ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್: ಕೋರ್ಟ್ ಆದೇಶದ ನಂತರ ಬಂಧನ ಕಾರ್ಯಾಚರಣೆ ನಿಲ್ಲಿಸಿದ ಪೊಲೀಸರು

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಗುರುವಾರ ಬೆಳಗ್ಗೆ 10 ಗಂಟೆಯವರೆಗೂ ಬಂಧಿಸದಂತೆ ಲಾಹೋರ್ ಹೈಕೋರ್ಟ್ (ಎಲ್‌ಎಚ್‌ಸಿ) ಆದೇಶಿಸಿದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಗುರುವಾರ ಬೆಳಗ್ಗೆ 10 ಗಂಟೆಯವರೆಗೂ ಬಂಧಿಸದಂತೆ ಲಾಹೋರ್ ಹೈಕೋರ್ಟ್ (ಎಲ್‌ಎಚ್‌ಸಿ) ಆದೇಶಿಸಿದೆ.

ಈ ಆದೇಶ ಹಿನ್ನಲೆಯಲ್ಲಿ ಇಮ್ರಾನ್ ಖಾನ್ ಅವರು ಜಮಾನ್ ಪಾರ್ಕ್ ನಿವಾಸಕ್ಕೆ ತೆರಳಿದ್ದ ಪೊಲೀಸರು ಇದೀಗ ಕಾರ್ಯಾಚರಣೆಯನ್ನು ನಿಲ್ಲಿಸಿ ವಾಪಸಾಗಿದ್ದಾರೆ.

ಇದಕ್ಕೂ ಮೊದಲು ತೋಷಖಾನ ಪ್ರಕರಣದಲ್ಲಿ ಇಮ್ರಾನ್ ಖಾನ್ ಬಂಧಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾನ್ ಪಾರ್ಕ್ ನಿವಾಸದ ಬಳಿ ತೆರಳಿದ್ದರು. ಈ ವೇಳೆ ಇದನ್ನು ತಡೆಯಲು ಇಮ್ರಾನ್ ಖಾನ್ ನಿವಾಸದ ಎದುರು ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ನೆರೆದಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಜಮಾನ್ ಪಾರ್ಕ್ ನಿವಾಸದ ಬಳಿ ಅಶ್ರುವಾಯು ಸಿಡಿಸಿದರು.

ಪಾಕ್ ಪ್ರಧಾನಿಯಾಗಿದ್ದಾಗ ಸ್ವೀಕರಿಸಿದ್ದ ಉಡುಗೊರೆಗಳನ್ನು ಮಾರಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ. ಇನ್ನು ಇಮ್ರಾನ್ ಖಾನ್ ಬಂಧನದ ಭೀತಿಯಿಂದಾಗಿ ತಮ್ಮ ಬೆಂಬಲಿಗರಿಗೆ ವೀಡಿಯೋ ಸಂದೇಶ ನೀಡಿದ್ದು ನಿಜವಾದ ಸ್ವಾತಂತ್ರ್ಯಕ್ಕಾಗಿ ಬೆಂಬಲಿಗರು ಹೊರಬರಬೇಕು ಎಂದು ಕರೆ ನೀಡಿದ್ದರು. ಹೀಗಾಗಿ ಇಮ್ರಾನ್ ನಿವಾಸದ ಎದುರು ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. 

ಈ ವೇಳೆ ಪೊಲೀಸರು ಮತ್ತು ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com