Hezbollah: ಸಾವಿರಾರು ಪೇಜರ್ ಗಳು ಸ್ಫೋಟಗೊಂಡಿದ್ದು ಹೇಗೆ? ಇಸ್ರೇಲ್ ಮಾಡಿದ್ದಾದರೂ ಏನು?

ಈ ಪೇಜರ್ ತರಂಗಗಳನ್ನೇ ಇಸ್ರೇಲ್ ತಂತ್ರಜ್ಞರು ಹ್ಯಾಕ್ ಮಾಡಿದ್ದಾರೆ. ಹಾಗೆ ಹ್ಯಾಕ್ ಮಾಡಿದ ನಂತರ, ಅವುಗಳಲ್ಲಿ ಬಳಕೆಯಾಗುವ ಟೆಕ್ಸ್ಟ್ ಮಾದರಿಯ ಡೇಟಾ ಗಳನ್ನು ಸಂಗ್ರಹಿಸಿ ಅವುಗಳಲ್ಲಿ ಯಾರ ಸಂದೇಶಗಳಲ್ಲಿ ಉಗ್ರವಾದಿ ಕೃತ್ಯಗಳಿಗೆ ಸಂಬಂಧಿಸಿದ ಸಂವಹನ ನಡೆಸಿದ್ದಾರೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ.
Pager Attacks
ಪೇಜರ್ ಸ್ಫೋಟ
Updated on

ನವದೆಹಲಿ: ಮೊಬೈಲ್ ಬಳಸಿದರೆ ಹ್ಯಾಕ್ ಮಾಡಲಾಗುತ್ತದೆ ಎಂಬ ಭಯಕ್ಕೆ ಪೇಜರ್ ಬಳಸುತ್ತಿದ್ದ ಹೆಜ್ಬುಲ್ಲಾ ಬಂಡುಕೋರರಿಗೆ ಮರ್ಮಾಘಾತ ಎದುರಾಗಿದ್ದು, ಏಕಕಾಲದಲ್ಲಿ ಸಾವಿರಾರು ಪೇಜರ್ ಗಳು ಸ್ಫೋಟಗೊಂಡು ಹತ್ತಾರು ಮಂದಿ ಬಲಿಯಾಗಿದ್ದಾರೆ. ಇಷ್ಟಕ್ಕೂ ಪೇಜರ್ ಗಳು ಸ್ಫೋಟಗೊಂಡಿದ್ದು ಏಕೆ..? ಇಲ್ಲಿದೆ ಮಾಹಿತಿ...

ಲೆಬನಾನ್ ನಲ್ಲಿ ಹೆಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್ ಗಳು ಏಕಾಏಕಿ ಬ್ಲಾಸ್ಟ್ ಆಗಿ ಕನಿಷ್ಠ 9 ಮಂದಿ ಸಾವಿಗೀಡಾಗಿ 2,800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಸುಮಾರು 200 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಗಾಯಾಳುಗಳಿಗೆ ಹೆಚ್ಚಾಗಿ ಮುಖ, ಕೈಗಳು ಮತ್ತು ಹೊಟ್ಟೆಗೆ ಗಾಯಗಳಾಗಿವೆ ಎಂದು ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಹೇಳಿದ್ದಾರೆ.

ಪೇಜರ್ ಗಳು ಸ್ಫೋಟಗೊಂಡಿದ್ದು ಹೇಗೆ?

ಅಂದಹಾಗೆ ಈ ಪೇಜರ್ ಗಳು ರೇಡಿಯೋ ತರಂಗಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಹೆಜ್ಬುಲ್ಲಾ ಆರೋಪಿಸಿರುವಂತೆ ಈ ಪೇಜರ್ ತರಂಗಗಳನ್ನೇ ಇಸ್ರೇಲ್ ತಂತ್ರಜ್ಞರು ಹ್ಯಾಕ್ ಮಾಡಿದ್ದಾರೆ. ಹಾಗೆ ಹ್ಯಾಕ್ ಮಾಡಿದ ನಂತರ, ಅವುಗಳಲ್ಲಿ ಬಳಕೆಯಾಗುವ ಟೆಕ್ಸ್ಟ್ ಮಾದರಿಯ ಡೇಟಾ ಗಳನ್ನು ಸಂಗ್ರಹಿಸಿ ಅವುಗಳಲ್ಲಿ ಯಾರ ಸಂದೇಶಗಳಲ್ಲಿ ಉಗ್ರವಾದಿ ಕೃತ್ಯಗಳಿಗೆ ಸಂಬಂಧಿಸಿದ ಸಂವಹನ ನಡೆಸಿದ್ದಾರೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ.

