ಉಕ್ರೇನ್ ಸಂಘರ್ಷದ ನಡುವೆ ಭಾರತಕ್ಕೆ ತೈಲ ರಫ್ತು 22 ಪಟ್ಟು ಏರಿಕೆ: ರಷ್ಯಾ

ಉಕ್ರೇನ್‌ನಲ್ಲಿನ ಸಂಘರ್ಷದ ನಂತರ ಯುರೋಪಿಯನ್ ಖರೀದಿದಾರರು ಇತರ ಮಾರುಕಟ್ಟೆಗಳತ್ತ ಮುಖ ಮಾಡಿದ್ದರಿಂದ ಕಳೆದ ವರ್ಷ ಭಾರತಕ್ಕೆ ರಷ್ಯಾದ ತೈಲ ಮಾರಾಟವು ಇಪ್ಪತ್ತು ಪಟ್ಟುಕ್ಕಿಂತ ಹೆಚ್ಚಾಗಿದೆ ಎಂದು ರಷ್ಯಾದ ಉಪ ಪ್ರಧಾನ ಮಂತ್ರಿ ಮಂಗಳವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಾಸ್ಕೋ: ಉಕ್ರೇನ್‌ನಲ್ಲಿನ ಸಂಘರ್ಷದ ನಂತರ ಯುರೋಪಿಯನ್ ಖರೀದಿದಾರರು ಇತರ ಮಾರುಕಟ್ಟೆಗಳತ್ತ ಮುಖ ಮಾಡಿದ್ದರಿಂದ ಕಳೆದ ವರ್ಷ ಭಾರತಕ್ಕೆ ರಷ್ಯಾದ ತೈಲ ಮಾರಾಟವು ಇಪ್ಪತ್ತು ಪಟ್ಟುಕ್ಕಿಂತ ಹೆಚ್ಚಾಗಿದೆ ಎಂದು ರಷ್ಯಾದ ಉಪ ಪ್ರಧಾನ ಮಂತ್ರಿ ಮಂಗಳವಾರ ಹೇಳಿದ್ದಾರೆ.

ಮಾಸ್ಕೋ ನೆರೆಯ ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸಿದ ನಂತರ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ರಷ್ಯಾದ ಇಂಧನ ಪೂರೈಕೆಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದರಿಂದ ರಷ್ಯಾ ತನ್ನ ತೈಲ ರಫ್ತುಗಳನ್ನು ಕಳೆದ ವರ್ಷ ಭಾರತ ಮತ್ತು ಚೀನಾಕ್ಕೆ ವರ್ಗಾಯಿಸಿತ್ತು.

ಯೂರೋಪಿಯನ್ ರಾಷ್ಟ್ರಗಳು  ಡಿಸೆಂಬರ್‌ನಲ್ಲಿ ರಷ್ಯಾದ ಸಮುದ್ರಯಾನ ತೈಲದ ಮೇಲೆ ನಿರ್ಬಂಧವನ್ನು ವಿಧಿಸಿತು, ಜೊತೆಗೆ ರಷ್ಯಾದ ಕಚ್ಚಾ ತೈಲದ ಮೇಲಿನ ಬೆಲೆಯ ಮಿತಿಯನ್ನು ಏಳು ಕೈಗಾರಿಕೀಕರಣದ ಶಕ್ತಿಗಳ ಗುಂಪಿನೊಂದಿಗೆ ಒಪ್ಪಿಕೊಂಡಿತು. ಈ ಬದಲಾವಣೆಯಿಂದ ಚೀನಾ ಮತ್ತು ಭಾರತ ಅಗ್ಗದ ದರದಲ್ಲಿ ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿವೆ. 

ನಮ್ಮ ಹೆಚ್ಚಿನ ಇಂಧನ ಸಂಪನ್ಮೂಲಗಳನ್ನು ಇತರ ಮಾರುಕಟ್ಟೆಗಳು, ಸ್ನೇಹಪರ ದೇಶಗಳ ಮಾರುಕಟ್ಟೆಗಳಿಗೆ ಮರು ನಿರ್ದೇಶಿಸಲಾಗಿದೆ ಎಂದು  ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ನೊವಾಕ್ ಹೇಳಿರುವುದಾಗಿ ರಷ್ಯಾದ ನ್ಯೂಸ್ ಏಜೆನ್ಸಿಗಳು ವರದಿ ಮಾಡಿವೆ. ಕಳೆದ ವರ್ಷ ಭಾರತಕ್ಕೆ ತೈಲ ಪೂರೈಕೆಯಲ್ಲಿ 22 ಪಟ್ಟು ಹೆಚ್ಚಾಗಿದೆ ಎಂದು ನೊವಾಕ್ ಹೇಳಿದ್ದಾರೆ. ಉದ್ಯಮದಲ್ಲಿ ಮಾಡಿದ ಮಹತ್ತರವಾದ ಕೆಲಸದ ಪರಿಣಾಮವಾಗಿ" ಚೀನಾಕ್ಕೆ ತೈಲ ಪೂರೈಕೆ ಹೆಚ್ಚುತ್ತಿದೆ ಎಂದು  ರಷ್ಯಾದ ಇಂಧನ ಕ್ಷೇತ್ರದ ಉಸ್ತುವಾರಿ ವಹಿಸಿರುವ ನೋವಾಕ್ ತಿಳಿಸಿದ್ದಾರೆ.

ಒಪೆಕ್ ಕಚ್ಚಾ ತೈಲದ ಪ್ರಮುಖ ಉತ್ಪಾದಕ ಸಂಸ್ಥೆಯಾಗಿದೆ. ಪಾಶ್ಚಿಮಾತ್ಯ ನಿರ್ಬಂಧಗಳ ಪರಿಣಾಮ ಈ ತಿಂಗಳು ದಿನಕ್ಕೆ 5 ಲಕ್ಷ ಬ್ಯಾರೆಲ್ ಗಳಷ್ಟು ಕಚ್ಚಾ ಉತ್ಪಾದನೆಯನ್ನು ಕಡಿತಗೊಳಿಸಿದೆ. ಶೇ. 50 ರಷ್ಟು ದೈನಂದಿನ ತೈಲ ಉತ್ಪಾದನೆಯ ಕಡಿತವು ಜೂನ್ ವರೆಗೆ ಮುಂದುವರೆಯುತ್ತದೆ ಎಂದು ಅಲೆಕ್ಸಾಂಡರ್ ನೋವಾಕ್ ಪ್ರಕಟಿಸಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಫೆಬ್ರವರಿಯಲ್ಲಿ ರಷ್ಯಾದ ತೈಲ ರಫ್ತು ಆದಾಯವು ಅರ್ಧದಷ್ಚು ಕುಸಿದಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com