ಕರಾಚಿ: ಪಾಕಿಸ್ತಾನದ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶನಿವಾರ ಮತ್ತೊಂದು ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ.
ಜಿದ್ದಾದಿಂದ ಬಂದ PIA ವಿಮಾನವೊಂದರಲ್ಲಿ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ಹೇಳಿರುವುದಾಗಿ ARY ನ್ಯೂಸ್ ವರದಿ ಮಾಡಿದೆ.
ಬಳಿಕ ಆ ವ್ಯಕ್ತಿಯನ್ನು ಹೆಚ್ಚುವರಿ ಪರೀಕ್ಷೆ ಮತ್ತು ಆರೈಕೆಗಾಗಿ ಸಿಂಧ್‌ನ ಸರ್ಕಾರಿ ಆಸ್ಪತ್ರೆಯೊಂದರ ಪ್ರತ್ಯೇಕ ವಾರ್ಡ್‌ಗೆ ಕರೆದೊಯ್ಯಲಾಯಿತು. ಈ ವಾರದ ಆರಂಭದಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮಂಕಿ ಪಾಕ್ಸ್ ನ ಐದನೇ ಪ್ರಕರಣ ವರದಿಯಾಗಿತ್ತು
33 ವರ್ಷದ ಸಂತ್ರಸ್ತ ಖೈಬರ್ ಪಖ್ತುಂಖ್ವಾದ ಪೇಶಾವರ ನಿವಾಸಿ ಎಂದು ಅಧಿಕಾರಿಗಳು ಹೇಳಿರುವುದಾಗಿ ARY ನ್ಯೂಸ್ ವರದಿ ಮಾಡಿದೆ. ಈತ ಸೆಪ್ಟೆಂಬರ್ 7 ರಂದು ಸೌದಿ ಅರೇಬಿಯಾದಿಂದ ಪಾಕಿಸ್ತಾನಕ್ಕೆ ಹಿಂದಿರುಗಿದ ನಂತರ ಆತನಿಗೆ ಮಂಕಿಪಾಕ್ಸ್ ಇರುವುದಾಗಿ ಖೈಬರ್ ಆಸ್ಪತ್ರೆ ದೃಢಪಡಿಸಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
Advertisement