ಉಗ್ರರು ಬಳಸುತ್ತಿರುವ ಪೇಜರ್ ನಂಬರ್ ಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ. ಬಳಿಕ ಉಗ್ರರದ್ದು ಎಂದು ಪರಿಗಣಿಸಿ ಪಟ್ಟಿ ಮಾಡಲಾದ ಪೇಜರ್ ಗಳನ್ನು ಹ್ಯಾಕ್ ಮಾಡಿ ಅದಕ್ಕೆ ಪ್ರತ್ಯೇಕ ಸಾಫ್ಟ್ ವೇರ್ ಪ್ರೋಗ್ರಾಂ ರಚನೆ ಮಾಡಿ (ಕೋಡಿಂಗ್) ಅದನ್ನು ರಚಿಸಲಾಗಿದೆ. ಈ ಕೋಡಿಂಗ್ ನಲ್ಲಿ ಪ್ರತ್ಯೇಕಗೊಳಿಸಲಾಗಿದ್ದ ಪೇಜ್ ನಂಬರ್ ಗಳನ್ನು ಸೇರಿಸಲಾಗಿದೆ. ಈ ಕೋಡಿಂಗ್ ಗಳು ವೈರಸ್ ನಂತೆ ಕೆಲಸ ಮಾಡಿವೆ ಎಂದು ತಜ್ಞರು ಹೇಳಿದ್ದಾರೆ.

ಉಗ್ರರ ರೀತಿ ಸಂವಹನ ಮಾಡಿದ್ದ ನಂಬರ್ ಗಳ ಪೇಜರ್ ಗಳನ್ನೇ ಟಾರ್ಗೆಟ್ ಆಗುವಂತೆ ವೈರಸ್ ಸಿದ್ಧಪಡಿಸಲಾಗಿದ್ದು, ಪೇಜರ್ ಗಳ ನಡುವೆ ಬಳಸಲಾಗುತ್ತಿದ್ದ ರೇಡಿಯೋ ತರಂಗಗಳ ನೆಟ್ ವರ್ಕ್ ನೊಳಕ್ಕೆ ಸೇರಿಸಿ ಹರಿಬಿಡಲಾಗಿದೆ. ಆಗ, ಅವು ಟಾರ್ಗೆಟ್ ಆಗಿದ್ದ ಪೇಜರ್ ಗಳನ್ನು ಸೇರಿಕೊಂಡು ಕೆಲವೇ ಸೆಕೆಂಡ್ ಗಳಲ್ಲಿ ಆ ಪೇಜರ್ ಗಳಲ್ಲಿದ್ದ ಬ್ಯಾಟರಿಗಳು ವಿಪರೀತ ಹೀಟ್ ಆಗುವಂತೆ ಮಾಡಿವೆ. ಅತಿಯಾದ ಉಷ್ಣಾಂಶದಿಂದ ಪೇಜರ್ ಗಳು ಸ್ಫೋಟಗೊಂಡಿವೆ ಎಂದು ಹೇಳಲಾಗಿದೆ.

Pager Attacks
Pager Attacks: ''ಇಸ್ರೇಲ್ ಗೆ ತಕ್ಕಪಾಠ ಕಲಿಸುತ್ತೇವೆ''; Hezbollah ಉಗ್ರ ಎಚ್ಚರಿಕೆ

ಸ್ಫೋಟಕ್ಕೆ ಪೇಜರ್ ನಲ್ಲೇ ವಿಶೇಷ ಸ್ವಿಚ್?

