ಪಹಲ್ಗಾಮ್ ದಾಳಿ: ಲಂಡನ್'ನಲ್ಲಿ ಭಾರತೀಯರ ಪ್ರತಿಭಟನೆ; ಕತ್ತು ಸೀಳುವ ಸನ್ನೆ ಮಾಡಿ ಪಾಕ್ ರಾಜತಾಂತ್ರಿಕ ಉದ್ಧಟತನ; Video

ಲಂಡನ್ ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಎಂದು ಅನಿವಾಸಿ ಭಾರತೀಯರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಹೊರ ಬಂದಿರುವ ಪಾಕಿಸ್ತಾನ ರಾಯಭಾರಿ ಅಧಿಕಾರಿ ಸನ್ಹೆ ಮಾಡುವ ಮೂಲಕ ಭಾರತೀಯರಿಗೆ ಬೆದರಿಕೆ ಹಾಕಿದ್ದಾನೆ.
ಭಾರತೀಯರ ಕತ್ತು ಸೀಳುತ್ತೇವೆಂದು ಬೆದರಿಕೆ ಹಾಕುತ್ತಿರುವ ಪಾಕಿಸ್ತಾನದ ರಾಯಭಾರಿ ಅಧಿಕಾರಿ.
ಭಾರತೀಯರ ಕತ್ತು ಸೀಳುತ್ತೇವೆಂದು ಬೆದರಿಕೆ ಹಾಕುತ್ತಿರುವ ಪಾಕಿಸ್ತಾನದ ರಾಯಭಾರಿ ಅಧಿಕಾರಿ.
Updated on

ಲಂಡನ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ದೇಶ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿರೋಧ, ಖಂಡನೆಗಳು ವ್ಯಕ್ತವಾಗುತ್ತಿದ್ದು, ಬೇರೆ ದೇಶಗಳಲ್ಲಿರುವ ಭಾರತೀಯರೂ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದಾರೆ, ಉಗ್ರರನ್ನ ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

ಇದರಂತೆ ಲಂಡನ್ ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಎಂದು ಅನಿವಾಸಿ ಭಾರತೀಯರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಹೊರ ಬಂದಿರುವ ಪಾಕಿಸ್ತಾನ ರಾಯಭಾರಿ ಅಧಿಕಾರಿ ಸನ್ಹೆ ಮಾಡುವ ಮೂಲಕ ಭಾರತೀಯರಿಗೆ ಬೆದರಿಕೆ ಹಾಕಿರುವುದು ಕಂಡು ಬಂದಿದೆ.

ರಾಯಭಾರಿ ಕಚೇರಿ ಬಳಿ ಪ್ರತಿಭಟನೆ ಭುಗಿಲೇಳುತ್ತಿದ್ದಂತೆ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುವ ರಾಜತಾಂತ್ರಿಕ ತೈಮೂರ್‌ ರಹತ್‌ ಭಾರತೀಯರಿಗೆ ಬೆದರಿಕೆ ಹಾಕಿದ್ದಾನೆ.

ಅಭಿನಂದನ್‌ ವರ್ಧಮಾನ್‌ ಅವರ ಫೋಟೋ ಇರುವ ಪೋಸ್ಟರ್‌ನ್ನ ಕೈಯಲ್ಲಿ ಹಿಡಿದುಕೊಂಡಿರುವ ತೈಮೂರ್‌ ʼಭಾರತೀಯರ ಕತ್ತು ಕೊಯ್ಯುತ್ತೇವೆʼ ಎಂದು ಸನ್ನೆ ಮೂಲಕ ತೋರಿಸಿದ್ದಾನೆ.

ಶುಕ್ರವಾರ ಸಂಜೆ ನಡೆದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದ್ದು, ಭಾರತೀಯರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಖಂಡನೆ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ವೇಳೆ ಮಾತನಾಡಿರುವ ಫ್ರೆಂಡ್ಸ್ ಆಫ್ ಇಂಡಿಯಾ ಸೊಸೈಟಿ ಇಂಟರ್ನ್ಯಾಷನಲ್ (FISI) ಯುಕೆ ವಕ್ತಾರರು, ಭಾರತದ ತ್ರಿವರ್ಣ ಧ್ವಜ ಹಿಡಿದು, ಭಯೋತ್ಪಾದನೆ ನಿಲ್ಲಿಸುವಂತೆ ನಾವು ಪ್ರತಿಭಟೆ ನಡೆಸುತ್ತಿದ್ದೇವೆ.

ಕಾಶ್ಮೀರದಲ್ಲಿ ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುವ ಮೂಲಕ ಅಮಾಯಕರ ಹತ್ಯೆ ಮಾಡಲಾಗುತ್ತಿದ್ದು, ಇದನ್ನು ಖಂಡಿಸುತ್ತಿದ್ದೇನೆ. ಇದರ ವಿರುದ್ಧ ಕಠಿಣ ಅಂತರರಾಷ್ಟ್ರೀಯ ಕ್ರಮಕ್ಕೆ ಒತ್ತಾಯಿಸುತ್ತಿದ್ದೇನೆ. ಯುಕೆ ಸರ್ಕಾರವು ಭಾರತದೊಂದಿಗೆ ನಿಲ್ಲುವಂತೆ ಮತ್ತು ಪಾಕಿಸ್ತಾನದ ಬಗ್ಗೆ ತನ್ನ ನೀತಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.

ಪ್ರತಿಭಟನಾ ನಿರತ ಅನಿವಾಸಿ ಭಾರತೀಯರ ಮೇಲೆ ಪಾಕಿಸ್ತಾನದ ರಾಯಭಾರಿ ಅಧಿಕಾರಿ ಕತ್ತು ಸೀಳುವ ಸನ್ಹೆ ಮಾಡಿದ್ದಾರೆ. ಇದು ಸ್ಪಷ್ಟವಾದ ದ್ವೇಷವಲ್ಲದೆ ಬೇರೇನೂ ಅಲ್ಲ. ಅವರ ವರ್ತನೆ ರಾಜತಾಂತ್ರಿಕ ಮಾನದಂಡಗಳು ಮತ್ತು ಮಾನವ ಸಭ್ಯತೆಯ ಅಪಾಯಕಾರಿ ನಿರ್ಲಕ್ಷ್ಯವನ್ನೂ ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಈ ನಡುವೆ ಜನಾಂಗೀಯ ನಿಂದನೆಯ ಆಧಾರದ ಮೇಲೆ ಕೆಲವು ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಬೆನ್ನಟ್ಟಿದ್ದು, ಕನಿಷ್ಠ ಓರ್ವ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಭಾರತೀಯರ ಕತ್ತು ಸೀಳುತ್ತೇವೆಂದು ಬೆದರಿಕೆ ಹಾಕುತ್ತಿರುವ ಪಾಕಿಸ್ತಾನದ ರಾಯಭಾರಿ ಅಧಿಕಾರಿ.
ಪಹಲ್ಗಾಮ್ ಭಯೋತ್ಪಾದಕ ದಾಳಿ: ಜಮ್ಮುವಿನ ಕುಲ್ಗಾಮ್, ಶೋಪಿಯಾನ್ ನಲ್ಲಿ ಶಂಕಿತ ಉಗ್ರರ ಮನೆ ಧ್ವಂಸ; Video

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com