ ಮಂದಿರಕ್ಕೆ ಪಾಕಿಸ್ತಾನ ಮೂಲದ ಖಲಿಸ್ತಾನ್ ಉಗ್ರಗಾಮಿಗಳಿಂದ ಬೆದರಿಕೆ ಕರೆಗಳು ಬಂದಿತ್ತು. ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯನ್ನು ಬೆಂಬಲಿಸುವಂತೆ ಹಿಂದೂ ಸಮುದಾಯವನ್ನು ಕೇಳಿಕೊಳ್ಳಲಾಗಿತ್ತು.

 “ಖಾಲಿಸ್ತಾನ್ ಬೆಂಬಲಿಗರು ಆಸ್ಟ್ರೇಲಿಯನ್ ಹಿಂದೂ ಸಮುದಾಯವನ್ನು ಭಯಭೀತಗೊಳಿಸುತ್ತಿದ್ದಾರೆ. ನಮ್ಮ ಧರ್ಮವನ್ನು ಆಚರಿಸಲು ಮತ್ತು ದೇವಾಲಯಗಳಿಗೆ ಭೇಟಿ ನೀಡುವುದಕ್ಕೆ ಹಿಂಜರಿಯುವಂತೆ ಮಾಡುವುದು ಅವರ ಉದ್ದೇಶ ಎಂದು ಬ್ರಿಸ್ಬೇನ್ ನಿವಾಸಿಯೊಬ್ಬರು ಆಸ್ಟ್ರೇಲಿಯಾ ಟುಡೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com