ಇನ್ನು ಮತ್ತೊಂದು ಮೂಲಗಳ ಪ್ರಕಾರ ತೈವಾನ್ ಮೂಲದ ಪೇಜರ್ ತಯಾರಿಕಾ ಸಂಸ್ಥೆ ತಯಾರಿಸಿರುವ ಪೇಜರ್ ಗಳಲ್ಲಿ ದೂರದಿಂದಲೇ ಅವುಗಳನ್ನು ಸ್ಫೋಟಿಸಲು ನಿಗೂಢ ಮತ್ತು ಪ್ರತ್ಯೇಕ ಸ್ವಿಚ್ ಅನ್ನು ಎಂಬೆಡ್ ಮಾಡಲಾಗಿತ್ತು ಎಂಬ ವಾದ ಕೂಡ ಕೇಳಿಬಂದಿದೆ.

Pager Attacks
ಪೇಜರ್ ಗಳ ಸ್ಫೋಟ: ಲೆಬನಾನ್, ಸಿರಿಯಾದಲ್ಲಿ 9 ಸಾವು; 2800 ಹೆಜ್ಬೊಲ್ಲಾಗಳಿಗೆ ಗಾಯ; Israel ಕೈವಾಡ?

ಹ್ಯಾಕಿಂಗ್ ಭೀತಿಯಿಂದ ಫೋನ್ ಬದಲಿಗೆ ಪೇಜರ್ ಬಳಸುತ್ತಿದ್ದ ಬಂಡುಕೋರರು?

ಈ ಸ್ಮಾರ್ಟ್ ಫೋನ್ ಯುಗದಲ್ಲಿ ಪೇಜರ್ ಏಕೆ ಬಳಸುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ಹ್ಯಾಕಿಂಗ್... ಹೌದು ಫೋನ್ ಗಳನ್ನು ಹ್ಯಾಕ್ ಮಾಡಿ ತಮ್ಮ ಯೋಜನೆಗಳನ್ನು ತಿಳಿಯುತ್ತಾರೆ ಎಂಬ ಭೀತಿಯಿಂದಾಗಿ ಬಂಡುಕೋರರು ಪೇಜರ್ ಗಳನ್ನು ಬಳಸುತ್ತಿದ್ದರು ಎಂದು ಹೇಳಲಾಗಿದೆ. ಪೇಜರ್ ಗಳು ರೇಡಿಯೋ ತರಂಗಗಳ ಆಧಾರದಲ್ಲಿ ಕೆಲಸ ಮಾಡುತ್ತವೆ. ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ತರಂಗಗಳನ್ನು ಬಳಸುತ್ತವೆ. ಮೊಬೈಲ್ ನಲ್ಲಿ ಹರಿದಾಡುವ ದತ್ತಾಂಶಗಳನ್ನು ಅನ್ಯರು ಪರಿಶೀಲಿಸುವುದು ಸುಲಭ.

ಆದರೆ, ರೇಡಿಯೋ ತರಂಗಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಅಲ್ಲಿ ನಡೆಯುವ ಸಂವಹನವನ್ನು ಸಾಮಾನ್ಯ ತಂತ್ರಜ್ಞಾನಗಳಿಂದ ಟ್ರ್ಯಾಕ್ ಮಾಡಿ ಓದಲು ಸಾಧ್ಯವಿಲ್ಲ. ಹಾಗಾಗಿಯೇ ಉಗ್ರರು ಅವುಗಳನ್ನು ಬಳಸುತ್ತಿದ್ದರು. ಅಲ್ಲದೆ ಲೆಬನಾನ್ ನಲ್ಲಿ ಮೊಬೈಲ್ ತಂತ್ರಜ್ಞಾನ ಸಂಹವನದ ಸುರಕ್ಷತೆಗೆ ಅಷ್ಟಾಗಿ ಕ್ರಮಗಳು ಚಾಲ್ತಿಯಲ್ಲಿಲ್ಲ. ಅಲ್ಲಿ ಸಂವಹನ ತರಂಗಗಳ ಸಂರಕ್ಷಣೆಗಾಗಿ ಪ್ರತ್ಯೇಕ ವ್ಯವಸ್ಥೆಯಿಲ್ಲ. ಇದನ್ನು ಮನಗಂಡೇ ಇಸ್ರೇಲ್ ತಂತ್ರಜ್ಞರು ಉಗ್ರರು ಬಳಸುತ್ತಿದ್ದ ರೇಡಿಯೋ ತರಂಗಗಳನ್ನು ಹ್ಯಾಕ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com