'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ': ಮಾಲ್ಡೀವ್ಸ್ ಅಧ್ಯಕ್ಷರ ಅಚ್ಚರಿ ಸಂದೇಶ!

ಇಂಡಿಯಾ ಔಟ್ ಎಂಬ ಭಾರತ ವಿರೋಧಿ ಪ್ರಚಾರದ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu) 'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು
ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು

ನವದೆಹಲಿ: ಇಂಡಿಯಾ ಔಟ್ ಎಂಬ ಭಾರತ ವಿರೋಧಿ ಪ್ರಚಾರದ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu) 'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಭಾರತದ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಮೊಹಮ್ಮದ್ ಮುಯಿಜ್ಜು ಅವರು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯೇಕ ಸಂದೇಶಗಳಲ್ಲಿ, ಅಧ್ಯಕ್ಷ ಮುಯಿಝು ಅವರು ಭಾರತದ 75 ನೇ ಗಣರಾಜ್ಯೋತ್ಸವವನ್ನು ಸ್ಮರಿಸಿದ್ದಾರೆ ಮತ್ತು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಭಾಶಯ ಕೋರಿರುವ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು, ಮಾಲ್ಡೀವ್ಸ್ ಮತ್ತು ಭಾರತದ್ದು ಶತಮಾನಗಳ ಸ್ನೇಹ (Centuries of Friendship) ಎಂದು ಹೇಳಿದ್ದು, ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಅರ್ಥದಲ್ಲಿ ಸ್ಥಾಪಿಸಲಾದ ಎರಡು ರಾಷ್ಟ್ರಗಳ ನಡುವಿನ ಶತಮಾನಗಳ ಹಳೆಯ ಸ್ನೇಹ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂತೆಯೇ ಮುಂಬರುವ ವರ್ಷಗಳಲ್ಲಿ ಭಾರತ ಸರ್ಕಾರ ಮತ್ತು ಜನರಿಗೆ ನಿರಂತರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ದೊರೆಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ, ಇದೊಂದು ಅತ್ಯುತ್ತಮ ಪ್ರವಾಸಿತಾಣವಾಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಕುರಿತು ಮಾಲ್ಡೀವ್ಸ್ ಕೆಲವು ಸಚಿವರು ಮೋದಿ ಅವರು ವಿರುದ್ಧ ನಿಂದನಾತ್ಮಕ ಭಾಷೆ ಬಳಸಿ ಟೀಕಿಸಿದ್ದರು. ಇದರಿಂದಾಗಿ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಈ ಶತಮಾನದ ದೋಸ್ತಿ ಎಂಬ ಹೇಳಿಕೆ ಮಹತ್ವದ ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com