ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಅಮೆರಿಕ ಸುಂಕ: ಚೀನಾದೊಂದಿಗೆ ಒಟ್ಟಾಗಿ ನಿಲ್ಲುವಂತೆ ಭಾರತಕ್ಕೆ ಒತ್ತಾಯ!

ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾದ ಚೀನಾ ಮತ್ತು ಯುಎಸ್ ನಡುವಿನ ವ್ಯಾಪಾರ ಯುದ್ಧದ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
PM Modi with china President
ಚೀನಾ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ
Updated on

ನವದೆಹಲಿ: ಅಮೆರಿಕದ ಸುಂಕಗಳಿಂದ ಎದುರಾಗಿರುವ ಸವಾಲುಗಳನ್ನು ನಿವಾರಿಸಲು ಭಾರತ ಮತ್ತು ಚೀನಾ ಒಂದಾಗಬೇಕು ಎಂದು ನವದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿಯ ವಕ್ತಾರ ಯು ಜಿಂಗ್ ಮಂಗಳವಾರ ಹೇಳಿದ್ದಾರೆ.

"ಚೀನಾ ಮತ್ತು ಭಾರತದ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧ ಗುಣಮಟ್ಟ ಮತ್ತು ಪರಸ್ಪರ ಲಾಭದ ಮೇಲೆ ಸ್ಥಾಪಿತವಾಗಿದೆ. ಅಮೆರಿಕದ ಸುಂಕ ದುರುಪಯೋಗ ದಕ್ಷಿಣ ಎರಡು ಪ್ರಬಲ ರಾಷ್ಟ್ರಗಳಾದ ಚೀನಾ, ಭಾರತದ ಅಭಿವೃದ್ಧಿ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ. ಈ ಸವಾಲುಗಳನ್ನು ಎದುರಿಸಲು ಒಗ್ಗಟ್ಟಾಗಿ ನಿಲ್ಲಬೇಕು" ಎಂದು ಅವರು ಹೇಳಿದರು.

ಚೀನಾದ ಆರ್ಥಿಕತೆಯು ಸ್ಥಿರವಾದ ಬೆಳವಣಿಗೆ ಮತ್ತು ಜಾಗತಿಕ ಸಕಾರಾತ್ಮಕ ಪ್ರಯೋಜನಕಾರಿಯಾದ ದೃಢವಾದ ವ್ಯವಸ್ಥೆಯಿಂದ ಬೆಂಬಲಿತವಾಗಿದೆ. ಚೀನಾ ಆರ್ಥಿಕ ಜಾಗತೀಕರಣ ಮತ್ತು ಬಹುಪಕ್ಷೀಯತೆಯನ್ನು ದೃಢವಾಗಿ ಬೆಂಬಲಿಸುತ್ತದೆ, ಇದು ಜಾಗತಿಕ ಆರ್ಥಿಕ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡಿದೆ ಎಂದು ತಿಳಿಸಿದರು.

PM Modi with china President
'ಬೆದರಿಕೆ ತಂತ್ರ'ಕ್ಕೆ ಬಗ್ಗಲ್ಲ, ಅಂತ್ಯದವರೆಗೂ ಹೋರಾಡಲು ಸಿದ್ಧ: ಟ್ರಂಪ್ ಸುಂಕ ಬೆದರಿಕೆಗೆ ಚೀನಾ ತಿರುಗೇಟು

ಪ್ರತಿ ವರ್ಷ ಸರಾಸರಿ ಸುಮಾರು ಶೇ. 30 ರಷ್ಟು ಜಾಗತಿಕ ಬೆಳವಣಿಗೆ ಇದೆ. ವಿಶ್ವ ವ್ಯಾಪಾರ ಸಂಸ್ಥೆ (WTO)ದೊಂದಿಗೆ ಬಹು ರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯನ್ನು ರಕ್ಷಿಸಲು ಚೀನಾ ಜಾಗತಿಕ ಸಮುದಾಯದೊಂದಿಗೆ ಸಹಯೋಗವನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದ್ದಾರೆ

ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾದ ಚೀನಾ ಮತ್ತು ಯುಎಸ್ ನಡುವಿನ ವ್ಯಾಪಾರ ಯುದ್ಧದ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ದುಪ್ಪಟ್ಟು ಸುಂಕದ ಬೆದರಿಕೆ ಹಾಕಿದ ನಂತರ ಚೀನಾ "ಕೊನೆಯವರೆಗೂ ಹೋರಾಡಲು ಪ್ರತಿಜ್ಞೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com