ಟೆಕ್ಸಾಸ್ ನ ದಲ್ಲಾಸ್ ನಲ್ಲಿ ಶೂಟೌಟ್: 8 ಮಂದಿ ಸಾವು, 7 ಜನರಿಗೆ ಗಾಯ
ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಬಂದೂಕುಧಾರಿಯೊಬ್ಬ ಮಾಲ್ನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
Published: 07th May 2023 09:10 AM | Last Updated: 07th May 2023 09:10 AM | A+A A-

ಸಂಗ್ರಹ ಚಿತ್ರ
ದಲ್ಲಾಸ್: ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಬಂದೂಕುಧಾರಿಯೊಬ್ಬ ಮಾಲ್ನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಬಂಧೂಕುಧಾರಿಯೊಬ್ಬ ಇದ್ದಕ್ಕಿದ್ದಂತೆ ಮಾಲ್ ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ನೂರಾರು ಮಂದಿ ಭೀತಿಯಲ್ಲಿ ಅತ್ತಿತ್ತ ಓಡಿದ್ದಾರೆ.
ಟೆಕ್ಸಾಸ್‌ನಲ್ಲಿರುವ ಅಲೆನ್ ಪ್ರೀಮಿಯಂ ಔಟ್‌ಲೆಟ್‌ಗಳ ಮಾಲ್ ನಲ್ಲಿ ಘಟನೆ ನಡೆದಿದ್ದು, ದಾಳಿ ನಡೆಸಿದ ವ್ಯಕ್ತಿ ಕೂಡ ಮೃತಪಟ್ಟಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಓರ್ವ ಶಂಕಿತ ದಾಳಿಕೋರ ಮೃತಪಟ್ಟಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯಲ್ಲಿ ಮಕ್ಕಳು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆಂದು ತಿಳಿಸಿದ್ದಾರೆ.
ಅಮೆರಿಕಾದಲ್ಲಿ ಶೂಟೌಟ್ ಪ್ರಕರಣಗಳು ಸರ್ವೆಸಾಮಾನ್ಯದಂತೆ ನಡೆಯುತ್ತಿದೆ. 2023 ರಲ್ಲಿ ಇದುವರೆಗೆ 198 ಶೂಟೌಟ್ ಗಳು ನಡೆದಿದೆ.